Back to Top

ದೇಹದಾನ, ಅಂಗಾಂಗದಾನಕ್ಕೆ ಮುಂದಾದ ಯುವ ನಟ ರಾಜವರ್ಧನ್ – ಸಮಾಜಕ್ಕೆ ಮಾದರಿ!

SSTV Profile Logo SStv September 1, 2025
ಯುವ ನಟ ರಾಜವರ್ಧನ್ ಹೃದಯ ಸ್ಪರ್ಶಿ ನಿರ್ಧಾರ
ಯುವ ನಟ ರಾಜವರ್ಧನ್ ಹೃದಯ ಸ್ಪರ್ಶಿ ನಿರ್ಧಾರ

ಕನ್ನಡದ ಯುವ ನಟ ರಾಜವರ್ಧನ್ ದೇಹದಾನ ಹಾಗೂ ಅಂಗಾಂಗದಾನ ಮಾಡಲು ತೀರ್ಮಾನಿಸಿದ್ದು, ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಬಿಜಿಎಸ್ ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಅಲ್ಲೇ ದೇಹದಾನ ಮತ್ತು ಅಂಗಾಂಗದಾನ ಮಾಡುವುದಾಗಿ ಘೋಷಿಸಿದರು.

ಈ ಹಿಂದೆ ದಿವಂಗತ ನಟ ಲೋಕೇಶ್ ದೇಹದಾನ ಮಾಡಿದ್ದರು. ಅದೇ ರೀತಿ ಪುನೀತ್‌ ರಾಜ್‌ಕುಮಾರ್ ನೇತ್ರದಾನ ಮಾಡಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದರು. ಇದೇ ಹಾದಿಯಲ್ಲಿ ರಾಜವರ್ಧನ್ ಮುಂದುವರಿದಿದ್ದಾರೆ.

ಗಮನಾರ್ಹವಾಗಿ, ರಾಜವರ್ಧನ್ ತಂದೆ ಡಿಂಗ್ರಿ ನಾಗರಾಜ್ ಕೂಡ ದೇಹದಾನ ಮಾಡಿ ಸಮಾಜದಲ್ಲಿ ಮಾದರಿಯಾಗಿದ್ದರು. ಇದೀಗ ಮಗನೂ ತಂದೆಯ ಹೆಜ್ಜೆಹಿಡಿದಿದ್ದಾರೆ.