Back to Top

ವಿದೇಶಗಳಲ್ಲೂ ಗರ್ಜನೆಗೆ ಸಜ್ಜಾದ ಕಾಂತಾರ ಚಾಪ್ಟರ್ ಒನ್ – UK, ನೇಪಾಳ, ಕೇರಳ ಎಲ್ಲೆಡೆ ರಿಲೀಸ್!

SSTV Profile Logo SStv September 8, 2025
ಕಾಂತಾರ ಚಾಪ್ಟರ್ ಒನ್ ವಿತರಣೆ ಲಿಸ್ಟ್ ಔಟ್!
ಕಾಂತಾರ ಚಾಪ್ಟರ್ ಒನ್ ವಿತರಣೆ ಲಿಸ್ಟ್ ಔಟ್!

ಕನ್ನಡದ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ "ಕಾಂತಾರಾ ಚಾಪ್ಟರ್ ಒನ್" ಚಿತ್ರ ಈಗ ದೇಶೀಯ ಮಟ್ಟದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಅದ್ಧೂರಿಯಾಗಿ ರಿಲೀಸ್ ಆಗಲು ಸಜ್ಜಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರ ಕುರಿತು ಪ್ರತಿದಿನವೂ ಹೊಸ ಅಪ್‌ಡೇಟ್‌ಗಳು ಬರುತ್ತಿದ್ದು, ಈಗ ಚಿತ್ರ ವಿತರಣೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಸಂಸ್ಥೆಯೇ ಅಧಿಕೃತವಾಗಿ ಘೋಷಿಸಿದೆ.

UK ಅಲ್ಲಿ ಕಾಂತಾರಾ ಚಾಪ್ಟರ್ ಒನ್ ರಿಲೀಸ್, ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಮೆರುಗು ತರುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಎಂದರೆ UK ರಿಲೀಸ್. Laughing Water Entertainment ಹಾಗೂ Dreamz Entertainment ಸಂಸ್ಥೆಗಳು ಈ ಚಿತ್ರವನ್ನು ವಿತರಣೆ ಮಾಡುತ್ತಿವೆ. ವಿಶೇಷವೆಂದರೆ, Phars Film ಮುಖಾಂತರ ಚಿತ್ರವು ಯುಕೆ ಅರೆನಾದಲ್ಲಿ ತೆರೆಗೆ ಬರಲಿದೆ. ಅಕ್ಟೋಬರ್ 2ರಂದು ಇದೇ ವೇಳೆ ಯುಕೆ ಪ್ರೇಕ್ಷಕರು ಸಹ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಅದ್ಭುತ ಪರ್ಫಾರ್ಮೆನ್ಸ್ ನೋಡುವ ಅವಕಾಶ ಪಡೆಯಲಿದ್ದಾರೆ.

ಕೇರಳದಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮೂಲಕ ರಿಲೀಸ್, ಮತ್ತೊಂದು ದೊಡ್ಡ ಸುದ್ದಿಯೇನೆಂದರೆ, ಕೇರಳದಲ್ಲಿ ಈ ಚಿತ್ರವನ್ನು ಪೃಥ್ವಿರಾಜ್ ಸುಕುಮಾರನ್ ಮತ್ತು ಸುಪ್ರಿಯಾ ಮೆನನ್ ಅವರ Prithviraj Productions ಬ್ಯಾನರ್ ಅಡಿಯಲ್ಲಿಯೇ ವಿತರಿಸಲಾಗುತ್ತಿದೆ. ಕೇರಳದ ಪ್ರೇಕ್ಷಕರಿಗೂ ಕನ್ನಡದ ಈ ಮಾಯಾ ಲೋಕದ ಅನುಭವ ಸಿಗಲಿದ್ದು, ಚಿತ್ರವು ಅಲ್ಲಿಯೂ ಭರ್ಜರಿ ಪ್ರತಿಕ್ರಿಯೆ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಉತ್ತರ ಭಾರತ ಹಾಗೂ ನೇಪಾಳದ ಪ್ರೇಕ್ಷಕರಿಗಾಗಿ ಚಿತ್ರ ವಿತರಣೆ ಹೊಣೆ ಹೊತ್ತಿರುವವರು AA Films. ಇದು ಹಿಂದಿನ ದಶಕದಲ್ಲಿಯೂ ಅನೇಕ ಪ್ಯಾನ್ ಇಂಡಿಯಾ ಚಿತ್ರಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿರುವ ಸಂಸ್ಥೆಯಾಗಿದ್ದು, ಕಾಂತಾರಾ ಚಾಪ್ಟರ್ ಒನ್ ಚಿತ್ರಕ್ಕೂ ದೊಡ್ಡ ಮಟ್ಟದ ತಲುಪುವಿಕೆ ದೊರೆಯಲಿದೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈ ಚಿತ್ರಕ್ಕೆ ಮೂರು ವರ್ಷಗಳ ಶ್ರಮ ನೀಡಿದ್ದಾರೆ. ಭವ್ಯವಾದ ಸೆಟ್‌ಗಳಲ್ಲಿ, ಸಾವಿರಾರು ಜನರ ತಂಡದೊಂದಿಗೆ ಶೂಟಿಂಗ್ ನಡೆದಿದೆ. ಗುಲ್ಸನ್ ದೇವಯ್ಯ, ರುಕ್ಮಿಣಿ ವಸಂತ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಎಸ್. ಕಶ್ಯಪ್ ಅವರ ಕ್ಯಾಮರಾವರ್ಕ್ ಚಿತ್ರಕ್ಕೆ ಹೆಚ್ಚುವರಿ ಬಣ್ಣ ತುಂಬಲಿದೆ. "ಕಾಂತಾರಾ ಚಾಪ್ಟರ್ ಒನ್" ಕೇವಲ ಒಂದು ಸಿನಿಮಾ ಅಲ್ಲ, ಕನ್ನಡ ಸಿನಿಮಾ ಲೋಕದ ಹೊಸ ಸಾಂಸ್ಕೃತಿಕ ಅಲೆ. ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾ, ಅಕ್ಟೋಬರ್ 2ರಂದು ಭರ್ಜರಿಯಾಗಿ ತೆರೆಕಾಣಲು ಸಜ್ಜಾಗಿದೆ.