Back to Top

ಕೆ. ಮಂಜು ನಿರ್ಮಾಣದಲ್ಲಿ ಸ್ಮೈಲ್ ಶ್ರೀನು ಸಿನಿಮಾ

SSTV Profile Logo SStv October 18, 2024
ಸ್ಮೈಲ್ ಶ್ರೀನು ಸಿನಿಮಾ
ಸ್ಮೈಲ್ ಶ್ರೀನು ಸಿನಿಮಾ
ಕೆ. ಮಂಜು ನಿರ್ಮಾಣದಲ್ಲಿ ಸ್ಮೈಲ್ ಶ್ರೀನು ಸಿನಿಮಾ ಅದ್ದೂರಿ ಚಿತ್ರಗಳ ನಿರ್ಮಾಪಕರಾದ ಕೆ. ಮಂಜು ಈಗ ಯುವ ನಿರ್ದೇಶಕ ಸ್ಮೈಲ್ ಶ್ರೀನು ಜೊತೆ ಹೊಸ ಚಿತ್ರಕ್ಕೆ ಕೈಜೋಡಿಸಿದ್ದಾರೆ. ರಾಜಾಹುಲಿ, ಮಾತಾಡ್ ಮಾತಾಡ್ ಮಲ್ಲಿಗೆ ಮುಂತಾದ ಹಿಟ್ ಚಿತ್ರಗಳ ನಿರ್ಮಾಪಕ, ಈ ಬಾರಿ ಸ್ಮೈಲ್ ಶ್ರೀನು ಜೊತೆ ರಾಷ್ಟ್ರಮಟ್ಟದ, ಸಾಮಾಜಿಕ ಕಳಕಳಿಯ ಆಧಾರಿತ ಕಥಾವಸ್ತುವಿನ ಮೇಲೆ ನಿರ್ಧಾರ ಮಾಡಿದ್ದಾರೆ. ಸ್ಮೈಲ್ ಶ್ರೀನು ಕೂಡ ತೂಫಾನ್, 18 to 25 ಮುಂತಾದ ಸಿನಿಮಾವನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದಿದ್ದು, ಹೊಸ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ, ಮತ್ತು ಕಲಾವಿದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.