Back to Top

ಸ್ಪೆಷಲ್ ಫೋಟೋಶೂಟ್‌ನಲ್ಲಿ ಮಿಂಚಿದ ಕಾಟೇರನ ಕ್ವೀನ್ ಆರಾಧನಾ! – ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್!

SSTV Profile Logo SStv September 4, 2025
ಸ್ಪೆಷಲ್ ಫೋಟೋಶೂಟ್‌ನಲ್ಲಿ ಮಿಂಚಿದ ಕಾಟೇರನ ಕ್ವೀನ್ ಆರಾಧನಾ!
ಸ್ಪೆಷಲ್ ಫೋಟೋಶೂಟ್‌ನಲ್ಲಿ ಮಿಂಚಿದ ಕಾಟೇರನ ಕ್ವೀನ್ ಆರಾಧನಾ!

ಸ್ಯಾಂಡಲ್‌ವುಡ್‌ನ ಕಾಟೇರ ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದ ನಟಿ ಆರಾಧನಾ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾರಣವೇನೆಂದರೆ ಅವರ ಹೊಸ ಸ್ಪೆಷಲ್ ಫೋಟೋಶೂಟ್. ಕಪ್ಪು ಬಣ್ಣದ ಪಾರದರ್ಶಕ ಸೀರೆಯಲ್ಲಿ ಮಿಂಚಿದ ಆರಾಧನಾ, ತಮ್ಮ ಅಭಿಮಾನಿಗಳಿಗೆ ಹೊಸ ಲುಕ್‌ನಲ್ಲಿ ಸರ್ಪ್ರೈಸ್ ನೀಡಿದ್ದಾರೆ. ಕಾಟೇರ ಯಶಸ್ಸಿನ ಬಳಿಕ ಆರಾಧನಾ ತಮ್ಮ ಮುಂದಿನ ಚಿತ್ರವನ್ನು ಆರಿಸುವಲ್ಲಿ ಎಚ್ಚರಿಕೆಯಿಂದಿದ್ದರು. ಬಹು ದಿನಗಳ ನಂತರ ಅವರು ಆರಿಸಿಕೊಂಡಿರುವ ಚಿತ್ರವೇ “ನೆಕ್ಸ್ಟ್ ಲೆವೆಲ್”. ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕ ತರುಣ್ ಶಿವಪ್ಪ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲೇ ಈ ಸಿನಿಮಾ ತೆರೆಗೆ ಬರಲಿದ್ದು, ಆರಾಧನಾಕ್ಕೆ ಮತ್ತೊಂದು ದೊಡ್ಡ ಅವಕಾಶವಾಗಿದೆ.

ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಜತೆಯಲ್ಲಿ ನಟಿಸುತ್ತಿದ್ದಾರೆ. ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಆರಾಧನಾ, ಈಗ ಉಪೇಂದ್ರ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಖುಷಿಯಲ್ಲಿದ್ದಾರೆ. ಹೊಸ ಉತ್ಸಾಹದಲ್ಲಿ ತೇಲುತ್ತಿರುವ ಆರಾಧನಾ, ಇತ್ತೀಚೆಗೆ ಮಾಡಿದ ಫೋಟೋಶೂಟ್‌ನಲ್ಲಿ ಕಪ್ಪು ಬಣ್ಣದ ಪಾರದರ್ಶಕ ಸೀರೆ ಮತ್ತು ಸ್ಲೀವ್‌ಲೆಸ್ ಬ್ಲೌಸ್ ತೊಟ್ಟು ಆಕರ್ಷಕವಾಗಿ ಮಿಂಚಿದ್ದಾರೆ. ಓಪನ್ ಹೇರ್‌ ಹಾಗೂ ವಿಭಿನ್ನ ಪೋಸ್‌ಗಳಲ್ಲಿ ಅವರು ನೀಡಿರುವ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆ ಗಳಿಸುತ್ತಿದೆ.

ಆರಾಧನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್. ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫೋಟೋಗಳು, ವಿಡಿಯೋಗಳು, ಜಿಮ್ ವರ್ಕೌಟ್ ಕ್ಲಿಪ್‌ಗಳು ಹಂಚಿಕೊಳ್ಳುತ್ತಾ ಅಭಿಮಾನಿಗಳ ಜೊತೆ ಸಂಪರ್ಕ ಸಾಧಿಸುತ್ತಾರೆ. ಆರೋಗ್ಯದ ದೃಷ್ಟಿಯಿಂದ ದೇಹವನ್ನು ಫಿಟ್‌ ಆಗಿ ಕಾಪಾಡಿಕೊಳ್ಳುವಲ್ಲಿ ಅವರು ಹೆಚ್ಚು ಗಮನ ಕೊಡುತ್ತಾರೆ. ಚಿತ್ರರಂಗದಲ್ಲಿ ದೀರ್ಘಕಾಲ ಉಳಿದುಕೊಳ್ಳುವ ಗುರಿ ಹೊಂದಿರುವ ಆರಾಧನಾ, ತಮ್ಮ ಅಮ್ಮನ ಹಳೆಯ ಸಿನಿಮಾಗಳನ್ನು ರಿಮೇಕ್ ಮಾಡುವ ಆಸೆ ಇಲ್ಲವೆಂದು ಹೇಳಿದ್ದಾರೆ. ಏಕೆಂದರೆ ಆ ಚಿತ್ರಗಳು ಈಗಾಗಲೇ ಕ್ಲಾಸಿಕ್ ಆಗಿವೆ. ಬದಲಿಗೆ ತಮ್ಮದೇ ಆದ ವಿಭಿನ್ನ ಹಾದಿಯಲ್ಲಿ ನಡೆದು, ತಮ್ಮದೇ ಛಾಪು ಮೂಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಕಾಟೇರನ ಕ್ವೀನ್ ಆರಾಧನಾ, ಹೊಸ ಲುಕ್ ಮತ್ತು ಹೊಸ ಸಿನಿಮಾದ ಮೂಲಕ ಮತ್ತೊಮ್ಮೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. “ನೆಕ್ಸ್ಟ್ ಲೆವೆಲ್” ಸಿನಿಮಾ ಅವರ ಕರಿಯರ್‌ಗೆ ನಿಜವಾಗಿಯೂ ನೆಕ್ಸ್ಟ್ ಲೆವೆಲ್ ಬೂಸ್ಟ್ ಕೊಡಬಹುದೇ ಎಂಬ ನಿರೀಕ್ಷೆ ಈಗ ಅಭಿಮಾನಿಗಳಲ್ಲಿ ಹೆಚ್ಚಿದೆ.