"ಎಲ್ಲರೂ ದಡ್ಡ ಅಂದ್ರು, ಆದ್ರೆ ನೀನು!" – ಸುನಿಲ್‌ನಿಂದ ಅಮೃತಾಗೆ ರೋಮ್ಯಾಂಟಿಕ್ ಪ್ರಪೋಸ್!


ಜೀ ಕನ್ನಡದ 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ರಿಯಾಲಿಟಿ ಶೋ ಪ್ರತಿ ವಾರವೂ ಹೊಸ ಸನ್ನಿವೇಶಗಳಿಂದ ಪ್ರೇಕ್ಷಕರ ಮನರಂಜನೆ ಮಾಡುತ್ತಿದೆ. ಈ ವಾರದ ವಿಶೇಷ ಅಂಶವೇ ‘ಪ್ರಪೋಸಲ್ ಟಾಸ್ಕ್’, ಅಲ್ಲಿಯೇ ಕಂಡುಬಂದಿದ್ದು ಪ್ರೀತಿ, ಎಮೋಷನ್ ಮತ್ತು ನಿಖರ ನಟನೆಯ ಸಂಯೋಜನೆ.
ಬ್ಯಾಚುಲರ್ ಸುನಿಲ್ ತಮ್ಮ ಮೆಂಟರ್ ಹಾಗೂ ಲವ್ ಇಂಟರೆಸ್ಟ್ ಅಮೃತಾಗೆ ಪ್ರಪೋಸ್ ಮಾಡುವ ಮೂಲಕ ವೇದಿಕೆಯನ್ನು ಪ್ರೇಮಸೌರಭದಿಂದ ತುಂಬಿಸಿದರು. "ನನ್ನ ಪ್ರೀತಿಯ ಅಮ್ಮು, ಹೂವಿನ ಲೋಕಕ್ಕೆ ಸ್ವಾಗತ," ಎಂಬ ಶೈಲಿಯಲ್ಲಿ ಆರಂಭಿಸಿದ ಪ್ರಪೋಸಲ್, ಮುಂದುವರಿದು "ಎಲ್ಲರೂ ದಡ್ಡ ಅಂದ್ರು, ಆದ್ರೆ ನೀನು ಸುನಿಲ್ ಅನ್ನ ಸುನಿಲ್‌ನಾಗಿ ನನ್ನ ಜೊತೆ ಇದ್ದೀಯಾ" ಎಂಬ ಮನಕ್ಲೇಶ ಹುಟ್ಟುಹಾಕುವ ಮಾತುಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದರು.
ಅಮೃತಾಳ ಕಣ್ಣು ಮುಚ್ಚಿಸಿ ವೇದಿಕೆಗೆ ಕರೆದುಕೊಂಡು ಬಂದು, ಹೂವಿನ ಬೊಕ್ಕೆ ಕೊಟ್ಟು ಮಂಡಿಯೂರಿ ಪ್ರಪೋಸ್ ಮಾಡಿದ ಸುನಿಲ್ ಅವರ ಪ್ರಪೋಸಲ್ ನೋಡಿ ಜಡ್ಜಸ್ ಕೂಡ ಫುಲ್ ಥ್ರೀಲ್ ಆಗಿದ್ದಾರೆ. ಈ ಪ್ರಪೋಸಲ್ ಝೋನಿನಲ್ಲಿ ಸುನಿಲ್-ಅಮೃತಾ ಜೋಡಿಯ ಸಖತ್ ಕ್ಯಾಮಿಸ್ಟ್ರಿ ಎಲ್ಲರ ಗಮನ ಸೆಳೆಯಿತು. ಈ ಘಟನೆಯ ನಂತರ, ಈ ಜೋಡಿಯ ಹೆಸರು ಈಗ ಸ್ಯಾಂಡಲ್‌ವುಡ್ ಪ್ರೇಮಿಗಳ ನಡುವೆ ಹೆಚ್ಚು ಕೇಳಿಬರುತ್ತಿದ್ದು, 'ರಿಯಾಲಿಟಿ ಲವ್ ಸ್ಟೋರಿ'ಯಾದರೂ, ಅದು ನಿಜವೋ ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Related posts
Trending News
ಹೆಚ್ಚು ನೋಡಿ“ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ ಅವತ್ತು ನಾನು ಬದುಕಿರೋದಿಲ್ಲ” – ಎಸ್. ನಾರಾಯಣ್ ಭಾವನಾತ್ಮಕ ಪ್ರತಿಕ್ರಿಯೆ
