Back to Top

‘ಡೆವಿಲ್’ Vs ‘45’ Vs ‘K47’ – "ಯಾವುದೇ ಸಿನಿಮಾ ಬರಲಿ, ನಮ್ಮ K47 ಬಂದೇ ಬರುತ್ತದೆ" ಸುದೀಪ್ ಸ್ಪಷ್ಟನೆ!

SSTV Profile Logo SStv September 1, 2025
ಕ್ರಿಸ್‌ಮಸ್ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಕ್ಲ್ಯಾಶ್!
ಕ್ರಿಸ್‌ಮಸ್ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಕ್ಲ್ಯಾಶ್!

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ "K47" ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಕ್ರಿಸ್‌ಮಸ್‌ಗೆ ಬಿಡುಗಡೆಯಾಗುವುದಾಗಿ ಸುದೀಪ್ ಸ್ವತಃ ಘೋಷಣೆ ಮಾಡಿದ್ದಾರೆ. ಜುಲೈನಲ್ಲಿ ಆರಂಭವಾದ "K47" ಚಿತ್ರದ ಶೂಟಿಂಗ್ ಈಗಾಗಲೇ 60% ಪೂರ್ಣಗೊಂಡಿದೆ. ಉಳಿದ ಭಾಗವನ್ನು ಅಕ್ಟೋಬರ್ ವೇಳೆಗೆ ಮುಗಿಸುವ ಯೋಜನೆ ಇದೆ. ನಂತರ ನವೆಂಬರ್‌ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಆರಂಭವಾಗುತ್ತವೆ. ಕೇವಲ ಆರು ತಿಂಗಳಲ್ಲಿ ಸಿನಿಮಾ ತಯಾರಿಸಿ ಜನರ ಮುಂದೆ ತರಲು ನಿರ್ಧರಿಸಿದ್ದೆನೆಂದು ಸುದೀಪ್ ನೆನಪಿಸಿದ್ದಾರೆ.

ಈ ಕ್ರಿಸ್‌ಮಸ್‌ಗೆ "K47" ಮಾತ್ರವಲ್ಲದೆ "ಡೆವಿಲ್" ಹಾಗೂ "45" ಚಿತ್ರಗಳೂ ಬಿಡುಗಡೆಯಾಗಲಿವೆ. ಈ ಕಾರಣದಿಂದ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಕ್ಲ್ಯಾಶ್ ಖಚಿತ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, "ಇದನ್ನು ನೀವು ಕಾಂಪಿಟೇಷನ್‌ ಅಂತ ತೆಗೆದುಕೊಳ್ಳಬಹುದು, ಸೆಲೆಬ್ರೇಷನ್‌ ಅಂತ ತೆಗೆದುಕೊಳ್ಳಬಹುದು. ಆದರೆ ನಾನು ಸಿನಿಮಾ ಮಾಡೋದು ನನ್ನ ನಿರ್ಮಾಪಕರಿಗಾಗಿ, ನನ್ನ ಥಿಯೇಟರ್‌ಗಾಗಿ, ನನ್ನ ಅಭಿಮಾನಿಗಳಿಗಾಗಿ" ಎಂದು ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬ. ಆದರೆ ಅಭಿಮಾನಿಗಳೊಂದಿಗೆ ಸೆಲೆಬ್ರೇಷನ್‌ ಸೆಪ್ಟೆಂಬರ್ 1ರ ರಾತ್ರಿ ಬೆಂಗಳೂರಿನ ನಂದಿ ಲಿಂಕ್‌ ಗ್ರೌಂಡ್ಸ್ನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಡೆದ ಪ್ರೆಸ್ ಮೀಟ್‌ನಲ್ಲಿ ಅವರು "K47" ಬಗ್ಗೆಯೂ ಅಪ್‌ಡೇಟ್ ನೀಡಿದ್ದಾರೆ. "K47" ನಂತರ ಸುದೀಪ್ "ಬಿಲ್ಲ ರಂಗ ಬಾಷ" ಸಿನಿಮಾದಲ್ಲಿ ನಟಿಸಲಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸಾಲು ಸಾಲು ಸಿನಿಮಾಗಳ ಬಂಪರ್ ಗಿಫ್ಟ್ ಸಿಗಲಿದೆ.

ಹೀಗಾಗಿ, ಕ್ರಿಸ್‌ಮಸ್‌ ಬಾಕ್ಸ್‌ಆಫೀಸ್‌ನಲ್ಲಿ "K47 vs Devil vs 45" ಎಂಬ ಮಹಾಕ್ಲ್ಯಾಶ್ ಕಾದಿದೆ. ಅಭಿಮಾನಿಗಳಿಗಂತೂ ಡಬಲ್ ಡೋಸ್ ಎಂಟರ್‌ಟೈನ್‌ಮೆಂಟ್ ಖಚಿತ!