Back to Top

‘ಸಿತಾರೆ ಜಮೀನ್ ಪರ್’ ಸಿನಿಮಾವಿಗೆ 6 ದಿನದಲ್ಲಿ 120 ಕೋಟಿ ರೂಪಾಯಿಗಿಂತ ಹೆಚ್ಚು ಕಲೆಕ್ಷನ್!

SSTV Profile Logo SStv June 26, 2025
ಆಮಿರ್ ಖಾನ್ ಕಮ್‌ಬ್ಯಾಕ್ ಸ್ಪೆಷಲ್
ಆಮಿರ್ ಖಾನ್ ಕಮ್‌ಬ್ಯಾಕ್ ಸ್ಪೆಷಲ್

ಜೂನ್ 20 ರಂದು ಬಿಡುಗಡೆಯಾದ ಆಮಿರ್ ಖಾನ್ ಅಭಿನಯದ ‘ಸಿತಾರೆ ಜಮೀನ್ ಪರ್’ ಸಿನಿಮಾ ಆರ್.ಎಸ್. ಪ್ರಸನ್ನ ನಿರ್ದೇಶನದಲ್ಲಿ ವಿಶ್ವಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ವಿಶೇಷಚೇತನ ಮಕ್ಕಳ ಕುರಿತಾದ ಈ ಚಿತ್ರವು ಕೇವಲ 6 ದಿನಗಳಲ್ಲಿ ₹120 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಭಾರತದಲ್ಲಿ ಈ ಚಿತ್ರದ ಒಟ್ಟು ಕಲೆಕ್ಷನ್ ₹80 ಕೋಟಿ, ಮತ್ತು ವಿದೇಶದಲ್ಲಿ ಉಳಿದ ₹40 ಕೋಟಿ ಗಳಿಕೆ ಜೊತೆಗೆ ಒಟ್ಟು ಕಲೆಕ್ಷನ್ ₹120 ಕೋಟಿ ಮೀರಿದೆ. ಮೊದಲ ದಿನ ಸಾಧಾರಣ ತೆರಿಗೆಯಾದರೂ, ವಾರಾಂತ್ಯದಲ್ಲಿ ಭರ್ಜರಿ ಬಂಪರ್ ಕಲೆಕ್ಷನ್ ಕಂಡಿದೆ – ಶನಿವಾರ ₹19.90 ಕೋಟಿ, ಭಾನುವಾರ ₹26.70 ಕೋಟಿ!

ಇದು ಆಮಿರ್ ಖಾನ್ ಅವರ ಕಮ್‌ಬ್ಯಾಕ್ ಚಿತ್ರವಾಗಿದ್ದು, ಅವರು ತಾವೇ ನಿರ್ಮಾಪಕರಾಗಿದ್ದು, ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಎರಡೂ ಮೆಚ್ಚುಗೆ ಗಳಿಸಿದೆ. ಇದು ಸ್ಪ್ಯಾನಿಶ್ ಚಿತ್ರದ ರಿಮೇಕ್ ಆಗಿದ್ದರೂ ಭಾರತೀಯರ ಮನ ಗೆದ್ದಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಸಚಿನ್ ತೆಂಡುಲ್ಕರ್, ಸುಧಾ ಮೂರ್ತಿ ಮುಂತಾದವರು ಈ ಚಿತ್ರವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದು, ಸಿನಿಮಾ ವಿಭಿನ್ನ ಪ್ರಭಾವ ಬೀರುತ್ತಿದೆ.