‘ಸಿತಾರೆ ಜಮೀನ್ ಪರ್’: ‘ವೀರೇಶ್’ ಚಿತ್ರಮಂದಿರದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಉಚಿತ ಪ್ರದರ್ಶನ


ಆಮಿರ್ ಖಾನ್ ಮತ್ತು ಜೆನಿಲಿಯಾ ದೇಶಮುಖ್ ಅಭಿನಯದ ಹೃದಯ ಸ್ಪರ್ಶಿ ಚಿತ್ರ ‘ಸಿತಾರೆ ಜಮೀನ್ ಪರ್’, ಬೆಂಗಳೂರಿನ ಮಾಗಡಿ ರಸ್ತೆಯ ‘ವೀರೇಶ್’ ಚಿತ್ರಮಂದಿರದಲ್ಲಿ, ಡೌನ್ ಸಿಂಡ್ರೋಮ್ ಮತ್ತು ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಉಚಿತ ಪ್ರದರ್ಶನ ಕಾಣಿತು.
ಈ ವಿಶೇಷ ಕಾರ್ಯಕ್ರಮ ಜೂನ್ 24ರಂದು ಆಯೋಜಿಸಲಾಗಿದ್ದು, ಮಕ್ಕಳ ಮನಸ್ಸಿನಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಈ ಚಿತ್ರ ಪ್ರದರ್ಶಿಸಲಾಯಿತು ಎಂದು ಮಾಲೀಕ ಕುಶಾಲ್ ಎಲ್.ಸಿ. ಮತ್ತು ಆಯೋಜಕ ಬಿ.ಹೆಚ್. ಉಲ್ಲಾಸ್ ಗೌಡ ಹೇಳಿದರು.
ಚಿತ್ರದ ನಿರ್ದೇಶಕ ಆರ್.ಎಸ್. ಪ್ರಸನ್ನ, ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದು, ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಭಾ.ಮಾ. ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇತ್ತೀಚೆಗಷ್ಟೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಈ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.