Back to Top

‘ಕಣ್ಣಪ್ಪ’ – ಫಸ್ಟ್ ಹಾಫ್ ‘ಓಕೆ’, ಸೆಕೆಂಡ್ ಹಾಫ್ ‘ಬ್ಲಾಕ್‌ಬಸ್ಟರ್’!

SSTV Profile Logo SStv June 27, 2025
ಕಣ್ಣಪ್ಪ ಟ್ವಿಟ್ಟರ್ ರಿವ್ಯೂ
ಕಣ್ಣಪ್ಪ ಟ್ವಿಟ್ಟರ್ ರಿವ್ಯೂ

ಟಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಕಣ್ಣಪ್ಪ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಟ್ವಿಟ್ಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ. ಚಿತ್ರದ ಫಸ್ಟ್ ಹಾಫ್‌ ಸಾಮಾನ್ಯವಾಗಿ ಓಕೆ ಓಕೆ ಎನಿಸಿದೆ. ಆದರೆ ಸೆಕೆಂಡ್ ಹಾಫ್‌ ಮಾತ್ರ ಪವರ್‌ಪ್ಯಾಕ್‌ ಅಂದರೆ ಬ್ಲಾಕ್‌ಬಸ್ಟರ್ ಅಂತಲೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ಕೊನೆಯ 20 ನಿಮಿಷಗಳಲ್ಲಿ ವಿಷ್ಣು ಮಂಚು ಅವರು ಕಣ್ಣಪ್ಪನಾಗಿ ಭರ್ಜರಿ ಪ್ರದರ್ಶನ ನೀಡಿದ್ದು, ಫ್ಯಾನ್ಸ್ ಹೃದಯ ಗೆದ್ದಿದ್ದಾರೆ. ಈ ಭಾಗವನ್ನೇ ಇಡೀ ಚಿತ್ರದ ಹೈಲೈಟ್ ಎಂದು ಹಲವರು ಹೇಳಿದ್ದಾರೆ.

ಇದರಲ್ಲದೆ ಪ್ರಭಾಸ್ ಅವರ ಕ್ಯಾಮಿಯೋ (ರುದ್ರನ ಪಾತ್ರದಲ್ಲಿ) ಎಂಟ್ರಿಯು ಪ್ರೇಕ್ಷಕರಿಗೆ ಥ್ರಿಲ್ ನೀಡಿದೆ. ಜೊತೆಗೆ ಅಕ್ಷಯ್ ಕುಮಾರ್, ಕಾಜಲ್ ಅಗರ್ವಾಲ್, ಮೋಹನ್‌ಲಾಲ್ ಅವರ ಪಾತ್ರಗಳೂ ಗಮನಸೆಳೆದಿವೆ.

ಇನ್ನು ಕೆಲವರೆಡೆ ಚಿತ್ರ ಫಸ್ಟ್ ಹಾಫ್‌ನನ್ನು ಫ್ಲಾಪ್ ಎಂದು ಟೀಕೆ ಮಾಡಲಾಗಿದ್ದು, ಕ್ಲೈಮ್ಯಾಕ್ಸ್ ಡಿಸೆಂಟ್ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಒಟ್ಟಾರೆ, ಟ್ವಿಟ್ಟರ್‌ನಲ್ಲಿ ಕಣ್ಣಪ್ಪ ಚಿತ್ರಕ್ಕೆ ಮಿಕ್ಸ್ ರೆಸ್ಪಾನ್ಸ್ ಬಂದಿದ್ದು, ಬಾಕ್ಸಾಫೀಸ್‌ನಲ್ಲಿ ಇದರ ಚಾಲನೆ ಹೇಗಿರುತ್ತೆ ಎಂಬ ಕುತೂಹಲ ಮೂಡಿಸಿದೆ.