Back to Top

ಮಸಾಯಿ ಮಾರಾದಲ್ಲಿ ಕಂಗೊಳಿಸಿದ ‘ಮುಂಗಾರು ಮಳೆ’ ನಟಿ – ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದ ಪೂಜಾ ಗಾಂಧಿ!

SSTV Profile Logo SStv September 10, 2025
ಪತಿ ವಿಜಯ್ ಜೊತೆ ಆಫ್ರಿಕಾ ಪ್ರವಾಸಕ್ಕೆ ಹಾರಿದ ಪೂಜಾ ಗಾಂಧಿ
ಪತಿ ವಿಜಯ್ ಜೊತೆ ಆಫ್ರಿಕಾ ಪ್ರವಾಸಕ್ಕೆ ಹಾರಿದ ಪೂಜಾ ಗಾಂಧಿ

‘ಮುಂಗಾರು ಮಳೆ’ ಚಿತ್ರದ ಮೂಲಕ ಕನ್ನಡದಲ್ಲಿ ಮನೆಮಾತಾದ ನಟಿ ಪೂಜಾ ಗಾಂಧಿ, ಈಗ ತಮ್ಮ ವೈಯಕ್ತಿಕ ಬದುಕಿನಲ್ಲೂ ಹೊಸ ಅನುಭವಗಳನ್ನ ಅನುಭವಿಸುತ್ತಿದ್ದಾರೆ. 2023ರಲ್ಲಿ ಉದ್ಯಮಿ ವಿಜಯ್ ಘೋರ್ಪಡೆ ಅವರನ್ನು ವಿವಾಹವಾದ ಬಳಿಕ, ಪೂಜಾ ಗಾಂಧಿ ತಮ್ಮ ಪತಿಯ ಜೊತೆ ಜಗತ್ತಿನ ಹಲವು ಸುಂದರ ತಾಣಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈಗ ಅವರು ಆಫ್ರಿಕಾ ಪ್ರವಾಸದಲ್ಲಿದ್ದಾರೆ.

ಕವಿ ಶೈಲ, ಅಮೃತಸರ, ಟೋಕ್ಯೋ ಸೇರಿದಂತೆ ಹಲವು ತಾಣಗಳನ್ನು ಈಗಾಗಲೇ ಸುತ್ತಿದ ದಂಪತಿ, ಇದೀಗ ಕೀನ್ಯಾ ಮತ್ತು ತಾಂಜೇನಿಯಾಗೆ ಪ್ರಯಾಣಿಸಿದ್ದಾರೆ. ಆಫ್ರಿಕಾದ ಅತ್ಯಂತ ಪ್ರಸಿದ್ಧ ಸಫಾರಿ ತಾಣವಾದ ಮಸಾಯಿ ಮಾರಾ ನ್ಯಾಷನಲ್ ರಿಸರ್ವ್ ಈ ದಂಪತಿಯ ಇತ್ತೀಚಿನ ಪ್ರವಾಸದ ಪ್ರಮುಖ ಗಮ್ಯವಾಗಿದೆ.

ಮಸಾಯಿ ಮಾರಾ ಪ್ರಪಂಚದ ಅತ್ಯಂತ ಪ್ರಸಿದ್ಧ ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದು. ಪ್ರತಿವರ್ಷ ಸಾವಿರಾರು ವೈಲ್ಡ್ ಬೀಸ್ಟ್‌ಗಳು ಮತ್ತು ಝೀಬ್ರಾಗಳು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುವುದನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದೇ ಅದ್ಭುತ ನೈಸರ್ಗಿಕ ದೃಶ್ಯವನ್ನು ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ನೇರವಾಗಿ ಕಣ್ತುಂಬಿಕೊಂಡಿದ್ದಾರೆ.

ಸಫಾರಿ ವೇಳೆ ಪೂಜಾ ಗಾಂಧಿ ತೆಗೆದುಕೊಂಡ ಸೆಲ್ಫಿಗಳು, ಪತಿ ವಿಜಯ್ ಜೊತೆ ಹಂಚಿಕೊಂಡ ಕ್ಷಣಗಳು ಮತ್ತು ಕೀನ್ಯಾ-ತಾಂಜೇನಿಯಾ ಬಾರ್ಡರ್‌ನಲ್ಲಿ ತೆಗೆದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮಸಾಯಿ ಮಾರಾದೊಂದಿಗೆ, ದಂಪತಿ ಜಂಜಿಬಾರ್ ಬೀಚ್ಗೂ ಭೇಟಿ ನೀಡಿ ರೋಮ್ಯಾಂಟಿಕ್ ಸಮಯ ಕಳೆಯುತ್ತಿದ್ದಾರೆ.

ಮದುವೆಯಾದ ನಂತರ ಪೂಜಾ ಗಾಂಧಿ ಸಿನಿಮಾರಂಗದಿಂದ ಸ್ವಲ್ಪ ವಿರಾಮ ಪಡೆದಿದ್ದಾರೆ. ಆದರೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಹೊಸ ಹೊಸ ಅನುಭವಗಳನ್ನು ಮಾಡಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಆಫ್ರಿಕಾ ಪ್ರವಾಸದಲ್ಲಿ ವನ್ಯಜೀವಿ ಸಫಾರಿ ಮತ್ತು ವೈಲ್ಡ್ ಬೀಸ್ಟ್ ಮೈಗ್ರೇಷನ್ ಕಣ್ತುಂಬಿಕೊಂಡಿರುವ ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ದಂಪತಿ ತಮ್ಮ ಜೀವನದ ಮರೆಯಲಾರದ ನೆನಪುಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಅವರ ಫೋಟೋಗಳು ಅಭಿಮಾನಿಗಳಲ್ಲೂ ಟ್ರಾವೆಲ್ ಗೋಲ್ಸ್ ಹುಟ್ಟಿಸುತ್ತಿವೆ ಎಂದೇ ಹೇಳಬಹುದು.