Back to Top

ಶ್ರೀ ಗೋಕುಲಂ ಮೂವೀಸ್ ಬ್ಯಾನರ್‌ನಲ್ಲಿ ಪ್ಯಾನ್‌ ಇಂಡಿಯನ್‌ ‘ಕಿಲ್ಲರ್’ ಸಿನಿಮಾ ಘೋಷಣೆ!

SSTV Profile Logo SStv June 27, 2025
ಶ್ರೀ ಗೋಕುಲಂ ಮೂವೀಸ್ ಬ್ಯಾನರ್‌ನಲ್ಲಿ ಪ್ಯಾನ್‌ ಇಂಡಿಯನ್‌ ‘ಕಿಲ್ಲರ್’ ಸಿನಿಮಾ ಘೋಷಣೆ!
ಶ್ರೀ ಗೋಕುಲಂ ಮೂವೀಸ್ ಬ್ಯಾನರ್‌ನಲ್ಲಿ ಪ್ಯಾನ್‌ ಇಂಡಿಯನ್‌ ‘ಕಿಲ್ಲರ್’ ಸಿನಿಮಾ ಘೋಷಣೆ!

ಹತ್ತು ವರ್ಷಗಳ ನಂತರ, ತಮಿಳಿನ ಹೆಸರಾಂತ ನಿರ್ದೇಶಕ ಹಾಗೂ ನಟ ಎಸ್. ಜೆ. ಸೂರ್ಯ ಮತ್ತೆ ಡೈರೆಕ್ಟರ್‌ ಟೋಪಿ ತೊಟ್ಟು ಬಹುಮುಖ್ಯವಾದ ಹೊಸ ಸಿನಿಮಾದ ಮೂಲಕ ವಾಪಸ್ಸಾಗುತ್ತಿದ್ದಾರೆ. ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ, ಗೋಕುಲಂ ಗೋಪಾಲನ್ ಮತ್ತು ಅಂಜೆಲ್ ಸ್ಟುಡಿಯೋಸ್ (ಎಸ್. ಜೆ. ಸೂರ್ಯ ಒಡೆತನದ) ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ‘ಕಿಲ್ಲರ್’ ಎಂದು ಶೀರ್ಷಿಕೆ ಇಡಲಾಗಿದೆ.

"ವಾಲಿ", "ಖುಷಿ" ಮತ್ತು "ನ್ಯೂ" ಎಂಬ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಎಸ್. ಜೆ. ಸೂರ್ಯ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಿ. ಸಿ. ಪ್ರವೀಣ್ ಮತ್ತು ಬೈಜು ಗೋಪಾಲನ್ ಈ ಚಿತ್ರದ ಸಹ-ನಿರ್ಮಾಪಕರಾಗಿದ್ದಾರೆ. ಕೃಷ್ಣಮೂರ್ತಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.

‘ಕಿಲ್ಲರ್’ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ದೇಶದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಲಿರುವ ಈ ಚಿತ್ರದಲ್ಲಿ, ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು ಹಾಗೂ ತಾಂತ್ರಿಕ ತಂಡ ಇರಲಿದೆ. ಚಿತ್ರದ ಕುರಿತಾಗಿ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆ. ಇನ್ನು ಶ್ರೀ ಗೋಕುಲಂ ಮೂವೀಸ್ ಸಂಸ್ಥೆಯು ಮಲಯಾಳಂ ಚಿತ್ರರಂಗದಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡುತ್ತಿದೆ. ಸುರೇಶ್ ಗೋಪಿ ಅಭಿನಯದ "ಒಟ್ಟಕೋಂಬನ್", ಜಯಸೂರ್ಯ ಅಭಿನಯದ "ಕಥನಾರ್", ದಿಲೀಪ್ ಅಭಿನಯದ "ಭಾ ಭಾ ಬಾ" ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದೆ. ಇದೀಗ "ಕಿಲ್ಲರ್‌" ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದೆ.