ದರ್ಶನ್ ಅಂದ್ರೆ ಪ್ರಾಣ, ಕೈ ಮೇಲೆ ಟ್ಯಾಟೂ ಹಾಕಿಕೊಳ್ಳೋಕೂ ಮುಂದಾದರು ಆದ್ರೆ ಆಗಿದ್ದೇನು?


ಕನ್ನಡದ ಖ್ಯಾತ ನಟಿ ಅಂಜಲಿ ಸುಧಾಕರ್ ಅವರನ್ನು ಎಲ್ಲರೂ ಚೆನ್ನಾಗಿ ಬಲ್ಲವರು. ಆದರೆ, ಅವರು ದರ್ಶನ್ ಅಭಿಮಾನಿ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸದೇ ಇದ್ದರೂ, ಅವರ ಮೇಲಿರುವ ಅಭಿಮಾನ ಅಂಜಲಿ ಮಾತುಗಳಲ್ಲಿ ಸ್ಪಷ್ಟವಾಗಿ ತೋರುತ್ತದೆ. ಅಂಜಲಿ ಅವರು ದರ್ಶನ್ ಅಂದ್ರೆ ಪ್ರಾಣ ಎಂದಿದ್ದಾರೆ. ಅಷ್ಟು ಇಷ್ಟವಾಗಿದ್ದರಿಂದಲೇ ಅವರ ಹೆಸರನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಪ್ಲಾನ್ ಮಾಡಿದ್ದರು. ಆದರೆ, ಮಗಳು “ಅಮ್ಮ, ಬೇಡ” ಅಂದಿದ್ದರಿಂದ ಆ ಯೋಚನೆಯನ್ನು ಬಿಟ್ಟಿದ್ದಾರೆ. ಹೀಗಾದರೂ ಅವರ ಅಭಿಮಾನದಲ್ಲಿ ಏನೂ ಕಡಿಮೆ ಆಗಿಲ್ಲ.
ಅಂಜಲಿ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸಮಯದಲ್ಲಿ ದರ್ಶನ್ ಇನ್ನೂ ಇಂಡಸ್ಟ್ರಿಗೆ ಬರಲಿಲ್ಲ. ಮದುವೆ ಆದ ಬಳಿಕ ಅವರು ದುಬೈಗೆ ತೆರಳಿದರು. ಆ ಸಮಯದಲ್ಲಿ ದರ್ಶನ್ ಕನ್ನಡ ಸಿನಿಮಾರಂಗ ಪ್ರವೇಶಿಸಿದರು. ಆದರೆ, ಶೂಟಿಂಗ್ ಸಂದರ್ಭದಲ್ಲಿ ಅಕ್ಕಪಕ್ಕ ಫ್ಲೋರ್‌ನಲ್ಲಿ ಚಿತ್ರೀಕರಣ ನಡೆದ ವೇಳೆ ಇಬ್ಬರು ಭೇಟಿ ಆಗಿ ಮಾತುಕತೆ ನಡೆಸಿದ್ದರು. ಅಂದು ದರ್ಶನ್ ಹೇಳಿದ್ದು “ನೀವು ಎಲ್ಲರೂ ಸೇರಿ ಕಟ್ಟಿದ ಸಿನಿಮಾರಂಗದಲ್ಲಿ ನಾವು ಇದ್ದೇವೆ” ಎಂದು. ಈ ಮಾತು ಅಂಜಲಿಗೆ ತುಂಬಾ ಸ್ಪರ್ಶಿಸಿದೆ. ಅದಾದ ಬಳಿಕ ದರ್ಶನ್‌ರ ಮೇಲಿನ ಗೌರವ, ಅಭಿಮಾನ ಇನ್ನಷ್ಟು ಹೆಚ್ಚಾಗಿದೆ.
ಅಂಜಲಿ ಸುಧಾಕರ್ ಕೆಲ ವರ್ಷಗಳು ದುಬೈಯಲ್ಲಿ ವಾಸಿಸುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳ ಎಜುಕೇಶನ್‌ಗಾಗಿ ಅಲ್ಲಿ ನೆಲೆಸಿದ್ದರು. ದೊಡ್ಡ ಮಗಳು ಡಾಕ್ಟರ್ ಆಗಿ ಲಂಡನ್‌ನಲ್ಲಿ ಇದ್ದಾಳೆ. ಚಿಕ್ಕ ಮಗಳು ಕೂಡ ತನ್ನ ವಿದ್ಯಾಭ್ಯಾಸ ಮುಗಿಸಿಕೊಂಡಿದ್ದಾಳೆ. ಮಕ್ಕಳ ಎಜುಕೇಶನ್ ಪೂರ್ಣವಾದ ಬಳಿಕ, ಪತಿ ಜೊತೆ ಬೆಂಗಳೂರಿಗೆ ವಾಪಸು ಬಂದು ಮತ್ತೆ ಸಿನಿಮಾರಂಗ, ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ.
ಅವರಿಗೆ ಓದುವ ಹವ್ಯಾಸ ಹೆಚ್ಚು. ಕಥೆ, ಕಾದಂಬರಿ, ಬಯೋಗ್ರಫಿ ಪುಸ್ತಕಗಳನ್ನು ಓದುವುದು ಇಷ್ಟ. ದುಬೈಯಿಂದ ವಾಪಸು ಬರುತ್ತಿರುವಾಗ ತಮ್ಮ ಬಳಿ ಇದ್ದ ಎಲ್ಲ ಪುಸ್ತಕಗಳನ್ನು ಅಲ್ಲಿದ್ದ ಆಪ್ತರಿಗೆ ಕೊಟ್ಟು ಬಂದಿದ್ದಾರೆ. ಕಾರಣ ಬೆಂಗಳೂರಿನಲ್ಲಿ ಪುಸ್ತಕ ಸಿಗುತ್ತವೆ, ಆದರೆ ದುಬೈಯಲ್ಲಿ ಸಿಗೋದಿಲ್ಲ. ಹೀಗಾಗಿ ಅಲ್ಲಿ ಇರುವವರ ಓದುವ ಆಸೆ ತಣಿಸಲು ತಮ್ಮ ಪುಸ್ತಕಗಳನ್ನು ಬಿಟ್ಟುಕೊಟ್ಟಿದ್ದಾರೆ.
ನಟಿ ಅಂಜಲಿ ಸುಧಾಕರ್ ಅವರ ಮಾತುಗಳಿಂದ ಒಂದು ವಿಷಯ ಖಚಿತ ಅವರು ನಿಜವಾದ ದರ್ಶನ್ ಅಭಿಮಾನಿ. ಟ್ಯಾಟೂ ಹಾಕಿಸಿಕೊಳ್ಳಲು ಬಯಸಿದ ಅಷ್ಟೂ ಪ್ರೀತಿ, ಅಭಿಮಾನ ದರ್ಶನ್ ಮೇಲಿದ್ದಾರೆ. ಮಗಳ ಕಾರಣಕ್ಕೆ ಕೈ ಮೇಲೆ ಹೆಸರು ಬರೆಸದೇ ಇದ್ದರೂ, ಹೃದಯದಲ್ಲಿ ದರ್ಶನ್ ಮೇಲಿನ ಗೌರವವನ್ನು ಸದಾಕಾಲ ಇರಿಸಿಕೊಂಡಿದ್ದಾರೆ.
Trending News
ಹೆಚ್ಚು ನೋಡಿ“ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ ಅವತ್ತು ನಾನು ಬದುಕಿರೋದಿಲ್ಲ” – ಎಸ್. ನಾರಾಯಣ್ ಭಾವನಾತ್ಮಕ ಪ್ರತಿಕ್ರಿಯೆ
