Back to Top

ಲವರ್ ಬಾಯ್‌ನಿಂದ ನಿರ್ಮಾಪಕನತ್ತ: ಪ್ರಜ್ವಲ್ ದೇವರಾಜ್ ಹೊಸ ಹೆಜ್ಜೆ ಕನ್ನಡ ಸಿನಿಮಾ ಲೋಕಕ್ಕೆ!

SSTV Profile Logo SStv September 8, 2025
ನಟನಿಂದ ನಿರ್ಮಾಪಕನಾದ ಪ್ರಜ್ವಲ್ ದೇವರಾಜ್
ನಟನಿಂದ ನಿರ್ಮಾಪಕನಾದ ಪ್ರಜ್ವಲ್ ದೇವರಾಜ್

ಕನ್ನಡ ಪ್ರೇಕ್ಷಕರಿಗೆ ಸದಭಿರುಚಿಯ ಸಿನಿಮಾಗಳ ಮೂಲಕ ಉತ್ತಮ ಮನರಂಜನೆ ನೀಡುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆ ಪುರಾತನ ಫಿಲಂಸ್. ಈಗಾಗಲೇ ಸನ್ ಆಫ್ ಮುತ್ತಣ್ಣ' ಎಂಬ ಭಾವನಾತ್ಮಕ ಕಥೆಯ ಚಿತ್ರ ನಿರ್ಮಿಸಿ ತೆರೆಗೆ ತರುತ್ತಿರುವ ಪುರಾತನ ಫಿಲಂಸ್ ಮುಂದಿನ ದಿನಗಳಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಜೊತೆಗೂಡಿ ಅತ್ಯುತ್ತಮ ತಾಂತ್ರಿಕತೆಯ ಹಾಗೂ ಸದಭಿರುಚಿಯ  ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. 


ಪುರಾತನ ಫಿಲಂಸ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ "P2 ಪ್ರೊಡಕ್ಷನ್ಸ್" ಎಂಬ ನೂತನ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇದರ ಮೂಲಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಮತ್ತು ಒಳ್ಳೆಯ ಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಿದೆ.    

ಇದುವರೆಗೆ ಲವರ್ ಬಾಯ್, ಆಕ್ಷನ್ ಹೀರೋ ಹೀಗೆ ಎಲ್ಲಾ ಥರದ ಪಾತ್ರಗಳನ್ನ ನಿರ್ವಹಿಸುವ ಮೂಲಕ ಗುರುತಿಸಿಕೊಂಡ ನಟ ಪ್ರಜ್ವಲ್ ದೇವರಾಜ್ ಇದೀಗ  ಚಲನಚಿತ್ರ ನಿರ್ಮಾಣದತ್ತ ಹೊಸ ಹೆಜ್ಜೆ ಇಟ್ಟಿದ್ದು, ದೊಡ್ಡ ಸಂಸ್ಥೆಯ‌ ಜತೆ  ಕೈಜೋಡಿಸಿದ್ದಾರೆ.