"ತಿಂಗಳ ಹಿಂದೆಯೇ ಮದುವೆ ನಿಶ್ಚಯ, ತಡವಾಗಿ ಸುದ್ದಿ ಗೊತ್ತಾಗಿದೆ ಅಷ್ಟೆ" – ಚಿಕ್ಕಣ್ಣ ಸ್ಪಷ್ಟನೆ


ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಅವರ ಮದುವೆ ಫಿಕ್ಸ್ ಆಗಿದ್ದು, ಈ ಸುದ್ದಿ ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ. ಆಗಸ್ಟ್ 31ರಂದು ಇದ್ದಕ್ಕಿದ್ದಂತೆ ವೈರಲ್ ಆದ ಕೆಲವು ಫೋಟೋಗಳ ಮೂಲಕ ಈ ವಿಷಯ ಬಹಿರಂಗವಾಗಿದೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಎಂಬುವವರ ಜೊತೆ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ ಈಗಾಗಲೇ ಮದುವೆ ಮಾತುಕತೆ ಮುಗಿದು, ಹೂಮುಡಿಸುವ ಶಾಸ್ತ್ರ ನೆರವೇರಿದೆ.
ಶೀಘ್ರದಲ್ಲೇ ನಿಶ್ಚಿತಾರ್ಥ ಸಮಾರಂಭವೂ ನಡೆಯಲಿದ್ದು, ಮದುವೆ ದಿನಾಂಕವನ್ನು ಬೇಗನೆ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.
ಮದುವೆಯ ವಿಷಯ ಬಹಿರಂಗವಾದ ನಂತರ ಮಾತನಾಡಿದ ಚಿಕ್ಕಣ್ಣ, “ತಿಂಗಳ ಹಿಂದೆಯೇ ನಮ್ಮ ಮದುವೆ ನಿಶ್ಚಿತವಾಗಿತ್ತು. ಹೂಮುಡಿಸುವ ಶಾಸ್ತ್ರ ನಡೆದಿತ್ತು. ತಡವಾಗಿ ವಿಷಯ ಗೊತ್ತಾಗಿದೆ. ನಿನ್ನೆ ಬರ್ತ್‌ಡೇ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಯಾರೋ ಫೋಟೋ ಹಿಡಿದು ವೈರಲ್ ಮಾಡಿದ್ದಾರೆ,” ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ, "ಪಾವನಾ ಒಬ್ಬ ಉದ್ಯಮಿ. ಬಯೋ ಡಿ ಕಾಂಪೋಸಬಲ್ ಮೆಟೀರಿಯಲ್ ಡಿಸ್ಟ್ರಿಬ್ಯೂಟರ್ ಆಗಿ ಗುರುತಿಸಿಕೊಂಡಿದ್ದಾರೆ. ಹಿರಿಯರೇ ನೋಡಿ ನಿಶ್ಚಯಿಸಿರುವ ಮದುವೆ ಇದು," ಎಂದು ತಿಳಿಸಿದ್ದಾರೆ.
ಮೈಸೂರಿನ ಬಲ್ಲಹಳ್ಳಿಯ ಮೂಲದ ಚಿಕ್ಕಣ್ಣ, ಮೊದಲಿಗೆ ಹಾಸ್ಯ ಕಾರ್ಯಕ್ರಮಗಳ ಮೂಲಕ ಪರಿಚಯ ಹೊಂದಿದರು. ಬಳಿಕ ಜೀ-ಕನ್ನಡದ "ಕಾಮಿಡಿ ಕಿಲಾಡಿಗಳು" ಶೋ ಮೂಲಕ ಮನೆಮಾತಾದರು. ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಜೊತೆ ಸ್ಕಿಟ್ ಮಾಡಿ ಪ್ರೇಕ್ಷಕರ ಮನ ಗೆದ್ದರು. ನಂತರ ‘ಕಿರಾತಕ’ ಚಿತ್ರದಿಂದ ಸಿಲ್ವರ್ ಸ್ಕ್ರೀನ್‌ಗೆ ಎಂಟ್ರಿ ನೀಡಿದ ಚಿಕ್ಕಣ್ಣ, ಇಂದಿಗೆ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಲಕ್ಕಿ, ರಾಜಾಹುಲಿ, ಬುಲ್ ಬುಲ್, ವಿಕ್ಟರಿ, ಅಧ್ಯಕ್ಷ, ರುದ್ರ ತಾಂಡವ, ರನ್ನ, ನಟಸಾರ್ವಭೌಮ, ಉಪಾಧ್ಯಕ್ಷ, ಛೂ ಮಂತರ್, ಫಾರೆಸ್ಟ್ ಸೇರಿವೆ.
ಸ್ಟಾರ್ ನಟರಾದ ದರ್ಶನ್, ಸುದೀಪ್, ಯಶ್, ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡು ತಮ್ಮದೇ ಆದ ಕಾಮಿಡಿ ಸ್ಟೈಲ್ ಮೂಲಕ ಅಭಿಮಾನಿಗಳ ಮನಸೆಳೆದಿದ್ದಾರೆ. ಹಾಸ್ಯದ ಮೂಲಕ ಎಲ್ಲರನ್ನೂ ನಗಿಸುತ್ತ ಬಂದಿರುವ ಚಿಕ್ಕಣ್ಣ ಮದುವೆ ಸುದ್ದಿಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿದೆ. ಅಭಿಮಾನಿಗಳು “ಮದುವೆ ಸುದ್ದಿ ಕೇಳಿ ಖುಷಿಯಾಗಿದೆ, ಹ್ಯಾಪಿ ಮ್ಯಾರೀಡ್ ಲೈಫ್ ಚಿಕ್ಕಣ್ಣ” ಎಂದು ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿ ಸ್ಯಾಂಡಲ್‌ವುಡ್‌ನ ಮತ್ತೊಂದು ಹ್ಯಾಪಿ ಚಾಪ್ಟರ್ ಆಗಿ ಬರೆದಿಡಲಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
