“ಹೊಂಬಾಳೆ ಫಿಲ್ಮ್ಸ್ ‘ಮಹಾವತಾರ ಯೂನಿವರ್ಸ್’ ಘೋಷಣೆ – ಏಳು ಪೌರಾಣಿಕ ಚಿತ್ರಗಳು!”


ಹೊಂಬಾಳೆ ಫಿಲ್ಮ್ಸ್ ಹೊಸದೊಂದು ಮಹಾಕಾಯ ಯೋಜನೆಗೆ ಕೈ ಹಾಕಿದ್ದು, ಅದರ ಹೆಸರೇ ‘ಮಹಾವತಾರ ಯೂನಿವರ್ಸ್’. ಈ ಸಾಂಸ್ಕೃತಿಕ ಹಾಗೂ ಪೌರಾಣಿಕ ಪ್ರಾಜೆಕ್ಟ್‌ನಲ್ಲಿ ಒಟ್ಟಿಗೆ ಏಳು ಚಿತ್ರಗಳನ್ನು ಘೋಷಿಸಲಾಗಿದೆ. ಇವು ಭಗವಾನ್ ವಿಷ್ಣುವಿನ ಏಳು ಮಹಾವತಾರಗಳನ್ನು ಆಧರಿಸಿದಂತೆ ನಿರ್ಮಿಸಲಾಗುತ್ತಿದೆ.
ಮೊದಲ ಚಿತ್ರ ‘ಮಹಾವತಾರ ನರಸಿಂಹ’ ಜುಲೈ 25, 2025ರಂದು ತೆರೆಗೆ ಬರಲಿದೆ. ನಂತರ ಕ್ರಮವಾಗಿ:
- ಮಹಾವತಾರ ಪರಶುರಾಮ (2027)
- ಮಹಾವತಾರ ರಘುನಂದನ (2029)
- ಮಹಾವತಾರ ದ್ವಾರಕಾದೀಶ (2031)
- ಮಹಾವತಾರ ಗೋಕುಲನಂದ (2033)
- ಮಹಾವತಾರ ಕಲ್ಕಿ 1 (2035)
- ಮಹಾವತಾರ ಕಲ್ಕಿ 2 (2037)
ಇವು ಅನಿಮೇಷನ್ ಅಥವಾ ಫೀಚರ್ ಫಿಲ್ಮ್‌ಗಳಾಗಿರುತ್ತವೆಯೋ ಎಂಬುದರ ಬಗ್ಗೆ ಸ್ಪಷ್ಟತೆ ಇನ್ನೂ ಇಲ್ಲ. ಆದರೆ ಟೀಸರ್‌ಗಳನ್ನಾ ನೋಡಿ ಅಭಿಮಾನಿಗಳು ತೀವ್ರ ನಿರೀಕ್ಷೆಯಲ್ಲಿ ಇದ್ದಾರೆ.
ಪ್ರಭಾಸ್ ನಟನೆಯ ‘ಸಲಾರ್ 2’ ಹೊರತಾಗಿ, ಮಹಾವತಾರ ಸಿನಿಮಾಗಳಲ್ಲಿ ಒಂದು ಚಿತ್ರದಲ್ಲಿ ಅವರು ಭಾಗವಹಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಹರಿದಾಡುತ್ತಿವೆ.