ಲೇಡಿ ಅಸಿಸ್ಟೆಂಟ್ ಡೈರೆಕ್ಟರ್‌ಗೆ ಓಂ ಪ್ರಕಾಶ್ ರಾವ್ ಕಠಿಣ ಪದ – ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್!


ಕನ್ನಡದ ಮಾಸ್ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಅವರು ಯಾವಾಗಲೂ ನೇರವಾಗಿ, ಫಿಲ್ಟರ್ ಇಲ್ಲದೆ ಮಾತನಾಡುವ ಶೈಲಿಯಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಹೊಸ ಸಿನಿಮಾ ʻಫೀನಿಕ್ಸ್ʼ ಶೂಟಿಂಗ್ ವೇಳೆ ಲೇಡಿ ಅಸೋಸಿಯೇಟ್ ಡೈರೆಕ್ಟರ್‌ಗೆ ಬಳಸಿದ ಕಠಿಣ ಪದಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ʻಫೀನಿಕ್ಸ್ʼ ಸಿನಿಮಾದ ಶೂಟಿಂಗ್ ವೇಳೆ ಓಂ ಪ್ರಕಾಶ್ ರಾವ್ ಅವರು ಲೇಡಿ ಅಸೋಸಿಯೇಟ್ ಡೈರೆಕ್ಟರ್‌ಗೆ “ಏನೇ ದೊಡ್ಡ ರೋಗ ನಿನಗೆ ಬೇ*ವರ್ಸಿ? ನಿನಗೆ ಬೇಗ ಸಾವು ಬರಲಿ ಅಂತ ದೇವರ ಹತ್ತಿರ ಕೇಳಿಕೋ” ಎಂದು ಹೇಳಿರುವ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಿಂದಾಗಿ, ಅವರ ಫಿಲ್ಟರ್ ಇಲ್ಲದ ಮಾತುಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ಈ ಕುರಿತಾಗಿ ಮಾಧ್ಯಮವು ಕೇಳಿದ ಪ್ರಶ್ನೆಗೆ ಅವರು ಹೀಗೆ ಹೇಳಿದ್ದಾರೆ: “ನನಗೆ ಎಮೋಷನ್ ಬೇಕೇ ಬೇಕು. ನಾನು ಯಾವುದೇ ಕಾರಣಕ್ಕೂ ಚೇಂಜ್ ಆಗಲ್ಲ. ನನ್ನ ಸ್ಟೈಲ್ ಹಾಗೆ. ಯಾರಿಗಾದರೂ ಬೇಜಾರಾದರೆ ಕ್ಷಮಿಸಿ. ಆದರೆ ನನ್ನ ಶೈಲಿ ಹೀಗೇ ಇರುತ್ತದೆ. ನಾನೊಬ್ಬ ಕಮರ್ಷಿಯಲ್ ಥಿಯರಿ ಡೈರೆಕ್ಟರ್. ಆ ಎಮೋಷನ್ ಇರುತ್ತದೆ ಅಂದ್ರೆ ಕಲಾವಿದರಿಗೆ ಪವರ್ ಬರುತ್ತದೆ. ಅದಕ್ಕಾಗಿಯೇ ನಾನು ಹೀಗೆ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ಓಂ ಪ್ರಕಾಶ್ ರಾವ್ ಅವರ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಅವರು ಮಹಿಳಾ ಕೇಂದ್ರಿತ ಕಥೆಯ ಸಿನಿಮಾ ಮಾಡುತ್ತಿದ್ದಾರೆ. ನಿಜ ಘಟನೆಗಳ ಆಧಾರದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ “ಶೇಕ್ ಇಟ್ ಪುಷ್ಪವತಿ” ಖ್ಯಾತಿಯ ನಿಮಿಕಾ ರತ್ನಾಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಥೆ ಇಡೀ ಅವರ ಸುತ್ತಲೇ ಸುತ್ತುತ್ತದೆ.
“ಈ ಸಿನಿಮಾದ ಕಥೆ ಮೊದಲು ದರ್ಶನ್‌ಗಾಗಿ ರೆಡಿ ಮಾಡಿದ್ದೆ. ಆದರೆ ಅವರು ಬ್ಯುಸಿ ಇದ್ದರು. ಹೀಗಾಗಿ ಸ್ವಲ್ಪ ಗ್ಯಾಪ್ ಆಯ್ತು. ನಂತರ ನಿಮಿಕಾ ಜೊತೆ ಈ ಸಿನಿಮಾ ಮಾಡುವ ನಿರ್ಧಾರ ತೆಗೆದುಕೊಂಡೆ” ಎಂದು ಓಂ ಪ್ರಕಾಶ್ ರಾವ್ ಹಂಚಿಕೊಂಡಿದ್ದಾರೆ. “ʻಅಯ್ಯʼ ಸಿನಿಮಾದಿಂದ ನನಗೆ ಕಮರ್ಷಿಯಲ್ ಹಿಟ್ ಸಿಕ್ಕಿತು. ಸೂಪರ್ ಸ್ಟಾರ್ ಎಂದು ಹೆಸರು ಸಿಕ್ಕಿತು. ಆದರೆ ದರ್ಶನ್ ಯಾವತ್ತೂ ನನ್ನ ಹತ್ತಿರ ಕಥೆ ಕೇಳಿರಲಿಲ್ಲ. ಅವರು ನನಗೆ ಕೊಟ್ಟ ಬೆಲೆ, ಗೌರವ ನನಗೆ ತುಂಬಾ ಮಹತ್ವದ್ದಾಗಿದೆ” ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಓಂ ಪ್ರಕಾಶ್ ರಾವ್ ಅವರ ನೇರವಾದ, ಕೆಲವೊಮ್ಮೆ ಕಠಿಣವಾಗಿ ಕೇಳಿಸಿಕೊಳ್ಳುವ ಮಾತುಗಳು ಮತ್ತೆ ವಿವಾದ ಹುಟ್ಟುಹಾಕಿದ್ರೂ, ಅವರ ನಿರ್ದೇಶನ ಶೈಲಿ, ಕಥನ ಪಟುತೆ ಹಾಗೂ ಕಮರ್ಷಿಯಲ್ ಚಿತ್ರಗಳ ಯಶಸ್ಸು ಅವರಿಗೆ ವಿಭಿನ್ನ ಸ್ಥಾನವನ್ನು ನೀಡಿದೆ. ಈಗ ಅವರ ʻಫೀನಿಕ್ಸ್ʼ ಸಿನಿಮಾ ಯಾವ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಕಾದು ನೋಡಬೇಕಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
