ಇಶಾನಿ ಹೊಸ “Sway” ಸಾಂಗ್: ಬೋಲ್ಡ್ ಲುಕ್‌ಗಳಿಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!


ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ಇಶಾನಿ ಇದೀಗ “Sway” ಎಂಬ ಹೊಸ ಆಲ್ಬಂ ಸಾಂಗ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ದುಬೈನಲ್ಲಿ ಬೆಳೆದ ಇಶಾನಿ ಈಗ ರ್ಯಾಪರ್ ಆಗಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ 16ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಇಶಾನಿ, ತನ್ನ ಹೊಸ ಹಾಡಿಗೆ ಲಿರಿಕ್ಸ್ ಕೂಡ ಬರೆದಿದ್ದಾರೆ.
“Sway” ಹಾಡಿನಲ್ಲಿ ಇಶಾನಿಯ ಜೊತೆಗೆ ನಟ ಅಭಿದಾಸ್ ಅಭಿನಯಿಸಿದ್ದು, ಅವರBold & Stylish ಲುಕ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಹಾಡಿನ ಗ್ಲಾಮರ್, ಸ್ಟೈಲ್, ಮತ್ತು ಎನರ್ಜಿ ಭರಿತ ನೃತ್ಯ ಸಂಯೋಜನೆಯು ಪ್ರೇಕ್ಷಕರ ಮನ ಸೆಳೆಯುತ್ತಿದೆ. ಫ್ಯಾನ್ಸ್‌ಗಳಂತೂ ಇಶಾನಿ-ಅಭಿದಾಸ್ ಜೋಡಿಯನ್ನು “Fire Pair” ಎನ್ನುತ್ತಿದ್ದಾರೆ.