Back to Top

"ಕ್ಯೂ(Q)" ನಾಗಶೇಖರ್ ನಿರ್ಮಾಣ- ನಿರ್ದೇಶನದ ಹೊಸ ಚಿತ್ರ

SSTV Profile Logo SStv September 17, 2024
"ಕ್ಯೂ(Q)" ನಾಗಶೇಖರ್ ನಿರ್ಮಾಣ- ನಿರ್ದೇಶನದ ಹೊಸ ಚಿತ್ರ
"ಕ್ಯೂ(Q)" ನಾಗಶೇಖರ್ ನಿರ್ಮಾಣ- ನಿರ್ದೇಶನದ ಹೊಸ ಚಿತ್ರ
"ಕ್ಯೂ(Q)" ನಾಗಶೇಖರ್ ನಿರ್ಮಾಣ- ನಿರ್ದೇಶನದ ಹೊಸ ಚಿತ್ರ ಭಾಗ್ಯಶ್ರೀ(ಮೈನೆ ಪ್ಯಾರ್ ಕಿಯಾ) ಪುತ್ರಿ ಅವಂತಿಕಾ ದಸ್ಸಾನಿ ನಾಯಕಿ ನಿರಂಜನ್(ಉಪೇಂದ್ರ ಅಣ್ಣನ ಮಗ) ನಾಯಕ ಈಗಾಗಲೇ ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ' ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅದರ ಹಿಂದೆಯೇ ನಾಗಶೇಖರ್ ತಮ್ಮ ಮುಂದಿನ ಪ್ರಾಜೆಕ್ಟನ್ನು ಅನೌನ್ಸ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ೩ ಭಾಷೆಗಳಲ್ಲಿ, ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಆ ಚಿತ್ರದ ಹೆಸರು "ಕ್ಯೂ"(Q). ತಮ್ಮದೇ ಆದ ನಾಗಶೇಖರ್ ಮ್ಯಾಜಿಕ್ಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ನಾಗಶೇಖರ್ ಕಥೆ, ಚಿತ್ರಕಥೆಯ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಸಹ ತಾವೇ ಹೊತ್ತಿದ್ದಾರೆ. ರಾಮ್ ಚಿರು ಲೈನ್ ಪ್ರೊಡ್ಯೂಸರ್ ಆಗಿರುವ ಈ ಚಿತ್ರವನ್ನು ಭಾವನಾ ರವಿ ಅವರು ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ನಾಗಶೇಖರ್ ಅವರು, ಮೈನೆ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ ಅವರನ್ನು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಉಪೇಂದ್ರ ಅಣ್ಣನ ಪುತ್ರ ನಿರಂಜನ್ ಚಿತ್ರದ ನಾಯಕ. ಮುಂದಿನ ತಿಂಗಳಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಡಿ.ಜೆ. ಚಕ್ರವರ್ತಿ ಸಂಭಾಷಣೆ ರಚಿಸಿದ್ದಾರೆ.