ರಾಜ್ ಬಿ ಶೆಟ್ಟಿ ಸೋಷಿಯಲ್ ಮೀಡಿಯಾಗೆ ಗುಡ್ ಬೈ! ಕಾರಣ ಏನು?


ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಬೆಳೆಸಿಕೊಂಡಿರುವ ನಿರ್ದೇಶಕ, ನಟ ಮತ್ತು ಬರಹಗಾರ ರಾಜ್ ಬಿ ಶೆಟ್ಟಿ ಅವರು ತಮ್ಮ ಇತ್ತೀಚಿನ ಸಿನಿಮಾ ‘ಸು ಫ್ರಮ್ ಸೋ’ ಮೂಲಕ ಅಪಾರ ಯಶಸ್ಸು ಕಂಡಿದ್ದಾರೆ. ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರ ಮೆಚ್ಚುಗೆ ಪಡೆದು, ಇದೀಗ ನೂರು ಕೋಟಿ ಕ್ಲಬ್ ಸೇರಿಕೊಂಡು ಕನ್ನಡ ಸಿನಿಮಾ ಲೋಕದಲ್ಲಿ ಮತ್ತೊಂದು ಮೈಲುಗಲ್ಲು ನಿರ್ಮಿಸಿದೆ. ಇಂತಹ ಯಶಸ್ಸಿನ ಮಧ್ಯೆ ರಾಜ್ ಬಿ ಶೆಟ್ಟಿ ಒಂದು ಅಚ್ಚರಿಯ ನಿರ್ಧಾರ ಮಾಡಿದ್ದಾರೆ. ಅವರು ಸೋಷಿಯಲ್ ಮೀಡಿಯಾ ಬಳಕೆಯಿಂದ ಸಂಪೂರ್ಣವಾಗಿ ದೂರವಾಗಲು ತೀರ್ಮಾನಿಸಿದ್ದಾರೆ. ಆದರೆ ಅವರ ಅಧಿಕೃತ ಖಾತೆಗಳು ಖಾಲಿ ಇರಲಿಲ್ಲ ಅವನ್ನು ಅವರ ತಂಡವೇ ನಿರ್ವಹಿಸಲಿದ್ದಾರೆ. ಸಿನಿಮಾ ಪ್ರಚಾರದ ಸಮಯದಲ್ಲಿ ಮಾತ್ರ ಅವರು ಸ್ವತಃ ಹಾಜರಾಗಲಿದ್ದಾರೆ ಎಂದು ಘೋಷಿಸಿದ್ದಾರೆ.
ರಾಜ್ ಬಿ ಶೆಟ್ಟಿ ತಮ್ಮ ಮುಂದಿನ ಸಿನಿಮಾ ಕೆಲಸಗಳ ಮೇಲೆ ಸಂಪೂರ್ಣ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. “ಯಶಸ್ಸಿನ ಹಿಂದೆ ಓಡದೆ, ಹೊಸ ಪ್ರಯೋಗಗಳನ್ನು ಮಾಡಲು ಬಯಸುತ್ತೇನೆ” ಎಂದು ಅವರು ಹೇಳಿಕೊಂಡಿದ್ದಾರೆ. ಹೀಗಾಗಿ ಈಗಿನ ದಿನಗಳಲ್ಲಿ ತಮ್ಮ ಸಮಯವನ್ನು ಬರವಣಿಗೆ ಮತ್ತು ಸಿನಿಮಾಗಳಿಗೆ ಮೀಸಲಾಗಿಸುತ್ತಿದ್ದಾರೆ. ರಾಜ್ ಅವರು ಈಗಾಗಲೇ ಒಂದು ಥ್ರಿಲ್ಲರ್ ಕಥೆ ಬರೆಯುತ್ತಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಅಲ್ಲದೆ ಅವರು ಹಾಸ್ಯದ ಚಿತ್ರಗಳನ್ನು ಮಾಡುವುದು ತಮ್ಮ ಉದ್ದೇಶವಲ್ಲ ಎಂದು ಕೂಡ ಹೇಳಿದ್ದಾರೆ. ಪ್ರತಿ ಸಿನಿಮಾದಲ್ಲೂ ಹೊಸತನ ತಂದುಕೊಡುವುದು ಅವರ ಕನಸು.
‘ಸು ಫ್ರಮ್ ಸೋ’ ಸಿನಿಮಾ ಕೇವಲ ಕನ್ನಡದಲ್ಲೇ ಅಲ್ಲ, ತಮಿಳು ಮತ್ತು ಹಿಂದಿ ಪ್ರೇಕ್ಷಕರ ಮನಗೂ ತಲುಪಿದೆ. ಈ ಚಿತ್ರ ರಿಮೇಕ್ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ. ಹೀಗಾಗಿ ರಾಜ್ ಅವರ ಕೆಲಸ ಈಗ ಪರಭಾಷೆಯಲ್ಲಿಯೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದರ ಜೊತೆಗೆ, ಅವರು ಕರ್ನಾಟಕದಲ್ಲಿ ಹಂಚಿಕೆ ಮಾಡುತ್ತಿರುವ ಮಲಯಾಳಂ ಸಿನಿಮಾ ‘ಲೋಕಃ’ ಕೂಡ ಸೂಪರ್ ಹಿಟ್ ಆಗಿದೆ. ಕೇವಲ ಎರಡು ದಿನಗಳಲ್ಲಿ 6.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಚಿತ್ರ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ನಿರೀಕ್ಷೆಯಿದೆ.
ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದರೂ, ರಾಜ್ ಬಿ ಶೆಟ್ಟಿ ಯಶಸ್ಸನ್ನು ಬೆನ್ನಟ್ಟದೆ, ಹೊಸ ಹೊಸ ಪ್ರಯತ್ನಗಳತ್ತ ಗಮನ ಹರಿಸುತ್ತಿದ್ದಾರೆ. ಅವರ ಈ ನಿರ್ಧಾರ ಕೇವಲ ಕನ್ನಡ ಸಿನಿರಂಗಕ್ಕೆ ಮಾತ್ರವಲ್ಲ, ಸಂಪೂರ್ಣ ಭಾರತೀಯ ಸಿನಿಪ್ರಪಂಚಕ್ಕೆ ಸ್ಫೂರ್ತಿದಾಯಕವಾಗಿದೆ. ಈಗ ಅಭಿಮಾನಿಗಳ ನಿರೀಕ್ಷೆ ರಾಜ್ ಬಿ ಶೆಟ್ಟಿ ಬರೆಯುತ್ತಿರುವ ಆ ಹೊಸ ಥ್ರಿಲ್ಲರ್ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವುದರ ಮೇಲೆ!
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
