Back to Top

ಕಿಚ್ಚ ಸುದೀಪ್ ರಿವೀಲ್ ಮಾಡಿದ ಬಿಗ್ ಬಾಸ್ ಕನ್ನಡ ಸೀಸನ್–12 ಸರ್ಪ್ರೈಸ್! ಆ ಸರ್ಪ್ರೈಸ್ ಏನು?

SSTV Profile Logo SStv September 1, 2025
ಬಿಗ್ ಬಾಸ್ ಸೀಸನ್ 12 ಲಾಂಚ್ ಡೇಟ್ ಘೋಷಿಸಿದ ಕಿಚ್ಚ ಸುದೀಪ್!
ಬಿಗ್ ಬಾಸ್ ಸೀಸನ್ 12 ಲಾಂಚ್ ಡೇಟ್ ಘೋಷಿಸಿದ ಕಿಚ್ಚ ಸುದೀಪ್!

ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ʻಬಿಗ್‌ ಬಾಸ್‌ ಕನ್ನಡʼ. ಪ್ರತಿಯೊಂದು ಸೀಸನ್ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹುಟ್ಟಿಸುತ್ತಾ ಯಶಸ್ವಿಯಾಗಿ ಮುನ್ನಡೆದಿದೆ. ಈಗ ಈ ಶೋ ತನ್ನ 12ನೇ ಆವೃತ್ತಿಗೆ ಸಜ್ಜಾಗಿದೆ. ಇತ್ತೀಚೆಗೆ ಈ ಸೀಸನ್‌ನ ಅಧಿಕೃತ ಲೋಗೋ ಲಾಂಚ್ ಆಗಿ ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಿಸಿತ್ತು. ಆದರೆ, ಇನ್ನೂ ಒಂದು ದೊಡ್ಡ ಪ್ರಶ್ನೆ ಉಳಿದಿತ್ತು – “ಬಿಗ್ ಬಾಸ್ 12 ಯಾವಾಗ ಆರಂಭವಾಗಲಿದೆ?” ಎಂಬುದು. ಇದಕ್ಕೆ ಉತ್ತರವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ನೀಡಿದ್ದಾರೆ.

ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್, “ಅತೀ ಶೀಘ್ರದಲ್ಲೇ ಪರದೆ ಮೇಲೆ ಸಿಕ್ತೇನೆ. ಸೆಪ್ಟೆಂಬರ್ 28ರಿಂದ ಟಿವಿಯಲ್ಲಿ ಮತ್ತೆ ಭೇಟಿ ಆಗ್ತೀನಿ. ನಿಮ್ಮ ಪ್ರೀತಿಗೆ ಧನ್ಯವಾದಗಳು, ಲವ್ ಯೂ ಆಲ್” ಎಂದು ಘೋಷಿಸಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಹೀಗಾಗಿ, ಸಾಮಾನ್ಯವಾಗಿ ಪ್ರತಿವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ಆರಂಭವಾಗುವ ಶೋ, ಈ ಬಾರಿ ಕೂಡ ಅದೇ ದಿನಾಂಕದಲ್ಲಿ ಪ್ರೇಕ್ಷಕರನ್ನು ಮನರಂಜಿಸಲು ಬರಲಿದೆ.

ಬಿಗ್ ಬಾಸ್ ಕನ್ನಡ ಸೀಸನ್–12ಕ್ಕೆ ಹೊಸ ಥೀಮ್, ರೋಚಕ ಸ್ಪರ್ಧಿಗಳು ಮತ್ತು ಹಲವಾರು ಟ್ವಿಸ್ಟ್‌ಗಳು ಪ್ರೇಕ್ಷಕರನ್ನು ಕಾದಿವೆ. ಪ್ರತೀ ಸೀಸನ್‌ನಲ್ಲಿ ಹೊಸತನ ತರುತ್ತಿರುವ ಶೋ, ಈ ಬಾರಿ ಏನು ವಿಶೇಷತೆ ತರುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಯಾರೆಲ್ಲಾ ಕಂಟೆಸ್ಟಂಟ್ಸ್? ಎಷ್ಟು ಮಂದಿ ಸ್ಪರ್ಧಿಗಳು? – ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸೆಪ್ಟೆಂಬರ್ 28ರಂದು ಸಿಗಲಿದೆ. ಕಿಚ್ಚ ಸುದೀಪ್ ಅವರ ನಿರೂಪಣೆ ಎಂದರೆ ಕನ್ನಡ ಪ್ರೇಕ್ಷಕರಿಗೆ ಭಾರಿ ಕ್ರೇಜ್. ಅವರ ಸ್ಟೈಲ್, ಹಾಸ್ಯ, ಮತ್ತು ಸ್ಪರ್ಧಿಗಳೊಂದಿಗೆ ನಡೆಸುವ ಸಂವಾದವೇ ಬಿಗ್ ಬಾಸ್‌ ಶೋಗೆ ಜೀವ ತುಂಬುತ್ತದೆ. ಹೀಗಾಗಿ ಸೀಸನ್ 12 ಕೂಡ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿದೆ. ಹೀಗಾಗಿ, ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್–12 ಸೆಪ್ಟೆಂಬರ್ 28ರಿಂದ ನಿಮ್ಮ ಪರದೆ ಮೇಲೆ ಬರಲಿದೆ.
ನೀವು ರೆಡಿಯಾ?