ನಟ ದರ್ಶನ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಬಹುದು? “ವಿಷ ಕೊಡಿ” ಹೇಳಿಕೆಯ ಹಿಂದಿನ ಸತ್ಯ!


ನಟ ದರ್ಶನ್ ಪ್ರಸ್ತುತ ಜೈಲಿನಲ್ಲಿರುವ ಸಂದರ್ಭದಲ್ಲೇ, ಅವರು ಕೋರ್ಟ್ ವಿಡಿಯೋ ಕಾನ್ಪರೆನ್ಸ್ ವಿಚಾರಣೆಯಲ್ಲಿ ಮಾಡಿದ ಹೇಳಿಕೆ ಹಲವರಲ್ಲಿ ಆತಂಕ ಹುಟ್ಟಿಸಿದೆ. “ನನಗೆ ಸ್ವಲ್ಪ ಪಾಯಿಸನ್ ಕೊಡಿ” ಎಂದು ದರ್ಶನ್ ಮನವಿ ಮಾಡಿದ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆ ಆಲಿಸಿದವರಲ್ಲಿ ಆತ್ಮಹತ್ಯೆಯ ಭಯ ಮೂಡಿಸಿದೆ.
ಮೈಸೂರು ಮೂಲದ ಮನೋರೋಗ ತಜ್ಞ ಡಾ. ಅಭಿಜಿತ್ ಹನಗೋಡು ಅವರು ಈ ವಿಷಯವಾಗಿ ಪ್ರತಿಕ್ರಿಯೆ ನೀಡುತ್ತಾ, “ಈ ರೀತಿ ಹೇಳುವವರು ಆತ್ಮಹತ್ಯೆಗೆ ಯತ್ನಿಸಬಹುದು” ಎಂದು ಎಚ್ಚರಿಸಿದ್ದಾರೆ. ದರ್ಶನ್ ಅವರ ಈ ಹೇಳಿಕೆ ಸಾಮಾನ್ಯವಾಗಿಲ್ಲ, ಇದರಲ್ಲಿ ಆಳವಾದ ಮಾನಸಿಕ ಒತ್ತಡ ಹಾಗೂ ಭಾವನಾತ್ಮಕ ಅಶಾಂತಿ ವ್ಯಕ್ತವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡಾ. ಹನಗೋಡು ಅವರ ಪ್ರಕಾರ, ದರ್ಶನ್ ಅವರ ಪ್ರಸ್ತುತ ಸ್ಥಿತಿ ಅವರಿಗೆ ಸೂಕ್ತ ಮನೋರೋಗ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ಜೈಲಿನ ಪರಿಸರ, ಅಲ್ಲಿ ಎದುರಾಗುವ ಕಿರುಕುಳ ಅಥವಾ ಒತ್ತಡಗಳು ಅವರ ಮಾನಸಿಕ ಆರೋಗ್ಯವನ್ನು ಹಾಳುಮಾಡಿ, ಇಂತಹ ಹೇಳಿಕೆ ನೀಡುವಂತೆ ಮಾಡಿರಬಹುದು. “ಮೊದಲ ಬಾರಿಗೆ, ಎರಡನೇ ಬಾರಿಗೆ ಹಾಗೂ ಈಗಿನ ಸಂದರ್ಭದಲ್ಲಿನ ದರ್ಶನ್ ಅವರ ನಡೆನುಡಿಯಲ್ಲಿ ಸ್ಪಷ್ಟವಾದ ಭಿನ್ನತೆ ಕಾಣುತ್ತಿದೆ” ಎಂದಿದ್ದಾರೆ ತಜ್ಞರು.
ಜೈಲಿನೊಳಗಿನ ವಾತಾವರಣದಲ್ಲಿ ದರ್ಶನ್ ಅವರಿಗೆ ಪ್ರತ್ಯೇಕ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. “ವಿಷ ಕೊಡಿ ಎಂದರೆ ಅದು ಬೇಲ್ ಸಿಗುತ್ತೆ, ರಿಲ್ಯಾಕ್ಸ್ ಸಿಗುತ್ತೆ ಅನ್ನೋ ಅರ್ಥದಲ್ಲಲ್ಲ. ಅದು ಗಂಭೀರ ಮಾನಸಿಕ ಒತ್ತಡದ ಸೂಚನೆ. ಹೀಗಾಗಿ, ತಕ್ಷಣ ಮನೋರೋಗ ತಜ್ಞರಿಂದ ಸಮರ್ಪಕ ಚಿಕಿತ್ಸೆ ಸಿಗಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
ಈ ಘಟನೆ ನಟ ದರ್ಶನ್ ಅವರ ಆರೋಗ್ಯ ಹಾಗೂ ಭದ್ರತೆ ಬಗ್ಗೆ ಗಂಭೀರ ಚಿಂತೆಗಳನ್ನು ಎಬ್ಬಿಸಿದೆ. ಅಭಿಮಾನಿಗಳು ಮತ್ತು ಕುಟುಂಬಸ್ಥರು ಕೂಡ ಆತಂಕಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತವಾದ ವೈದ್ಯಕೀಯ ಸಹಾಯ ದೊರಕಲಿ ಎಂಬ ಆಶೆಯಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
