Back to Top

ದರ್ಶನ್‌ ಬಳ್ಳಾರಿ ಜೈಲು ವರ್ಗಾವಣೆ ಮನವಿ ತಿರಸ್ಕರಿಸಿದ ಕೋರ್ಟ್ – ಪರಪ್ಪನ ಅಗ್ರಹಾರದಲ್ಲೇ ಮುಂದುವರಿಕೆ!

SSTV Profile Logo SStv September 9, 2025
ನಟ ದರ್ಶನ್‌ಗೆ ಸೆಷನ್ಸ್ ಕೋರ್ಟ್‌ನಿಂದ ಬಿಗ್ ರಿಲೀಫ್!
ನಟ ದರ್ಶನ್‌ಗೆ ಸೆಷನ್ಸ್ ಕೋರ್ಟ್‌ನಿಂದ ಬಿಗ್ ರಿಲೀಫ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಗೆ ಬೆಂಗಳೂರು ಸೆಷನ್ಸ್ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಕೋರ್ಟ್ ದರ್ಶನ್ನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸುವ ಮನವಿಯನ್ನು ತಿರಸ್ಕರಿಸಿದ್ದು, ಜೈಲಿನೊಳಗೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ನೀಡಲು ಅನುಮತಿ ನೀಡಿದೆ.

A2 ಆರೋಪಿ ದರ್ಶನ್ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕೆಂಬ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ದರ್ಶನ್ ವಿರುದ್ಧ ಯಾವುದೇ ಹೆಚ್ಚುವರಿ ಕಾರಣಗಳಿಲ್ಲವೆಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಇದರೊಂದಿಗೆ, ಅವರು ಪರಪ್ಪನ ಅಗ್ರಹಾರದಲ್ಲೇ ಮುಂದುವರಿಯಲಿದ್ದಾರೆ.

ದರ್ಶನ್ ಮಾಡಿದ ಬೇಡಿಕೆಯಲ್ಲಿ ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್‌ಶೀಟ್ ನೀಡಲು ಕೋರ್ಟ್ ಅನುಮತಿ ನೀಡಿದೆ. ಆದರೆ, ಜೈಲು ಕೈಪಿಡಿ ಪ್ರಕಾರವೇ ಈ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೋರ್ಟ್ ಸೂಚಿಸಿದೆ. ನಿಯಮ ಉಲ್ಲಂಘನೆಯಾದರೆ ಜೈಲು ಐಜಿಯಿಂದ ಕ್ರಮ ಕೈಗೊಳ್ಳಬಹುದು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೊತೆಗೆ, ಜೈಲಿನೊಳಗೆ ಓಡಾಡಲು ಅನುಮತಿ ನೀಡಿರುವುದು ದರ್ಶನ್‌ಗೆ ಸ್ವಲ್ಪ ನೆಮ್ಮದಿಯ ವಿಷಯವಾಗಿದೆ.

ಈ ತೀರ್ಪಿಗೂ ಮುನ್ನ ನಡೆದ ವಿಚಾರಣೆಯಲ್ಲಿ, ನಟ ದರ್ಶನ್ ತಮ್ಮ ಕಷ್ಟವನ್ನು ಜಡ್ಜ್ ಮುಂದೆ ಹಂಚಿಕೊಂಡಿದ್ದರು.
“ನಾನು ಬಿಸಿಲು ನೋಡದೆ 30 ದಿನಗಳಾಗಿವೆ. ಕೈಗೆ ಫಂಗಸ್ ಬಂದಿದೆ. ನನಗೆ ಮಾತ್ರ ವಿಷ ಕೊಡಿ, ಬೇರೆ ಯಾರಿಗೂ ಬೇಡ” ಎಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ನೀವು ಹೀಗೆ ಹೇಳುವಂತಿಲ್ಲ” ಎಂದು ಎಚ್ಚರಿಸಿದ್ದರು.

ಸುಪ್ರೀಂ ಕೋರ್ಟ್‌ನ ಖಡಕ್ ಸೂಚನೆಯ ನಂತರ, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಹಿಂದಿನಂತೆಯೇ ವಿಐಪಿ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಸಾಮಾನ್ಯ ಕೈದಿಯಂತೆ ಅವರಿಗೂ ಜೈಲು ನಿಯಮಗಳು ಅನ್ವಯವಾಗುತ್ತಿವೆ. ಇದರಿಂದ ನರಕಯಾತನೆ ಅನುಭವಿಸುತ್ತಿದ್ದೇನೆ ಎಂದು ದರ್ಶನ್ ಅಭಿಪ್ರಾಯಪಟ್ಟಿದ್ದರು.

ಈಗ ಸೆಷನ್ಸ್ ಕೋರ್ಟ್ ದರ್ಶನ್ಗೆ ಸ್ವಲ್ಪ ಮಟ್ಟಿನ ರಿಲೀಫ್ ನೀಡಿದೆ. ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಜೈಲಿನೊಳಗೆ ಸ್ವತಂತ್ರವಾಗಿ ಓಡಾಡಲು ಅವಕಾಶ ದೊರೆತಿದ್ದು, ಅವರಿಗೆ ನೆಮ್ಮದಿ ನೀಡುವ ಸಾಧ್ಯತೆ ಇದೆ. ಈ ತೀರ್ಪು ದರ್ಶನ್ ಅಭಿಮಾನಿಗಳಿಗೆ ನಿರಾಳತೆ ನೀಡಿದರೂ, ಮುಂದಿನ ದಿನಗಳಲ್ಲಿ ಪ್ರಕರಣ ಹೇಗೆ ಮುಂದುವರಿಯುತ್ತದೆ ಎಂಬುದರ ಕಡೆ ಎಲ್ಲರ ದೃಷ್ಟಿ ನೆಟ್ಟಿದೆ.