“ವೈಷ್ಣವಿ ಗೌಡ ಹನಿಮೂನ್ ಫೋಟೋ ವೈರಲ್: ಸೀತಾರಾಮ ನಟಿಯ ಹೊಸ ಆರಂಭ”


ಜನಪ್ರಿಯ ಧಾರಾವಾಹಿ ನಟಿ ವೈಷ್ಣವಿ ಗೌಡ, ‘ಸೀತಾರಾಮ’, ‘ಅಗ್ನಿಸಾಕ್ಷಿ’, ‘ದೇವಿ’ ಸರಣಿಗಳ ಮೂಲಕ ಮನೆಮಾತಾಗಿರುವ ಅವರು ಇತ್ತೀಚೆಗೆ 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಇಂಡಿಯನ್ ಆರ್ಮಿಯ ಲೆಫ್ಟಿನೆಂಟ್ ಆಗಿರುವ ಅನುಕೂಲ್ ಮಿಶ್ರಾ ಜೊತೆ ವಿವಾಹಿತರಾಗಿದ್ದು, ಮದುವೆ ಸಮಾರಂಭವನ್ನು ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ನೆರವೇರಿಸಿದರು.
ಈ ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಮ್ಯಾಟ್ರಿಮೋನಿಯ ಮೂಲಕ ಪರಿಚಯವಾಗಿತ್ತು. ಈಗ ವೈಷ್ಣವಿ ಅವರು ತಮ್ಮ ಗಂಡನೊಂದಿಗೆ ಉತ್ತರಾಖಂಡದಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅನುಕೂಲ್ ಮಿಶ್ರಾ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ, ವೈಷ್ಣವಿ ಗೌಡ ಕೂಡ ಬೆಂಗಳೂರಿನಲ್ಲಿಯೇ ನೆಲೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮತ್ತೆ ಧಾರಾವಾಹಿ ಅಥವಾ ಸಿನಿಮಾದ ಮೂಲಕ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.