ರಶ್ಮಿಕಾ–ವಿಜಯ್ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರಾ? ವಜ್ರದ ಉಂಗುರವೇ ಸಾಕ್ಷಿ!


ಟಾಲಿವುಡ್‌ನಲ್ಲಿ ಯಾವಾಗಲೂ ಚರ್ಚೆಯಾಗುವ ಹಾಟ್ ಜೋಡಿ ಎಂದರೆ ಖಂಡಿತವಾಗಿಯೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ. ‘ಗೀತಾ ಗೋವಿಂದಂ’ ಮೂಲಕ ಪರದೆ ಮೇಲೆ ಕಾಣಿಸಿಕೊಂಡ ಇವರ ಕೆಮಿಸ್ಟ್ರಿ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ನಂತರ ‘ಡಿಯರ್ ಕಾಂಬ್ರೆಡ್’ನಲ್ಲಿಯೂ ಜೊತೆಯಾದ ಈ ಜೋಡಿ, ಈಗ ಮತ್ತೆ ಮೂರನೇ ಬಾರಿಗೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ 2025 ವೇಳೆ ರಶ್ಮಿಕಾ ಮಂದಣ್ಣ ತಮ್ಮ ಕಾರಿನಲ್ಲಿ ಕುಳಿತು ಅಭಿಮಾನಿಗಳಿಗೆ ಕೈ ಬೀಸಿದ ವಿಡಿಯೋ ವೈರಲ್ ಆಯಿತು. ಆದರೆ, ಆ ಕ್ಷಣದಲ್ಲಿ ಅಭಿಮಾನಿಗಳ ಕಣ್ಣುಗಳು ಅವರ ಕೈಯಲ್ಲಿದ್ದ ವಜ್ರದ ಉಂಗುರದ ಮೇಲೆ ನೆಟ್ಟವು. ಅದೇ ಉಂಗುರವು “ರಶ್ಮಿಕಾ–ವಿಜಯ್ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ” ಎಂಬ ವದಂತಿಗಳಿಗೆ ಮತ್ತೊಮ್ಮೆ ಇಂಧನ ತುಂಬಿದೆ.
‘ಗೀತಾ ಗೋವಿಂದಂ’ನ ನಂತರ ವಿಜಯ್ ದೇವರಕೊಂಡ ದೊಡ್ಡ ಹಿಟ್ ನೀಡಿಲ್ಲ ಎಂಬುದನ್ನು ಒಪ್ಪಲೇಬೇಕು. ‘ಡಿಯರ್ ಕಾಂಬ್ರೆಡ್’ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಬಳಿಕ ಬಂದ ಹಲವು ಸಿನಿಮಾಗಳು ನಿರಾಶೆ ಮೂಡಿಸಿದವು. ರೌಡಿ ಬಾಯ್ಗೆ ಈಗ ಹೊಸ ಉಸಿರು ಬೇಕಾಗಿದೆ ಎನ್ನುವ ಅಭಿಪ್ರಾಯ ಚರ್ಚೆಯಲ್ಲಿದೆ.
ಈ ನಡುವೆ, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಮತ್ತೆ ಸಿನಿಮಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ನಿರ್ದೇಶಕ ರಾಹುಲ್ ಸಂಕೃತ್ಯನ್ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾ ಐತಿಹಾಸಿಕ ಹಿನ್ನೆಲೆಯೊಂದಿಗೆ ಬರುತ್ತದೆ. 1800ರ ದಶಕದ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ಆಧಾರಿತ ಕಥೆ ಇದಾಗಿದ್ದು, ರಶ್ಮಿಕಾ–ವಿಜಯ್ ಜೋಡಿ ಆರು ವರ್ಷಗಳ ಬಳಿಕ ಮತ್ತೆ ಬೆಳ್ಳಿ ಪರದೆಗೆ ಮರಳುತ್ತಿದೆ. ಇವರಿಬ್ಬರ ಸಂಬಂಧದ ಬಗ್ಗೆ ವದಂತಿಗಳು ಹೊಸದಲ್ಲ. “ಜಸ್ಟ್ ಫ್ರೆಂಡ್ಸ್” ಎನ್ನುತ್ತಲೇ ವಿದೇಶಗಳಲ್ಲಿ ಸುತ್ತಾಡಿ, ಅಭಿಮಾನಿಗಳ ಕ್ಯಾಮೆರಾಗಳಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿರುವ ಘಟನೆಗಳು ಎಲ್ಲರಿಗೂ ತಿಳಿದಿವೆ. ಪ್ರೇಮಿಗಳಂತೆ ಸುತ್ತಾಡಿದ ಫೋಟೋಗಳು ಮತ್ತು ವಿಡಿಯೋಗಳು ಅವರ ರೀಲ್–ರಿಯಲ್ ಲೈಫ್ ನಡುವಿನ ಗಡಿಯನ್ನು ಅಸ್ಪಷ್ಟಗೊಳಿಸಿವೆ.
ಈಗ ಎಲ್ಲರ ಗಮನ ಐತಿಹಾಸಿಕ ಸಿನಿಮಾದತ್ತ ತಿರುಗಿದೆ. “ರಶ್ಮಿಕಾ ವಿಜಯ್‌ಗೆ ಮತ್ತೆ ಸಕ್ಸಸ್ ತರುತ್ತಾರಾ?” ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಹಿಟ್ ಸಿನಿಮಾಗಳಲ್ಲಿ ಲಕ್ಕಿ ಗರ್ಲ್ ಎಂಬ ಹೆಸರು ಗಳಿಸಿರುವ ರಶ್ಮಿಕಾ, ತಮ್ಮ ಭಾವಿ ಪತಿಗೆ ಯಶಸ್ಸು ತಂದುಕೊಡಲಾರರಾ ಎಂಬ ಚರ್ಚೆಯೂ ಜೋರಾಗಿದೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೋಡಿಯ ಕಥೆ ಕೇವಲ ಸಿನಿಮಾದಲ್ಲ, ನಿಜ ಜೀವನದಲ್ಲಿಯೂ ಅಭಿಮಾನಿಗಳನ್ನು ಸೆಳೆಯುತ್ತಿದೆ. ವಿವಾಹ ವದಂತಿಗಳು ಎಷ್ಟೇ ಹರಿದಾಡುತ್ತಿದ್ದರೂ, ಈ ಜೋಡಿ ಒಂದಾಗಿ ಬರುವ ಮೂರನೇ ಸಿನಿಮಾ ಅವರಿಬ್ಬರಿಗೂ ಮತ್ತು ಅಭಿಮಾನಿಗಳಿಗೂ ಮಹತ್ವದ ತಿರುವಾಗಬಹುದು. ಈಗ ಅಭಿಮಾನಿಗಳ ಕುತೂಹಲ ಒಂದೇ: “ಈ ಸಿನಿಮಾ ವಿಜಯ್‌ಗೆ ಮರುಯಶಸ್ಸು ತಂದುಕೊಡುತ್ತದೆಯೇ? ಮತ್ತು ಈ ಜೋಡಿ ನಿಜವಾಗಿಯೂ ಜೀವನ ಸಂಗಾತಿಗಳಾಗುತ್ತಾರೆಯೇ?”
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
