'ಕರ್ಣ' ವಿವಾದದ ಬಳಿಕ ಭವ್ಯಾ ಗೌಡ ಮೈಸೂರಿನಲ್ಲಿ ಪ್ರತ್ಯಕ್ಷ! 'ಗೀತಾ' ನಟಿಯ ಹೊಸ ಅಧ್ಯಾಯ


ಕನ್ನಡ ಕಿರುತೆರೆಯಲ್ಲಿ ಚಿರಪರಿಚಿತವಾದ ‘ಗೀತಾ’ ಧಾರಾವಾಹಿಯ ಖ್ಯಾತಿ ನಟಿ ಭವ್ಯಾ ಗೌಡ, 'ಕರ್ಣ' ಧಾರಾವಾಹಿಯ ವಿವಾದದ ಬಳಿಕ ಎಲ್ಲೆಂದರಲ್ಲಿ ಕಾಣಿಸಿಕೊಳ್ಳದೇ ಇದ್ದರು. ಈ ವಿವಾದವು ಜೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್ ಮತ್ತು ಭವ್ಯಾ ಗೌಡ ನಡುವಿನ ಒಪ್ಪಂದ ಉಲ್ಲಂಘನೆಯಿಂದ ಉಂಟಾದದ್ದು. ಹೀಗಾಗಿ ಕೋರ್ಟ್ ಕೇಸ್ ನಡೆದು ‘ಕರ್ಣ’ ಧಾರಾವಾಹಿಗೆ ಸ್ಟೇ ಆರ್ಡರ್ ಜಾರಿಯಾಯಿತು.
ವಿವಾದದ ಬಳಿಕ ಭವ್ಯಾ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡದೇ ಇರುವುದು ಗಮನ ಸೆಳೆದಿತ್ತು. ಆದರೆ ಈಗ, ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಅವರು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ಸ್ಟೇಟಸ್‌ನಲ್ಲಿ “Trust the Process” ಎಂದು ಬರೆದಿರುವ ಭವ್ಯಾ, ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಹೋದರಿ ದಿವ್ಯಾ ಗೌಡ ಜತೆ ಮೈಸೂರಿಗೆ ತೆರಳಿರುವ ಭವ್ಯಾ ಅವರು ದೇವಾಲಯದ ಬಳಿ ತೆಗೆದ ಫೋಟೋವನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಲ್ಲಿ ಆಶ್ಚರ್ಯ ಮತ್ತು ಉತ್ಸಾಹವನ್ನು ಮೂಡಿಸಿದೆ.
ಇನ್ನು ‘ಕರ್ಣ’ ಧಾರಾವಾಹಿಯ ಹಂಗಾಮಾ ಮುಂದುವರಿದಿದ್ದು, ಕಿರಣ್ ರಾಜ್ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಮೆಡಿಕಲ್ ಸ್ಟೂಡೆಂಟ್ ಪಾತ್ರದಲ್ಲಿ ಭವ್ಯಾ ಗೌಡ ಇದ್ದಾರೆ. ಅವರ ಅಕ್ಕನ ಪಾತ್ರದಲ್ಲಿ ನಮ್ರತಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸೀರಿಯಲ್ ಪ್ರಸಾರದ ಕುರಿತು ಇನ್ನೂ ಸ್ಪಷ್ಟತೆ ಬಂದಿಲ್ಲ.