"ಏಂಜಲ್ ಲುಕ್‌ನಲ್ಲಿ ಮಿಂಚಿದ ಸಪ್ತಮಿ ಗೌಡ – ಪಡ್ಡೆ ಹುಡುಗರಿಗೆ ನಿದ್ದೆ ಇಲ್ಲ!"


'ಕಾಂತಾರ' ಖ್ಯಾತಿಯ ನಟಿ ಸಪ್ತಮಿ ಗೌಡ ಇದೀಗ ತಮ್ಮ ಹೊಸ ಫೋಟೋಶೂಟ್‌ನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಕೆಂಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಸ್ಲೀವ್‌ಲೆಸ್ ಟಾಪ್ ಧರಿಸಿ ನೀಡಿದ ಹಾಟ್ ಮತ್ತು ಕ್ಯೂಟ್ ಪೋಸ್‌ಗಳಿಗೆ ಪಡ್ಡೆ ಹುಡುಗರ ಹೃದಯವೇ ನಿಲ್ಲದಂತಾಗಿದೆ!
ಅಭಿಮಾನಿಗಳು ಅವರ ನಗುವಿಗೆ ಫಿದಾ ಆಗಿ, "ಏಂಜಲ್", "ಸಿಂಗಾರ ಸಿರಿ", "ನಿಮ್ಮ ಎದೆಗೆ ಕೊಳ್ಳಿ ಇಡ್ತೀರಿ" ಎಂಬಂತೆ ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸಪ್ತಮಿ ಗೌಡ ಅವರ ಸ್ಟೈಲಿಶ್ ಹಾಗೂ ಸೌಂದರ್ಯಮಯ ಲುಕ್ ಇದೀಗ ಫ್ಯಾಷನ್ ಐಕಾನ್ ಆಗಿ ಹೊರಹೊಮ್ಮುತ್ತಿದೆ. 2020ರಲ್ಲಿ 'ಪಾಪ್‌ಕಾರ್ನ್ ಮಂಕಿ ಟೈಗರ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಸಪ್ತಮಿ, 2022ರಲ್ಲಿ 'ಕಾಂತಾರ' ಮೂಲಕ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡರು. ನಂತರ 'ದಿ ವ್ಯಾಕ್ಸಿನ್ ವಾರ್' ನಲ್ಲಿ ಬಾಲಿವುಡ್ ಎಂಟ್ರಿ ಕೊಟ್ಟರು.
ಈಗ ಅವರು ತೆಲುಗು ನಟ ನಿತಿನ್ ಜೊತೆ 'ಮೂಡ್ ಆಫ್ ತಮ್ಮುಡು' ಚಿತ್ರದ ಮೂಲಕ ಟಾಲಿವುಡ್ ಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ಹಳ್ಳಿ ಹುಡುಗಿ ‘ರತ್ನ’ ಪಾತ್ರದಲ್ಲಿ ಮಿಂಚಲಿದ್ದಾರೆ. ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಫ್ಯಾನ್ಸ್‌ಗೆ ಭಾರೀ ನಿರೀಕ್ಷೆ ಮೂಡಿಸಿದೆ. ಇದನ್ನಷ್ಟೇ ಅಲ್ಲ, ಅಭಿನಯ ಚತುರ ಸತೀಶ್ ನೀನಾಸಂ ನಟಿಸುತ್ತಿರುವ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಶೂಟಿಂಗ್ ಕೂಡ ಸಪ್ತಮಿ ಪೂರ್ಣಗೊಳಿಸಿದ್ದಾರೆ. ಇದೀಗ ಅವರ ಚಿತ್ರಪಟಗಳು ಹಾಟ್ ಸಬ್ಜೆಕ್ಟ್ ಆಗಿವೆ!
Related posts
Trending News
ಹೆಚ್ಚು ನೋಡಿ“ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ ಅವತ್ತು ನಾನು ಬದುಕಿರೋದಿಲ್ಲ” – ಎಸ್. ನಾರಾಯಣ್ ಭಾವನಾತ್ಮಕ ಪ್ರತಿಕ್ರಿಯೆ
