Back to Top

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

SSTV Profile Logo SStv September 2, 2025
ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ
ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಳಹಂತದ ನ್ಯಾಯಾಲಯ ವಜಾಗೊಳಿಸಿದೆ.

ಈ ಪ್ರಕರಣದಲ್ಲಿ ದರ್ಶನ್ ಸೇರಿ ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇತ್ತೀಚೆಗೆ ಪವಿತ್ರಾ ಗೌಡ ಅವರು “ತಮ್ಮಿಂದ ರೇಣುಕಾ ಸ್ವಾಮಿ ನಿಧನವಾಗಿಲ್ಲ, ತಾನು ಮಹಿಳೆ ಹಾಗೂ ಸಿಂಗಲ್ ಮದರ್ ಆಗಿರುವುದರಿಂದ ಮಗಳ ಆರೈಕೆಗೆ ಹೊರಗಿರಬೇಕು” ಎಂಬ ಕಾರಣಗಳನ್ನು ನೀಡುತ್ತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಆದರೆ, ಯಾವುದೇ ಕಾರಣವನ್ನು ನ್ಯಾಯಾಲಯ ಪರಿಗಣಿಸದೆ ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಮುಂದುವರೆಯುವಂತೆ ನ್ಯಾಯಾಂಗ ಬಂಧನದಲ್ಲೇ ಇರಬೇಕಾಗಿದೆ.