Back to Top

ಟ್ವಿಟ್ಟರ್‌ನಲ್ಲಿ ಜೋರಾದ ಚರ್ಚೆ – "ಮಿಲನಾ"ನಾ? "ಗೂಗ್ಲಿ"ನಾ? ಯಾವ ಸಿನಿಮಾ ಬೆಸ್ಟ್?

SSTV Profile Logo SStv August 30, 2025
"ಮಿಲನಾ Vs ಗೂಗ್ಲಿ" ಟ್ವಿಟ್ಟರ್ ಫೈಟ್
"ಮಿಲನಾ Vs ಗೂಗ್ಲಿ" ಟ್ವಿಟ್ಟರ್ ಫೈಟ್

ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಷಯ ಯಾವಾಗ ವೈರಲ್ ಆಗುತ್ತದೋ ಹೇಳೋಕೆ ಆಗೋದಿಲ್ಲ. ಅಭಿಮಾನಿಗಳು ಸುಖಾಸುಮ್ಮನೆ ಚರ್ಚೆ ಶುರುಮಾಡಿ, ಅದನ್ನ ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಇತ್ತೀಚಿಗೆ ಟ್ವಿಟ್ಟರ್ (ಇಂದಿನ ಎಕ್ಸ್) ನಲ್ಲಿ ಅಪ್ಪು ಅಭಿಮಾನಿಗಳು ಹಾಗೂ ಯಶ್ ಅಭಿಮಾನಿಗಳ ನಡುವೆ “ಮಿಲನಾ vs ಗೂಗ್ಲಿ” ಚರ್ಚೆ ಜೋರಾಗಿದೆ.

2007ರಲ್ಲಿ ಬಿಡುಗಡೆಯಾದ ಮಿಲನಾ ಪ್ರೇಕ್ಷಕರ ಮನದಲ್ಲಿ ಅಜರಾಮರವಾದ ಸಿನಿಮಾ. ಪ್ರಕಾಶ್ ನಿರ್ದೇಶನ, ಪುನೀತ್ ರಾಜ್‌ಕುಮಾರ್ ಮತ್ತು ಪಾರ್ವತಿ ಮೆನನ್ ಅಭಿನಯ ಈ ಜೋಡಿ ಪ್ರೇಕ್ಷಕರ ಹೃದಯ ಗೆದ್ದಿತ್ತು. ಫ್ಯಾಮಿಲಿ ಎಂಟರ್‌ಟೈನರ್ ಆಗಿ, 365 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡ ದಾಖಲೆ. ಮನೋಮೂರ್ತಿ ಅವರ ಮಧುರ ಸಂಗೀತ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಆಕಾಶ್ ಮತ್ತು ಅಂಜಲಿ ಪಾತ್ರಗಳ ಭಾವನಾತ್ಮಕ ಯಾತ್ರೆ ಪ್ರೇಕ್ಷಕರಿಗೆ ಹತ್ತಿರವಾಯಿತು.

"ಗೂಗ್ಲಿ" – ಯಶ್‌ಗೆ ಸಿನಿ ಜೀವನದ ಟರ್ನಿಂಗ್ ಪಾಯಿಂಟ್ , 2013ರಲ್ಲಿ ಬಿಡುಗಡೆಯಾದ ಗೂಗ್ಲಿ ಯುವಕರ ಮನಸೂರೆಗೊಂಡ ಸಿನಿಮಾ. ಪವನ್ ಒಡೆಯರ್ ನಿರ್ದೇಶನದಲ್ಲಿ ಯಶ್ ಮತ್ತು ಕೃತೀ ಕರ್ಬಂದಾ ಜೋಡಿ ಸೆಳೆಯಿತು. ಯುವಕರ ಪ್ರೀತಿಯ ಕಥೆ, ರೋಮ್ಯಾಂಟಿಕ್ ಹಾಡುಗಳು, ಶರತ್ ಪಾತ್ರದಲ್ಲಿ ಯಶ್ ಅವರ ನೈಸರ್ಗಿಕ ಅಭಿನಯ. ಯೂಟ್ಯೂಬ್‌ನಲ್ಲಿ ಹಿಂದಿ ಡಬ್ ಮಾಡಿದ್ದ ಸಿನಿಮಾ ಕೋಟ್ಯಾಂತರ ವೀಕ್ಷಣೆ ಪಡೆದಿದೆ. ಯಶ್ ಅವರ ವೃತ್ತಿಜೀವನದಲ್ಲಿ ಗೂಗ್ಲಿ ಒಂದು ಪ್ರಮುಖ ಹಂತ.

ಇತ್ತೀಚಿನ ಒಂದು ಟ್ವೀಟ್‌ನಿಂದ ಚರ್ಚೆ ಪ್ರಾರಂಭವಾಯಿತು – “ಗೂಗ್ಲಿ ಮಿಲನಾ ಗಿಂತ ಉತ್ತಮ ಸಿನಿಮಾ” ಎಂದು ಒಬ್ಬ ನೆಟ್ಟಿಗ ಬರೆಯುತ್ತಿದ್ದಂತೆ ಅಪ್ಪು ಅಭಿಮಾನಿಗಳು ತಿರುಗೇಟು ಕೊಟ್ಟರು.

  • ಅಪ್ಪು ಫ್ಯಾನ್ಸ್: ಮಿಲನಾ ಬಾಕ್ಸಾಫೀಸ್, ಪ್ರೇಕ್ಷಕರ ಪ್ರೀತಿ, ದೀರ್ಘಾವಧಿಯ ಪ್ರದರ್ಶನ – ಎಲ್ಲ ಅಂಶದಲ್ಲೂ ಬೆಸ್ಟ್.
  • ಯಶ್ ಫ್ಯಾನ್ಸ್: ಗೂಗ್ಲಿ ಯೂಟ್ಯೂಬ್ ಹಿಟ್, ಯುವಕರ ಕ್ರೇಜ್, ಪವರ್‌ಫುಲ್ ಡೈಲಾಗ್‌ಗಳು.

ಇದಲ್ಲದೆ, ಗೋಕುಲ ಸಿನಿಮಾದಲ್ಲಿಯೇ ಮಿಲನಾ ಪೋಸ್ಟರ್‌ಗೆ ರೆಫರೆನ್ಸ್ ಇದೆ ಎಂದು ಅಪ್ಪು ಅಭಿಮಾನಿಗಳು ನೆನಪಿಸಿದರು. ನೆಟ್ಟಿಗರು “ಮಿಲನಾ vs ಗೂಗ್ಲಿ” ಚರ್ಚೆಗೆ AI ಸಹಾಯ ಪಡೆದು, ಗ್ರೋಕ್ ಚಾಟ್‌ಬಾಟ್‌ನಿಂದ ಅಭಿಪ್ರಾಯ ಕೇಳಿದ್ದಾರೆ. ಅದರಲ್ಲಿ “ಮಿಲನಾ ಎಲ್ಲಾ ದೃಷ್ಟಿಯಿಂದ ಬೆಸ್ಟ್” ಎಂಬ ತೀರ್ಮಾನ ಬಂದಿದೆ.

"ಮಿಲನಾ" ಮತ್ತು "ಗೂಗ್ಲಿ" ಎರಡೂ ಕಾಲಕ್ಕಾಲಕ್ಕೆ ನೆನಪಾಗುವ ಫೀಲ್‌ಗುಡ್ ಸಿನಿಮಾಗಳು. ಮಿಲನಾ – ಫ್ಯಾಮಿಲಿ ಎಂಟರ್‌ಟೈನರ್, ಗೂಗ್ಲಿ – ಯುವಕರ ಪ್ರೀತಿಯ ಹಬ್ಬ. ಪುನೀತ್ ರಾಜ್‌ಕುಮಾರ್ ಅವರ ಅಭಿನಯದ ಆಳತೆ ಮತ್ತು ಯಶ್ ಅವರ ಯುವಜನತೆಯ ಕನೆಕ್ಷನ್ ಎರಡೂ ಸಿನಿಮಾಗಳ ವಿಶೇಷತೆ. ಹೀಗಾಗಿ, ಯಾರು ಬೆಸ್ಟ್ ಅನ್ನೋದು ಚರ್ಚೆಗೆ ಬಿಟ್ಟರೆ, ಕನ್ನಡ ಸಿನೆಮಾ ಪ್ರೇಕ್ಷಕರಿಗೆ ಎರಡೂ ಸಿನಿಮಾಗಳು ಸಮಾನವಾಗಿ ಹೆಮ್ಮೆಯದ್ದು.