Back to Top

ವೈಷ್ಣವಿ - ಅನುಕೂಲ್ ಮಿಶ್ರಾ ಮದುವೆಯ ಬಳಿಕ ಮನಾಲಿ ಹನಿಮೂನ್‌ನಲ್ಲಿ ಮಿಂಚಿದ ನವ ದಂಪತಿ!

SSTV Profile Logo SStv June 26, 2025
“ಮನಾಲಿ ಹನಿಮೂನ್‌ನಲ್ಲಿ ಮಿಂಚಿದ ವೈಷ್ಣವಿ – ಅನುಕೂಲ್ ಮಿಶ್ರಾ ಜೋಡಿ!”
“ಮನಾಲಿ ಹನಿಮೂನ್‌ನಲ್ಲಿ ಮಿಂಚಿದ ವೈಷ್ಣವಿ – ಅನುಕೂಲ್ ಮಿಶ್ರಾ ಜೋಡಿ!”

ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ, ‘ಸೀತಾರಾಮ’ ಮತ್ತು ‘ಅಗ್ನಿಸಾಕ್ಷಿ’ ಧಾರಾವಾಹಿಗಳ ಮೂಲಕ ಪ್ರಖ್ಯಾತಿ ಪಡೆದಿರುವ ಅವರು, ಇತ್ತೀಚೆಗಷ್ಟೇ ಅನುಕೂಲ್ ಮಿಶ್ರಾ ಎಂಬುವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರೂ ಈಗ ಮನಾಲಿಯ ಚುಮು ಚುಮು ಚಳಿಯಲ್ಲಿ ಹನಿಮೂನ್ ಮೋಡ್ನಲ್ಲಿ ಕಾಲ ಕಳೆಯುತ್ತಿದ್ದಾರೆ.

ಛತ್ತೀಸ್‌ಘಡ್ ಮೂಲದ ಹಾಗೂ ಇಂಡಿಯನ್ ಆರ್ಮಿಯ ಲೆಫ್ಟಿನೆಂಟ್ ಆಗಿರುವ ಅನುಕೂಲ್ ಮಿಶ್ರಾ ಅವರೊಂದಿಗೆ ವೈಷ್ಣವಿ ಅರೇಂಜ್ಡ್ ಮ್ಯಾರೇಜ್ ಮೂಲಕ ಮದುವೆಯಾಗಿದ್ದು, ಮದುವೆಯ ನಂತರ ಅವರು ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಾರೆ.

ಮೊದಲು ದಂಪತಿ ರಿಷಿಕೇಶ್‌ಗೆ ತೆರಳಿ, ಅಲ್ಲಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದರು. ವಿಶೇಷವಾಗಿ ವೈಷ್ಣವಿ ಬಂಗೀ ಜಂಪ್ ಮಾಡಿದ್ದು ಅಭಿಮಾನಿಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನಂತರ, ಮನಾಲಿಗೆ ಪ್ರಯಾಣ ಬೆಳೆಸಿದ ಈ ಜೋಡಿ, ಅಲ್ಲಿನ ನೈಸರ್ಗಿಕ ಸಿರಿಯಲ್ಲಿ ತಮ್ಮ ಹೊಸ ಬದುಕಿನ ಪುಟಗಳನ್ನು ಬರೆಯುತ್ತಿದ್ದಾರೆ.

ಮನಾಲಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ಕ್ಯಾಮೆರಾ ಮುಂದೆ ಮೆರೆದ ವೈಷ್ಣವಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಿಮಪಾತದ ಮಧ್ಯೆ ಖುಷಿಯಿಂದ ಮಿಂಚುತ್ತಿರುವ ಈ ಜೋಡಿ ಈಗ ನೆಟ್ಟಿಗರ ಮನಸೂರೆಗೊಳ್ಳುತ್ತಿದ್ದಾರೆ.