ಶೋಕ್ದರ್ ಧನ್ವಿರ್ ಹುಟ್ಟುಹಬ್ಬಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿಯಿಂದ ಸ್ಪೆಷಲ್ ವಿಶ್!


ಕನ್ನಡ ಚಿತ್ರರಂಗದ ಜನಪ್ರಿಯ ನಟ ಶೋಕ್ದರ್ ಧನ್ವಿರ್ ಇಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತೀ ವರ್ಷ ಅಭಿಮಾನಿಗಳ ಜೊತೆ ಭರ್ಜರಿ ಸಂಭ್ರಮದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಧನ್ವಿರ್, ಈ ಬಾರಿ ಮಾತ್ರ ತಮ್ಮ ಅಭಿಮಾನಿಗಳ ಜೊತೆಗಿನ ಸೆಲೆಬ್ರೇಶನ್ಗೆ ಬ್ರೇಕ್ ಹಾಕಿದ್ದಾರೆ. ಆದರೂ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.
ಸ್ಯಾಂಡಲ್ವುಡ್ನ ಡಿ-ಬಾಸ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಮಗ ವಿನೀಶ್ ಧನ್ವಿರ್ಗೆ ತಮ್ಮ ಹೃದಯಸ್ಪರ್ಶಿ ಶುಭಾಶಯಗಳನ್ನು ಕೋರಿದ್ದಾರೆ. ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಧನ್ವಿರ್ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡು, ಧನ್ವಿರ್ಗಾಗಿ ತಮ್ಮ ಹಾರೈಕೆಗಳನ್ನು ತಿಳಿಸಿದ್ದಾರೆ. ಈ ಫೋಟೋದಲ್ಲಿ ಧನ್ವಿರ್, ದರ್ಶನ್ ಕುಟುಂಬದೊಂದಿಗೆ ಸಂತೋಷದ ಕ್ಷಣವನ್ನು ಹಂಚಿಕೊಂಡಿರುವುದನ್ನು ಕಾಣಬಹುದು.
ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಧನ್ವಿರ್ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ: “ಕಾರಣಾಂತರಗಳಿಂದ ಈ ವರ್ಷ ನಿಮಗೆ ಸಿಗೋಕೆ ಆಗ್ತಿಲ್ಲ. ದಯವಿಟ್ಟು ಮನೆ ಬಳಿ ಬಾರದೇ ಹಾರೈಸಿ. ಮುಂದಿನ ವರ್ಷದ ಹುಟ್ಟುಹಬ್ಬಕ್ಕೆ ಖಂಡಿತಾ ಸಿಗ್ತೀನಿ,” ಎಂದು ಬರೆದುಕೊಂಡಿರುವ ಧನ್ವಿರ್ ಅವರ ಪೋಸ್ಟ್ ಅಭಿಮಾನಿಗಳ ಮನ ಮುಟ್ಟಿದೆ.
‘ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಧನ್ವಿರ್, ತಮ್ಮ ಸಹಜ ಅಭಿನಯ ಹಾಗೂ ನೈಜ ವ್ಯಕ್ತಿತ್ವದಿಂದಲೇ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಯುವ ಜನತೆಯಲ್ಲಿ ಅವರು ಅತ್ಯಂತ ಜನಪ್ರಿಯರಾಗಿದ್ದು, ಸಿಂಪಲ್ ಲುಕ್ ಮತ್ತು ಮ್ಯಾನರ್ಗಳಿಂದ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು #HappyBirthdayDhruvaDhannvir ಹ್ಯಾಷ್ಟ್ಯಾಗ್ ಟ್ರೆಂಡ್ ಮಾಡುತ್ತಾ ತಮ್ಮ ಹಾರೈಕೆಗಳನ್ನು ಹಂಚಿಕೊಂಡಿದ್ದಾರೆ. “ನಮ್ಮ ಸಿಂಪಲ್ ಸ್ಟಾರ್”, “ಯುವಕರ ಹೃದಯದ ಹೀರೋ” ಎಂದು ಅಭಿಮಾನಿಗಳು ಕಮೆಂಟ್ಗಳ ಮಳೆ ಸುರಿಸುತ್ತಿದ್ದಾರೆ.
ಈ ಬಾರಿಯ ಹುಟ್ಟುಹಬ್ಬವನ್ನು ಧನ್ವಿರ್ ಶಾಂತವಾಗಿ ಆಚರಿಸಿದರೂ, ಅಭಿಮಾನಿಗಳು, ಸಹ ಕಲಾವಿದರು ಹಾಗೂ ಚಿತ್ರರಂಗದ ಗಣ್ಯರಿಂದ ಬಂದಿರುವ ಶುಭಾಶಯಗಳು ಅವರ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿವೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬದಿಂದ ಬಂದ ಶುಭಾಶಯಗಳು ಧನ್ವಿರ್ ಹುಟ್ಟುಹಬ್ಬದ ಸಂಭ್ರಮವನ್ನು ವಿಶೇಷವಾಗಿಸಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
