ಕಿಚ್ಚ ಸುದೀಪ್ ಹುಟ್ಟುಹಬ್ಬದ ಸ್ಪೆಷಲ್ ಗಿಫ್ಟ್ – ‘ಬಿಲ್ಲ ರಂಗ ಬಾಷಾ’ ಫಸ್ಟ್ ಲುಕ್ ಔಟ್!


ಕಿಚ್ಚ ಸುದೀಪ್ ಅಭಿಮಾನಿಗಳಿಗಾಗಿದ್ದ ದೊಡ್ಡ ಸರ್ಪ್ರೈಸ್ ಇದೀಗ ರಿಲೀಸ್ ಆಗಿದೆ. ಬಹುಕಾಲದಿಂದ ಕಾತರದಿಂದ ಕಾಯಲಾಗುತ್ತಿದ್ದ ‘ಬಿಲ್ಲ ರಂಗ ಬಾಷಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರ ಬಿದ್ದಿದೆ. ಸುದೀಪ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಡೈರೆಕ್ಟರ್ ಅನೂಪ್ ಭಂಡಾರಿ ಅವರು ಈ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಬಹುಕಾಲದಿಂದ “ಈ ಪೋಸ್ಟರ್ ಹೇಗಿರುತ್ತೆ?” ಅನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ.
ಈ ಚಿತ್ರದಲ್ಲಿ ಕಿಚ್ಚ ಎಷ್ಟು ಪಾತ್ರ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಈಗಾಗಲೇ ಟ್ರೆಂಡ್ ಆಗಿತ್ತು ಒಂದೋ, ಎರಡೋ ಅಥವಾ ಮೂರೋ? ಕಿಚ್ಚ ಸುದೀಪ್ ಸ್ವತಃ “ಬಿಲ್ಲ” ಪಾತ್ರದ ಬಗ್ಗೆ ಮಾತನಾಡಿ, ಪ್ರತಿ ದಿನ ಅದಕ್ಕೆ 2 ಗಂಟೆ ಮೇಕ್‌ಅಪ್‌ಗೆ ಕುಳಿತುಕೊಳ್ಳಬೇಕಾಗುತ್ತಿತ್ತು ಎಂದು ಹೇಳಿದ್ದಾರೆ. ಇದರಿಂದಲೇ, ಅಭಿಮಾನಿಗಳು ಡಬಲ್ ರೋಲ್ ಖಚಿತ ಅಂತ ಊಹಿಸುತ್ತಿದ್ದಾರೆ.
ಈ ಸಿನಿಮಾ ಸ್ಕ್ರಿಪ್ಟ್ ಮೇಲೆ ಅನೂಪ್ ಭಂಡಾರಿ ಸರಿಸುಮಾರು ಐದು-ಆರು ವರ್ಷಗಳ ಕಾಲ ಶ್ರಮಿಸಿದ್ದಾರೆ. ಅಷ್ಟು ಪರ್ಫೆಕ್ಷನ್ ನಂತರವೇ ಚಿತ್ರದ ಕೆಲಸ ಪ್ರಾರಂಭವಾಗಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣವೂ ಪೂರ್ಣಗೊಂಡಿದೆ. ಸುದೀಪ್ ಹುಟ್ಟುಹಬ್ಬದ ದಿನವೇ ಈ ಪೋಸ್ಟರ್ ಬಿಡುಗಡೆಯಾಗಿರುವುದರಿಂದ ಅಭಿಮಾನಿಗಳಿಗೆ ಇದು ಡಬಲ್ ಸಂಭ್ರಮ. ಪೋಸ್ಟರ್ ಲುಕ್ ಮೂಲಕ ಚಿತ್ರದ ಭವ್ಯತೆ ಹಾಗೂ ಪಾತ್ರಗಳ ಮಿಸ್ಟರಿ ಇನ್ನಷ್ಟು ಕುತೂಹಲ ಕೆರಳಿಸಿದೆ.
ಒಟ್ಟಾರೆ, ‘ಬಿಲ್ಲ ರಂಗ ಬಾಷಾ’ ಫಸ್ಟ್ ಲುಕ್ ಪೋಸ್ಟರ್ ಅಭಿಮಾನಿಗಳಲ್ಲಿ ಭಾರಿ ಸಂಭ್ರಮ ಹುಟ್ಟಿಸಿದೆ. ಈಗ ಎಲ್ಲರ ಕುತೂಹಲ – “ಸುದೀಪ್ ಡಬಲ್ ರೋಲ್ ಮಾಡ್ತಾರಾ ಅಥವಾ ಟ್ರಿಪಲ್?” ಎಂಬುದರಲ್ಲೇ ಸುತ್ತಿದೆ. ಕಿಚ್ಚನ ಅಭಿಮಾನಿ ಆರ್ಮಿಗೆ ಇದು ನಿಜಕ್ಕೂ ನೆನಪಿನ ಹುಟ್ಟುಹಬ್ಬದ ಗಿಫ್ಟ್ ಆಗಿದೆ!
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
