ಕುಟುಂಬ ಸಮಸ್ಯೆಯೇ? ಇಲ್ಲ ಸಿನಿಮಾ ಕೆಲಸವೇ? ಡಾರ್ಲಿಂಗ್ ಕೃಷ್ಣ ಕೋರ್ಟ್ ಭೇಟಿಗೆ ಕುತೂಹಲ


ಸ್ಯಾಂಡಲ್‌ವುಡ್‌ನಲ್ಲಿ ವಿವಾದಗಳಿಂದ ದೂರ ನಿಂತು, ತನ್ನ ನಟನೆ ಮತ್ತು ನಿರ್ದೇಶನದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ, ಇತ್ತೀಚೆಗೆ ಒಂದು ಅಚ್ಚರಿ ಸುದ್ದಿಯಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ 'ಲವ್ ಮಾಕ್ಟೇಲ್ 3' ಚಿತ್ರದ ಚಿತ್ರೀಕರಣ ಆರಂಭಿಸಿದ ಕೃಷ್ಣ, ವೃತ್ತಿ ಬದುಕಿನಲ್ಲಿ ಯಶಸ್ಸಿನ ಹೆಜ್ಜೆ ಹಾಕುತ್ತಿದ್ದರೂ, ಈಗ ಕುಟುಂಬ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ, ನೇರಳೆ ಬಣ್ಣದ ಟಿ-ಶರ್ಟ್ ಹಾಗೂ ಜೀನ್ಸ್ ಧರಿಸಿ, ಮಾಸ್ಕ್ ಹಾಕಿಕೊಂಡು ಓಡಾಡುತ್ತಿರುವ ಕೃಷ್ಣನ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಈ ಫೋಟೋ ಹರಿದಾಡುತ್ತಿದ್ದಂತೆ – ಕೃಷ್ಣ ಅಲ್ಲಿ ಏಕೆ ಹೋದರು? ಒಬ್ಬರೇ ಹೋದರಾ? ಕುಟುಂಬ ಸಮಸ್ಯೆ ಏನಾದರೂ ಇದೆಯಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿವೆ.
ಮೂಲಗಳ ಪ್ರಕಾರ, ಕೃಷ್ಣ ಜೊತೆ ಮಿಲನಾ ನಾಗರಾಜ್ ಕೂಡ ಫ್ಯಾಮಿಲಿ ಕೋರ್ಟ್‌ಗೆ ಹೋದರೆಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಅವರ ಫೋಟೋಗಳು ಅಥವಾ ವಿಡಿಯೋಗಳು ಹೊರಬಂದಿಲ್ಲ. ಇದರಿಂದ ನೆಟ್ಟಿಗರ ಊಹಾಪೋಹಗಳು ಇನ್ನಷ್ಟು ಗಟ್ಟಿಯಾದವು. ಆದರೆ ಆಪ್ತರ ಪ್ರಕಾರ, ಈ ಭೇಟಿ 'ಲವ್ ಮಾಕ್ಟೇಲ್ 3' ಚಿತ್ರದ ಕೆಲಸಗಳಿಗೆ ಸಂಬಂಧಪಟ್ಟದ್ದು ಎಂದು ತಿಳಿದುಬಂದಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರಿಬ್ಬರ ಇನ್‌ಸ್ಟಾಗ್ರಾಂನಲ್ಲಿ ಯಾವುದೇ ರೀತಿಯ ಡಿಸ್ಟರ್ಬೆನ್ಸ್ ಕಾಣಿಸಿಲ್ಲ. ಇತ್ತೀಚೆಗೆ ಮಗಳ ಜೊತೆ ಗಣೇಶ ಹಬ್ಬವನ್ನು ಆಚರಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಓಣಂ ಹಬ್ಬದ ಫೋಟೋಗಳನ್ನು ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಆತಂಕ ಪಡೆಯಬೇಕಾದ ಅವಶ್ಯಕತೆಯೇ ಇಲ್ಲವೆಂದು ಹೇಳಲಾಗಿದೆ.
‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್ 2’ ಭಾರಿ ಯಶಸ್ಸು ಕಂಡ ನಂತರ, ಈ ಜೋಡಿ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ‘ಲವ್ ಮಾಕ್ಟೇಲ್ 3’ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರದ ಆರಂಭದ ಕೆಲವೇ ತಿಂಗಳಲ್ಲಿ ಇಂತಹ ಗಾಸಿಪ್ ಹರಿದರೂ, ಇಬ್ಬರೂ ಚಿತ್ರ ನಿರ್ಮಾಣ ಮತ್ತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆದರೂ, ಅದು ಚಿತ್ರಕ್ಕೆ ಸಂಬಂಧಿಸಿದ ಭೇಟಿಯೇ ಇರಬಹುದು ಎಂದು ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.
ಅಭಿಮಾನಿಗಳು ಆತಂಕಪಡಬೇಕಾದ ಅಗತ್ಯವಿಲ್ಲ, ಏಕೆಂದರೆ ಕೃಷ್ಣ ಹಾಗೂ ಮಿಲನಾ ಇಬ್ಬರೂ ತಮ್ಮ ಕುಟುಂಬ ಮತ್ತು ವೃತ್ತಿಜೀವನದಲ್ಲಿ ಖುಷಿಯಿಂದ ಇರುವುದರ ಸಾಕ್ಷಿ ಅವರ ಸೋಶಿಯಲ್ ಮೀಡಿಯಾದಲ್ಲೇ ಗೋಚರಿಸುತ್ತಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
