ಪವನ್ ಕಲ್ಯಾಣ್ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ: ಭಕ್ತಿಯ ಹೆಜ್ಜೆಯಲ್ಲಿ ರಾಜಕೀಯ ಸಂದೇಶ


ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಕರ್ನಾಟಕದ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 11 ರಂದು ಸಂಜೆ ಐದು ಗಂಟೆಗೆ ಅವರು ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅದೇ ದಿನ ದೇವಾಲಯದ ಮುಂಭಾಗ ಆರತಿ ಸೇವೆಯಲ್ಲಿ ಸಹ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಧರ್ಮಾಧಿಕಾರಿಗಳ ವಿರುದ್ಧ ಆರೋಪಗಳು ಸೇರಿದಂತೆ ಹಲವು ಘಟನೆಗಳು ಸುದ್ದಿಯಲ್ಲಿವೆ. ಚಿನ್ನಯ್ಯ ಎಂಬಾತ ಧರ್ಮಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕ್ಷೇತ್ರದ ಗೌರವಕ್ಕೆ ಧಕ್ಕೆ ತರುವ ಯಾವುದೇ ಶಕ್ತಿಗಳಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲೇ ಪವನ್ ಕಲ್ಯಾಣ್ ಅವರ ಧರ್ಮಸ್ಥಳ ಭೇಟಿ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಅರ್ಥ ಹೊಂದಿದೆ.
ಪವನ್ ಕಲ್ಯಾಣ್ ಅವರು ತಮ್ಮನ್ನು ಹಲವು ಬಾರಿ "ಸನಾತನಿ ಹಿಂದೂ" ಎಂದು ಘೋಷಿಸಿಕೊಂಡಿದ್ದು, ಹಿಂದೂ ಮೌಲ್ಯಗಳನ್ನು ಕಾಪಾಡುವ ನಿಲುವಿನಲ್ಲಿ ಖಡಕ್ ಆಗಿ ನಿಂತಿದ್ದಾರೆ. ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬು ಪತ್ತೆಯಾದಾಗ ಅವರು ಸ್ವತಃ ತಿರುಪತಿಗೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇತ್ತೀಚಿನ ಧರ್ಮಸ್ಥಳ ಪ್ರಕರಣಕ್ಕೂ ಅವರು ಸ್ಪಂದಿಸಿದ್ದು, ಕ್ಷೇತ್ರದ ಪರವಾಗಿ ನಿಂತುಕೊಳ್ಳಲು ಬರುತ್ತಿದ್ದಾರೆ.
ಜನಸೇನಾ ಪಕ್ಷದ ಸಂಸ್ಥಾಪಕರಾಗಿರುವ ಪವನ್ ಕಲ್ಯಾಣ್, ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಟಿಡಿಪಿ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಸರ್ಕಾರದ ಭಾಗವಾಗಿದ್ದಾರೆ. ಅವರ ಧರ್ಮಸ್ಥಳ ಭೇಟಿಯು ಕೇವಲ ಭಕ್ತಿಯಲ್ಲ, ಬಲವಾದ ರಾಜಕೀಯ ಸಂದೇಶವನ್ನೂ ನೀಡುತ್ತದೆ. ಧರ್ಮಸ್ಥಳದ ಘನತೆ ಉಳಿಸುವ ಪ್ರಯತ್ನದಲ್ಲಿ ನೆರೆಯ ರಾಜ್ಯದ ಪ್ರಮುಖ ನಾಯಕ ಭೇಟಿ ನೀಡುತ್ತಿರುವುದು ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಹತ್ತಿರಿಸುತ್ತದೆ.
ಧರ್ಮಸ್ಥಳವು ದಕ್ಷಿಣ ಭಾರತದ ಪ್ರಮುಖ ಪುಣ್ಯಕ್ಷೇತ್ರವಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಇತ್ತೀಚಿನ ಆರೋಪ-ಪ್ರತಾರೋಪದ ನಡುವೆ ಪವನ್ ಕಲ್ಯಾಣ್ ಅವರ ಭೇಟಿಯು ಕ್ಷೇತ್ರದ ಭಕ್ತರಿಗೆ ಹಾಗೂ ಅಭಿಮಾನಿಗಳಿಗೆ ಧೈರ್ಯ ತುಂಬುವಂತಹ ಬೆಳವಣಿಗೆಯಾಗಿದೆ. ಅವರ ಈ ಭೇಟಿಯು ಕೇವಲ ಪೂಜಾ ಕಾರ್ಯಕ್ರಮವಲ್ಲ, ಭಕ್ತಿ ಮತ್ತು ಸಂಸ್ಕೃತಿಯ ಪರವಾಗಿ ನಿಂತ ರಾಜಕೀಯ ಹೆಜ್ಜೆಯೂ ಆಗಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
