"ರಾಧಿಕಾಗೆ ನಾನು ಕೆಜಿಗಟ್ಟಲೆ ಚಿನ್ನ ಕೊಡ್ಸಿದ್ದೀನಿ" – ಯಶ್ ತಾಯಿ ಪುಷ್ಪಾ ಅರುಣ್ಕುಮಾರ್ ಮಾತು ವೈರಲ್


ಯಶ್ ತಾಯಿ ಮತ್ತು ಪಿಎ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕಿ ಪುಷ್ಪಾ ಅರುಣ್ಕುಮಾರ್ ಅವರು ಯಾವಾಗಲೂ ತಮ್ಮ ನೇರ ಮತ್ತು ಧೈರ್ಯಶಾಲಿ ಮಾತುಗಳಿಂದ ಸುದ್ದಿಯಲ್ಲಿರುತ್ತಾರೆ. ಆದರೆ, ಅವರು ಹೇಳುವ ಪ್ರತಿಯೊಂದು ಮಾತು ಪ್ರೇಕ್ಷಕರಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುತ್ತದೆ.
'ಕೊತ್ತಲವಾಡಿ' ಚಿತ್ರದ ಪ್ರಚಾರಕ್ಕೆ ಯಶ್ ಹಾಜರಾಗದ ಹಿನ್ನೆಲೆಯಲ್ಲಿ ತಾಯಿ–ಮಗನ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಗಾಸಿಪ್ಗಳು ಹರಿದಾಡಿದ್ದವು. ಆದರೆ ಪುಷ್ಪಾ ಅರುಣ್ಕುಮಾರ್ ಈ ಮಾತಿಗೆ ತೆರೆ ಎಳೆದಿದ್ದಾರೆ. ಅವರ ಮಾತಿನಲ್ಲಿ "ಯಶ್ ತನ್ನ ಸಿನಿಮಾಗಳಲ್ಲಿ ಬ್ಯುಸಿ ಇದ್ದಾನೆ. ಅವನಿಗೆ ಬಂದರೆ ಮಾತ್ರ ಸಿನಿಮಾ ಗೆಲ್ಲಲ್ಲ. ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸಬೇಕು. ನನ್ನ ನಿರ್ಮಾಣ ನಿರ್ಧಾರಗಳು, ಜವಾಬ್ದಾರಿಗಳು ನನ್ನದೇ. ಯಶ್ನ ಕೇಳಿ ಅಥವಾ ಅವನ ಹೆಸರಿನ ನೆರವಿನಿಂದ ನಾನು ಸಿನಿಮಾ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಪುಷ್ಪಾ ಮತ್ತೊಂದು ಬಾಂಬ್ ಬಿಟ್ಟರು. "ನಾನು ನಮ್ಮ ರಾಧಿಕಾಗೆ ಕೆಜಿಗಟ್ಟಲೆ ಚಿನ್ನ ಕೊಡ್ಸಿದ್ದೀನಿ. ಅದನ್ನು ತರಲು ನಾನು ಹೋಗಿದ್ದೆ. ಯಶ್ ಬರ್ಲಿಲ್ಲ, ರಾಧಿಕಾ ತಾಯಿ ಬಂದಿದ್ರು. ಚಿನ್ನ ಕೊಟ್ಟದ್ದು ನಾವೇ, ಆದರೆ ಅನೇಕರನ್ನು ಕರೆದುಕೊಂಡು ಹೋಗಿ ಶಾಪಿಂಗ್ ಮಾಡಿಸಲಿಲ್ಲ. ಸಿನಿಮಾ ಮಾಡುವಾಗಲೂ ಯಶ್ನ ಕೇಳಿ, ಅವನಿಗೆ ಭಯಭಕ್ತಿಯಾಗಿ ಮಾಡ್ಬೇಕು ಅಂತಲ್ಲ. ನಾವು ಯಜಮಾನರ ಜೊತೆ ನಿರ್ಧಾರ ಮಾಡಿದ್ವಿ" ಎಂದು ಹೇಳಿದ್ದಾರೆ.
"ಯಶ್ಗೆ ಸಿನಿಮಾ ಹಾಳು ಮಾಡುವವರನ್ನು ಕಂಡರೆ ಅವನು ತಡೆದು ನಿಲ್ಲ್ತಾನೆ. ಅದು ನಾನು ಆಗಿದ್ದರೂ ಕೂಡ ಹೇಳ್ತಾನೆ. ಯಶ್ಗೆ ನಮ್ಮ ನಿರ್ಧಾರಗಳಲ್ಲಿ ತಿಳುವಳಿಕೆ ಇದೆ. ಅವನು ತನ್ನ ಕೆಲಸ ಮಾಡ್ತಾನೆ, ನಾವು ನಮ್ಮದನ್ನು ನೋಡ್ಕೊಳ್ತೀವಿ. ಪ್ರತಿದಿನ ಅವನ ಜೊತೆ ಸಿನಿಮಾ ವಿಚಾರ ಮಾತನಾಡಿ ಸಮಯ ವ್ಯರ್ಥ ಮಾಡೋದಿಲ್ಲ" ಎಂದು ಹೇಳಿದರು. ಪ್ರಥ್ವಿ ಅಂಬರ್ ಮತ್ತು ಕಾವ್ಯಾ ಶೈವ ನಟನೆಯ ‘ಕೊತ್ತಲವಾಡಿ’ ಚಿತ್ರವನ್ನು ಆಗಸ್ಟ್ 1ರಂದು ಬಿಡುಗಡೆ ಮಾಡಲಾಯಿತು. ಆದರೆ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. "ಚಿತ್ರ ಚೆನ್ನಾಗಿ ಬಂದಿದೆ, ನಮ್ಮ ಟೇಸ್ಟ್ಗೆ ತಕ್ಕಂತೆ ಎಲ್ಲವನ್ನು ಕೊಟ್ಟು ಮಾಡಿದ್ದೀವಿ. ಚಿತ್ರ ತಂಡದ ಎಲ್ಲರಿಗೂ ಕ್ರೆಡಿಟ್ಟು ಹೋಗಬೇಕು. ಇವತ್ತು ಬಂದು ನಾಳೆ ಹೋಗುವವರಲ್ಲ ನಾವು" ಎಂದು ಪುಷ್ಪಾ ಹೇಳಿದ್ದಾರೆ.
ಆದರೆ ಥಿಯೇಟರ್ ಹಂಚಿಕೆಯಲ್ಲಿ ಸಮಸ್ಯೆ ಎದುರಾದುದರಿಂದ ಸಿನಿಮಾ ಹಿನ್ನಡೆ ಕಂಡಿತು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ‘ಕೊತ್ತಲವಾಡಿ’ ಬಳಿಕ ಪಿಎ ಪ್ರೊಡಕ್ಷನ್ಸ್ ಸಂಸ್ಥೆ ಈಗ ಶರಣ್ ಹೀರೋ ಆಗಿ ಹೊಸ ಚಿತ್ರ ನಿರ್ಮಿಸಲು ಮುಂದಾಗಿದೆ. ಈ ಚಿತ್ರವನ್ನು ಶ್ರೀರಾಜ್ ನಿರ್ದೇಶಿಸುವರು ಎನ್ನಲಾಗಿದೆ. ಒಟ್ಟಿನಲ್ಲಿ, ಪುಷ್ಪಾ ಅರುಣ್ಕುಮಾರ್ ಅವರು ತಮ್ಮ ನೇರ ಮಾತಿನಿಂದ ಯಾವಾಗಲೂ ಚರ್ಚೆಗೆ ಕಾರಣವಾಗುತ್ತಾರೆ. ಆದರೆ ಅವರ ಉದ್ದೇಶ ಸ್ಪಷ್ಟ "ಸಿನಿಮಾ ಪ್ರೇಕ್ಷಕರು ಗೆಲ್ಲಿಸಬೇಕು, ಯಾರೊಬ್ಬರ ಹೆಸರಿಂದಲ್ಲ" ಎಂಬ ಸಂದೇಶ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
