Back to Top

"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

SSTV Profile Logo SStv September 10, 2025
ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು
ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ವಿಚಾರಣೆ ವೇಳೆ ಭಾವುಕರ ಮನವಿ ಮಾಡಿದ್ದು, ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸದ್ಯವಿರುವ ದರ್ಶನ್, ವಿಚಾರಣೆಯ ವೇಳೆ ನ್ಯಾಯಾಧೀಶರ ಮುಂದೆ “ಸೂರ್ಯನ ಬೆಳಕು ನೋಡದೆ ಒಂದು ತಿಂಗಳಾಗಿದೆ. ಕೈಯೆಲ್ಲಾ ಫಂಗಸ್ ಬಂದಿದೆ. ನನಗೆ ಸ್ವಲ್ಪ ವಿಷ ಕೊಡಿ” ಎಂದು ಮನಕಲಕುವ ಮಾತುಗಳನ್ನು ಹೇಳಿದರು.

ಈ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಅನೇಕರು ದರ್ಶನ್ ಅವರ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಾಹಿತಿ ವಿ. ನಾಗೇಂದ್ರ ಪ್ರಸಾದ್, “ಹೀರೋ ಅಂದರೆ ತೆರೆ ಮೇಲೆ ಹೀರೋ. ಆದರೆ ಅವರ ರಿಯಲ್ ಲೈಫ್‌ನಲ್ಲಿ ಅವರು ಕೂಡ ಮನುಷ್ಯರು. ಭಾವನೆಗಳು, ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ದರ್ಶನ್‌ಗೆ ಇಂತಹ ಕಷ್ಟದ, ಹಿಂಸೆಯ ಪರಿಸ್ಥಿತಿ ಬರಬಾರದು, ಆದರೆ ಬಂದಿದೆ. ಏನೂ ಹೇಳೋಕಾಗಲ್ಲ” ಎಂದು ಮನನೊಂದುಕೊಂಡಿದ್ದಾರೆ.

ಅವರು ಇನ್ನಷ್ಟು ವಿವರಿಸುತ್ತಾ, “108 ದಿನ ಅಣ್ಣಾವ್ರು ಕಾಡಿನಲ್ಲಿ ಇದ್ದರು. ಅವರ ಪರಿಸ್ಥಿತಿ ಅನಿಶ್ಚಿತತೆಯಲ್ಲಿತ್ತು. ಹಾಗೆಯೇ ದರ್ಶನ್ ಅವರ ಪರಿಸ್ಥಿತಿಯೂ ಕಠಿಣ. ಕೊಡಬೇಕಾದ ಸೌಲಭ್ಯಗಳು ಸಿಗದೆ ಅವರ ಮನಸ್ಸಿಗೆ ಧಕ್ಕೆ ಆಗುತ್ತಿದೆ. ಜೈಲು ಮನುಷ್ಯನನ್ನು ಬದಲಿಸುತ್ತದೆ, ವೀಕ್ ಮಾಡುತ್ತದೆ. ಆದರೆ ಅವರ ಬಳಿ ಸಾಕಷ್ಟು ಜನರ ಬೆಂಬಲವಿದೆ. ಇದು ಸಹ ಸರಿಹೋಗುತ್ತದೆ” ಎಂದಿದ್ದಾರೆ.

ವಿ. ನಾಗೇಂದ್ರ ಪ್ರಸಾದ್ ದರ್ಶನ್ ವ್ಯಕ್ತಿತ್ವವನ್ನು ಬಿಚ್ಚಿಟ್ಟುಕೊಳ್ಳುತ್ತಾ, “ಅವರು ಮೆಂಟಲಿ ತುಂಬಾ ಸ್ಟ್ರಾಂಗ್. ಆದರೆ ಎಮೋಷನಲಿ ತುಂಬಾ ವೀಕ್. ಭಾವನಾತ್ಮಕವಾಗಿ ತುಂಬಾ ಕನೆಕ್ಟ್ ಆಗುವ ವ್ಯಕ್ತಿ. ಆದಷ್ಟು ಬೇಗ ಅವರು ಈ ಸಂಕಷ್ಟದಿಂದ ಹೊರಬರಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ. ಅಲ್ಲದೆ, ಡಿಸೆಂಬರ್ ತಿಂಗಳು ದರ್ಶನ್ ಹಾಗೂ ಕನ್ನಡ ಚಿತ್ರರಂಗಕ್ಕೆ ಸದಾ ಲಕ್ಕಿ ಮಾಸ ಎಂದು ಅವರು ಉಲ್ಲೇಖಿಸಿದರು.

“ʻಮುಂಗಾರು ಮಳೆʼ ಕೂಡ ಡಿಸೆಂಬರ್ ಕೊನೆಯ ವಾರದಲ್ಲಿ ರಿಲೀಸ್ ಆಗಿತ್ತು. ʻವರಮಹಾಲಕ್ಷ್ಮಿʼ ಹಬ್ಬದ ದಿನವನ್ನು ಲಕ್ಕಿ ಡೇ ಅಂತ ಕರೀತಾರೆ. ಈ ಡಿಸೆಂಬರ್ ಕೂಡ ದರ್ಶನ್‌ಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ” ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.

ದರ್ಶನ್ ವಿಚಾರಣೆಯ ವೇಳೆ ಮಾಡಿದ “ನನಗೆ ಸ್ವಲ್ಪ ವಿಷ ಕೊಡಿ” ಎಂಬ ಮನವಿ, ಅಭಿಮಾನಿಗಳ ಹೃದಯವನ್ನೇ ಕಿತ್ತುಕೊಂಡಂತಾಗಿದೆ. ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ಮಾತುಗಳು ದರ್ಶನ್ ಅವರ ಆಂತರಿಕ ಹೋರಾಟವನ್ನು ತೋರಿಸುತ್ತವೆ. ಜೈಲು ಜೀವನದ ಕಷ್ಟ, ಭಾವನಾತ್ಮಕ ಒತ್ತಡ – ಎಲ್ಲವನ್ನೂ ಎದುರಿಸುತ್ತಿರುವ ದರ್ಶನ್ ಶೀಘ್ರದಲ್ಲೇ ಸಂಕಷ್ಟದಿಂದ ಹೊರಬಂದು ತಮ್ಮ ಅಭಿಮಾನಿಗಳ ಹೃದಯದಲ್ಲಿ ಮತ್ತೆ ನಗು ಮೂಡಿಸಲಿ ಎಂಬುದು ಚಿತ್ರರಂಗದ ಹಾರೈಕೆ.