Back to Top

ತ್ರಯಂಬಕೇಶ್ವರದಿಂದ ಕೇದಾರನಾಥವರೆಗೆ ಭಕ್ತಿ ಪಯಣ ಆರಂಭಿಸಿದ ಕಾರುಣ್ಯ ರಾಮ್

SSTV Profile Logo SStv September 10, 2025
ಕೇದಾರನಾಥನ ದರ್ಶನ ಪಡೆದು ಆತ್ಮತೃಪ್ತಿ ಕಂಡ ಕಾರುಣ್ಯ ರಾಮ್
ಕೇದಾರನಾಥನ ದರ್ಶನ ಪಡೆದು ಆತ್ಮತೃಪ್ತಿ ಕಂಡ ಕಾರುಣ್ಯ ರಾಮ್

ಕನ್ನಡ ನಟಿ ಹಾಗೂ ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ಕಾರುಣ್ಯ ರಾಮ್ ಇತ್ತೀಚಿಗೆ ತಮ್ಮ ಬದುಕಿನಲ್ಲಿ ಹೊಸ ಸಂಕಲ್ಪ ಮಾಡಿಕೊಂಡಿದ್ದಾರೆ. ಚಿತ್ರರಂಗ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು, ಈಗ ಧಾರ್ಮಿಕ ಪ್ರವಾಸಕ್ಕೆ ಕಾಲಿಟ್ಟಿದ್ದಾರೆ. ಶಿವಭಕ್ತೆಯಾದ ಕಾರುಣ್ಯ ರಾಮ್, ಮುಂಬರುವ ಯುಗಾದಿಗೂ ಮುನ್ನ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ನಿರ್ಧಾರ ಮಾಡಿದ್ದಾರೆ. ಅಲ್ಲದೆ, ದೇಶಾದ್ಯಂತ ಇರುವ 18 ಶಕ್ತಿಪೀಠಗಳಿಗೂ ಭೇಟಿ ನೀಡುವ ಗುರಿ ಹೊಂದಿದ್ದಾರೆ.

ತ್ರಯಂಬಕೇಶ್ವರ ಜ್ಯೋತಿರ್ಲಿಂಗ ದರ್ಶನ ಪಡೆದ ಬಳಿಕ, ಈಗ ಅವರು ಕೇದಾರನಾಥ ಯಾತ್ರೆಗೆ ತೆರಳಿದ್ದಾರೆ. ಉತ್ತರಾಖಂಡದ ಹಿಮಾಲಯ ಪರ್ವತಶ್ರೇಣಿಯ ಮಂದಾಕಿನಿ ನದಿಯ ತಟದಲ್ಲಿ 3,583 ಮೀಟರ್ ಎತ್ತರದಲ್ಲಿ ಇರುವ ಈ ದೇಗುಲವನ್ನು ತಲುಪಲು ಅವರು ಭಾರಿ ಚಳಿ ನಡುವೆ ಚಾರಣ ಕೈಗೊಂಡಿದ್ದರು.

ಕೇದಾರನಾಥ ದರ್ಶನ ಪಡೆದ ಬಳಿಕ ಕಾರುಣ್ಯ ರಾಮ್ ತಮ್ಮ ಯಾತ್ರೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಫೋಟೋಗಳನ್ನು ಮೆಚ್ಚಿ, ಅವರ ಭಕ್ತಿ ಹಾಗೂ ಸಂಕಲ್ಪವನ್ನು ಶ್ಲಾಘಿಸಿದ್ದಾರೆ.

ನಟನೆಯಿಂದ ಸ್ವಲ್ಪ ಬ್ರೇಕ್ ಪಡೆದು, ಧಾರ್ಮಿಕ ಯಾತ್ರೆಯಲ್ಲಿ ತೊಡಗಿರುವ ಕಾರುಣ್ಯ ರಾಮ್, ಈ ಪ್ರವಾಸವು ಅವರಿಗೆ ಆತ್ಮತೃಪ್ತಿ ಹಾಗೂ ಮನಸ್ಸಿಗೆ ಶಾಂತಿ ನೀಡುತ್ತಿದೆ ಎಂದು ಹೇಳಿದ್ದಾರೆ.

ಕಾರುಣ್ಯ ರಾಮ್‌ ಅವರ ಈ ಧಾರ್ಮಿಕ ಪಯಣವು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದು, ಅವರು ತಮ್ಮ ಸಂಕಲ್ಪವನ್ನು ಯಶಸ್ವಿಯಾಗಿ ಪೂರೈಸಲಿ ಎಂಬ ಹಾರೈಕೆಗಳು ಹರಿದು ಬರುತ್ತಿವೆ.