ಯಶ್ ತಾಯಿ ಪುಷ್ಪ ಅರುಣ್‌ಕುಮಾರ್: “ನಮ್ಮನೆ, ಅವ್ರ ಮನೆ ಒಂದೇ – ನಾವೆಲ್ಲ ಒಂದೇ ಕುಟುಂಬದವರು”


ಸಂಡಲ್‌ವುಡ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್‌ಕುಮಾರ್ ಇತ್ತೀಚೆಗೆ ಸುದ್ದಿ ಮಾಧ್ಯಮಗಳ ಗಮನ ಸೆಳೆದಿದ್ದಾರೆ. ಅವರು ನಿರ್ಮಾಪಕಿಯಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಈಗ ವಿತರಕರಾಗಿಯೂ ಹೊಸ ಹಾದಿ ಹಿಡಿದಿದ್ದಾರೆ. ಈ ವೇಳೆ ಅವರು ತಮ್ಮ ಕುಟುಂಬ, ದೀಪಿಕಾ ದಾಸ್ ಕುರಿತಾದ ವೈರಲ್ ವಿಡಿಯೋ ಹಾಗೂ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಪುಷ್ಪ ಅರುಣ್‌ಕುಮಾರ್ ಅವರ ದೀಪಿಕಾ ದಾಸ್ ಕುರಿತ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅದಕ್ಕೆ ದೀಪಿಕಾ ದಾಸ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಮಾತನಾಡಿದ ಪುಷ್ಪಮ್ಮ “ನಾನು ಮಾತಾಡಿದ್ದು ನಿಜ, ಆದರೆ ಇದರ ಮೇಲೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಮನೆ, ಅವರ ಮನೆ ಬೇರೆ ಬೇರೆ ಅಲ್ಲ, ನಾವೆಲ್ಲ ಒಂದೇ ಕುಟುಂಬದವರು. ನಾವು ಎಲ್ಲರೂ ಒಂದೇ ಕಡೆ ಇರುತ್ತೇವೆ. ಈ ವಿಷಯ ವೈರಲ್ ಆದ ಮೇಲೆ ನನ್ನ ಮಗ ಯಶ್ ಕೂಡ ನಮ್ಮ ಬಳಿ ಏನೂ ಮಾತಾಡಿಲ್ಲ. ನಾನು ಯಾವ ಕಾರಣಕ್ಕೆ ಮಾತ್ನಾಡಿದ್ದೇನೆ ಅನ್ನೋದನ್ನು ಅವರಿಗೆ ಗೊತ್ತಿದೆ” ಎಂದು ಹೇಳಿದ್ದಾರೆ.
ನಿರ್ಮಾಪಕಿಯಾಗಿ ಮೊದಲ ಹೆಜ್ಜೆ ಇಟ್ಟಿದ್ದ ಪುಷ್ಪ ಅರುಣ್‌ಕುಮಾರ್, ಈಗ ವಿತರಕರಾಗಿಯೂ ತಮ್ಮ ಪಯಣ ಪ್ರಾರಂಭಿಸಿದ್ದಾರೆ. ತೆಲುಗು ಸಿನಿಮಾಗಳನ್ನು ಕನ್ನಡದಲ್ಲಿ ವಿತರಣೆ ಮಾಡುವ ಮೂಲಕ ಅವರು ಹೊಸ ಪ್ರಯತ್ನ ಮಾಡಿದ್ದಾರೆ “ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕೂಡ ವಿತರಣೆ ಮಾಡಲು ಉದ್ದೇಶಿಸಿದ್ದೇನೆ” ಎಂದು ಪುಷ್ಪಮ್ಮ ಹೇಳಿದ್ದಾರೆ.
ಅನುಷ್ಕಾ ಶೆಟ್ಟಿ ಅಭಿನಯದ ಘಾಟಿ ಚಿತ್ರ ವಿತರಣೆ, PA ಪ್ರೊಡಕ್ಷನ್ಸ್ ಲಾಂಛನದಲ್ಲಿ, ಶ್ರೀಧರ್ ಕೃಪಾ ಕಂಬೈನ್ಸ್ ಮೂಲಕ ಅವರು ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರ ಘಾಟಿ (Ghaati) ವಿತರಣೆ ಮಾಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಅಭಿನಯದ ಈ ಬಹು ನಿರೀಕ್ಷಿತ ಚಿತ್ರವನ್ನು ಕರ್ನಾಟಕಾದ್ಯಂತ ಭಾರಿ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕ: ಸೆಪ್ಟೆಂಬರ್ 5 ವಿಶೇಷತೆ: ರಾಜ್ಯಾದ್ಯಂತ ಹೆಚ್ಚು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನ.
ಪುಷ್ಪ ಅರುಣ್‌ಕುಮಾರ್ ಅವರ ಈ ಹೊಸ ಹೆಜ್ಜೆ ಕನ್ನಡ ಚಿತ್ರರಂಗಕ್ಕೆ ಹೊಸ ದಾರಿ ತೆರೆದಿದೆ. ಕುಟುಂಬದ ವಿಷಯವಾಗಲಿ, ಸಿನಿಮಾ ಕ್ಷೇತ್ರದ ಯೋಜನೆಗಳಾಗಲಿ, ಅವರು ನೀಡಿರುವ ಪ್ರತಿಕ್ರಿಯೆ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಮುಂದೆ ಅವರು ಪ್ಯಾನ್ ಇಂಡಿಯಾ ಮಟ್ಟದ ದೊಡ್ಡ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ತಲುಪಿಸುವ ಸಾಧ್ಯತೆ ಹೆಚ್ಚು.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
