ಕರ್ಲಿ ಹೇರ್ ಸ್ಟೈಲ್ ಮೆಂಟೇನ್ ಮಾಡೋದು ಕಷ್ಟ – ಕಿಚ್ಚ ಸುದೀಪ್ ನಿಜ ಹೇಳಿಕೆ ಫ್ಯಾನ್ಸ್ ನಡುವೆ ಟ್ರೆಂಡ್


ಕಿಚ್ಚ ಸುದೀಪ್ ಯಾವ ಲುಕ್ ಮಾಡಿದರೂ ಅದು ಟ್ರೆಂಡ್ ಆಗೋದು ಖಚಿತ. ಈಗಲೂ ಅದೇ ರೀತಿ ಆಗಿದೆ. ಮಾರ್ಕ್ (Mark) ಚಿತ್ರದ ನಿಮಿತ್ತ ಸುದೀಪ್ ಅವರು ಹೊಸ ಕರ್ಲಿ ಹೇರ್ ಸ್ಟೈಲ್ ಮಾಡಿಕೊಂಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ನಿರ್ದಯಿ ಹಾಗೂ ಮೃಗತ್ವದಿಂದ ಕೂಡಿದ ಪಾತ್ರಕ್ಕಾಗಿ ಡೈರೆಕ್ಟರ್ ವಿಜಯ್ ಕಾರ್ತಿಕೇಯನ್, ಸುದೀಪ್‌ಗೆ ಕರ್ಲಿ ಹೇರ್ ಸ್ಟೈಲ್ ಸೂಟ್ ಆಗುತ್ತದೆ ಅಂತ ಫೈನಲ್ ಮಾಡಿದ್ದಾರೆ. ಹೀಗಾಗಿ, ಈ ಹೊಸ ಲುಕ್ ಸ್ಕ್ರೀನ್ ಮೇಲೆ ಇನ್ನೂ ಹೆಚ್ಚಿನ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲಿದೆ ಅನ್ನೋದು ಪಕ್ಕಾ.
ಸುದೀಪ್ ಹೇಳೋ ಮಾತು ಪ್ರಕಾರ, ಈ ಸ್ಟೈಲ್ ನೋಡಲು ಚೆನ್ನಾಗಿದ್ದರೂ, ಮೆಂಟೇನ್ ಮಾಡೋದು ಅಷ್ಟು ಸುಲಭವಲ್ಲ. ಹೆಬ್ಬುಲಿ ಟೈಮ್‌ಲೂ ಹೇರ್ ಸ್ಟೈಲ್ ಕಷ್ಟ ಆಗಿತ್ತಂತೆ. ಆದರೆ ಈ ಕರ್ಲಿ ಹೇರ್ ಇನ್ನೂ ಕಷ್ಟ. ತಲೆಗೆ ಬೆರಳು ಹಾಕಿಕೊಳ್ಳೋಕೂ ಆಗೋದಿಲ್ಲ. ಸುಮ್ನೆ ಕುಳಿತಾಗ ಕೂದಲಿಗೆ ಕೈ ಹಾಕೋ ಸೌಲಭ್ಯವೇ ಇಲ್ಲ. ಅಂದರೆ, ಚೆನ್ನಾಗಿ ಕಾಣಿಸ್ತಾದರೂ, ಇದನ್ನು ಡೀಲ್ ಮಾಡೋದು ತುಂಬಾ ಕಷ್ಟ ಅನ್ನೋದು ಸುದೀಪ್ ನೇರವಾಗಿ ಹೇಳಿಕೊಂಡಿದ್ದಾರೆ.
ಈ ಹೊಸ ಲುಕ್ ಮಾಡಿದ ಸ್ಟೈಲಿಶ್ ಯಾರು ಅನ್ನೋದಕ್ಕೆ ಸುದೀಪ್ ಉತ್ತರ ಕೊಡಲೇ ಇಲ್ಲ. ಅವರ ಹೆಸರನ್ನು ಹೇಳಿದ್ರೆ ಅವರು ತುಂಬಾ ಬ್ಯುಸಿಯಾಗಿಬಿಡ್ತಾರೆ. ನಂತರ ನಮ್ಮ ಕೈಗೆ ಸಿಗೋದಿಲ್ಲ ಅಂತ ಹಾಸ್ಯವಾಗಿ ಹೇಳಿದ್ದಾರೆ. ಪ್ರೆಸ್ ಮೀಟ್‌ನಲ್ಲಿ ಒಬ್ಬ ಪತ್ರಕರ್ತ "ಈ ಹೇರ್ ಸ್ಟೈಲ್ ಮಾಡಿಸೋದು ಹೇಗೆ?" ಎಂದು ಕೇಳಿದಾಗ, ಕಿಚ್ಚ ಮಸ್ತ್ ಫನ್ನಿ ಉತ್ತರ ಕೊಟ್ಟಿದ್ದಾರೆ:
"ನಿತ್ಯ ಸ್ನಾನ ಮಾಡ್ಬೇಕು. ಕೂದಲನ್ನ ಉದ್ದು ಬಿಡ್ಬೇಕು. ಆಗಲೇ ಈ ಕರ್ಲಿ ಹೇರ್ ಆಗುತ್ತೆ!"
ಸುದೀಪ್ ಯಾವ ಲುಕ್ ಮಾಡಿದರೂ ಅದನ್ನ ಫಾಲೋ ಮಾಡುವ ಅಭಿಮಾನಿಗಳಿದ್ದಾರೆ. ಈಗಾಗಲೇ ಈ ಕರ್ಲಿ ಹೇರ್ ಸ್ಟೈಲ್ ಫೋಟೋಗಳು ಟ್ರೆಂಡ್ ಆಗುತ್ತಿವೆ. "ಮಾರ್ಕ್" ಸಿನಿಮಾ ತೆರೆಗೆ ಬರೋ ಹೊತ್ತಿಗೆ ಈ ಲುಕ್ ಮತ್ತಷ್ಟು ಕ್ರೇಜ್ ಕ್ರಿಯೇಟ್ ಮಾಡುವುದು ಖಚಿತ. ಒಟ್ಟಾರೆ, ಕಿಚ್ಚ ಸುದೀಪ್ ಕರ್ಲಿ ಹೇರ್ ಸ್ಟೈಲ್ ಫ್ಯಾನ್ಸ್‌ಗಿಂತಲೂ ಹೆಚ್ಚು ಚರ್ಚೆ ಹುಟ್ಟುಹಾಕಿದ್ದು, "ಮಾರ್ಕ್" ಸಿನಿಮಾದ ರಿಲೀಸ್‌ಗೂ ಮುಂಚೆ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
