ಮೊದಲ ವಾರವೇ ಸಂಜನಾ ಹವಾ – ಎಲ್ಲರ ನಾಮಿನೇಷನ್ ನಡುವೆಯೂ ಕ್ಯಾಪ್ಟನ್ ಪಟ್ಟ ಕೈಸೇರಿತು!


ಬಿಗ್ಬಾಸ್ ತೆಲುಗು ಸೀಸನ್ 9ರ ಮನೆಯಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಸಖತ್ ಹವಾ ಎಬ್ಬಿಸಿದ್ದಾರೆ. ಮೊದಲ ವಾರದಲ್ಲೇ ತಮ್ಮ ಆಕ್ರಮಣಕಾರಿ ಆಟದ ಮೂಲಕ ಮನೆಯ ಸ್ಪರ್ಧಿಗಳ ಗಮನ ಸೆಳೆದಿರುವ ಸಂಜನಾ, ಈಗಾಗಲೇ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಮನೆ ಪ್ರವೇಶಿಸಿದ ಮೊದಲ ದಿನ ಪ್ರೀತಿಯಿಂದ ಎಲ್ಲರೊಂದಿಗೆ ಮಾತನಾಡಿದ ಸಂಜನಾ, ಎರಡನೇ ದಿನದಿಂದಲೇ ತಮ್ಮ ತೀವ್ರವಾದ ಆಟವನ್ನು ಆರಂಭಿಸಿದರು. ಮನೆಯ ಇತರ ಸದಸ್ಯರು ಪ್ರೇಕ್ಷಕರ ಮನಸ್ಸು ಗೆಲ್ಲಲು ಮುಖವಾಡ ಧರಿಸಿದಂತೆ ವರ್ತಿಸುತ್ತಿದ್ದರೆ, ಸಂಜನಾ ಮಾತ್ರ ತಮ್ಮ ಮನಸ್ಸಿಗೆ ಬಂದಂತೆಯೇ ಮಾತನಾಡಿದರು. ಸರಿ-ತಪ್ಪುಗಳ ಬಗ್ಗೆ ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದಲೇ ಮನೆ ಸದಸ್ಯರ ವಿರೋಧಕ್ಕೆ ಗುರಿಯಾದರು.
ಸಾಮೂಹಿಕ ನಾಮಿನೇಷನ್ ವೇಳೆ ಇಡೀ ಮನೆಯೇ ಒಂದಾಗಿ ಸಂಜನಾರನ್ನು ನಾಮಿನೇಟ್ ಮಾಡಿತು. ಆದರೂ ಅವರು ದಣಿಯಲಿಲ್ಲ. ಬದಲಿಗೆ ತಮ್ಮ ಧೈರ್ಯದಿಂದಲೇ ಎದುರಾಳಿ ಸ್ಪರ್ಧಿಗಳನ್ನೇ ಮಣಿಸಿದರು. ತಮಗೆ ತಪ್ಪು ಎನಿಸಿದಾಗ ಕಿರಿಯರಿಂದಲೂ ಕ್ಷಮೆ ಕೇಳುವ ಮಟ್ಟದ ಅಹಂಕಾರವಿಲ್ಲದ ವರ್ತನೆ ತೋರಿಸಿದರು. ಇದೇ ಪ್ರೇಕ್ಷಕರಿಗೆ ಇಷ್ಟವಾದ ಪ್ರಮುಖ ಅಂಶ.
ಸಂಜನಾರ ದಿಟ್ಟ ಆಟವನ್ನು ಬಿಗ್ಬಾಸ್ ಸ್ವತಃ ಮೆಚ್ಚಿಕೊಂಡರು. "ಹೀಗೆಯೇ ಮುಂದುವರಿಸಿ" ಎಂದು ಪ್ರೋತ್ಸಾಹಿಸಿ, ವಿಶೇಷ ಪವರ್ ಸಹ ನೀಡಿ ಗೌರವಿಸಿದರು. ಇದರಿಂದ ಸಂಜನಾರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ವಾರದ ಪ್ರಮುಖ ಟಾಸ್ಕ್‌ನಲ್ಲಿ ಸಂಜನಾರ ಪರವಾಗಿ ಸ್ಪರ್ಧಿಸಿದ್ದ ಶ್ರೀಜಾ ಗೆಲುವು ಸಾಧಿಸಿದರು. ಇದರಿಂದ ಸಂಜನಾ ಮನೆಯಲ್ಲಿ ಮೊದಲ ಕ್ಯಾಪ್ಟನ್ ಆದರು. ಮನೆಯೊಳಗಿನ ಹಲವಾರು ಸದಸ್ಯರಿಗೆ ಇದು ಅಸಮಾಧಾನ ತಂದರೂ, ಪ್ರೇಕ್ಷಕರಲ್ಲಿ ಸಂಜನಾ ಇನ್ನಷ್ಟು ಹೀರೋ ಆಗಿದ್ದಾರೆ.
ಶನಿವಾರದ ಎಪಿಸೋಡ್‌ನಲ್ಲಿ ಹೋಸ್ಟ್ ನಾಗಾರ್ಜುನ ಕೂಡ ಸಂಜನಾರ ಆಟವನ್ನು ಹೊಗಳಿದರು. ಅವರ ಧೈರ್ಯ, ನೇರತನವನ್ನು ಮೆಚ್ಚಿ, “ಹೀಗೆ ಮುಂದುವರಿಸಿ” ಎಂದು ಶ್ಲಾಘಿಸಿದರು. ಜೊತೆಗೆ "ಮೊದಲ ಕ್ಯಾಪ್ಟನ್ ಆಗಿದ್ದಕ್ಕೆ ಭೇಷ್" ಎಂದೂ ಕೊಂಡಾಡಿದರು.
ಇಡೀ ಮನೆಯೇ ತಮ್ಮ ವಿರುದ್ಧ ನಿಂತಾಗಲೂ ಸಂಜನಾ ದಿಟ್ಟತನ ತೋರಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಈ ಹೊತ್ತಿಗೆ ಅವರು ಬಿಗ್ಬಾಸ್ ತೆಲುಗು ಸೀಸನ್ 9ರ ಫೇವರೇಟ್ ಸ್ಪರ್ಧಿ ಆಗಿ ಹೊರಹೊಮ್ಮಿದ್ದಾರೆ. ಈಗಾಗಲೇ ಅವರು ತೋರಿಸಿರುವ ಗೇಮ್ ಪ್ಲಾನ್ ಬಿಗ್ಬಾಸ್ ಮನೆಗೆ ಹೊಸ ಟೇಸ್ಟ್ ನೀಡಿದೆ.
Related posts
Trending News
ಹೆಚ್ಚು ನೋಡಿ“ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ ಅವತ್ತು ನಾನು ಬದುಕಿರೋದಿಲ್ಲ” – ಎಸ್. ನಾರಾಯಣ್ ಭಾವನಾತ್ಮಕ ಪ್ರತಿಕ್ರಿಯೆ
