Back to Top

ದರ್ಶನ್‌ ಬಗ್ಗೆ ನಟ ಪ್ರಜ್ವಲ್‌ ದೇವರಾಜ್‌ ಕಣ್ಣೀರಿನ ಪ್ರತಿಕ್ರಿಯೆ! – “ಅವರು ನನಗೆ ಅಣ್ಣನಂತವರು!”

SSTV Profile Logo SStv September 5, 2025
ದರ್ಶನ್ ಬಗ್ಗೆ ಪ್ರಜ್ವಲ್ ದೇವರಾಜ್ ಭಾವುಕ ಪ್ರತಿಕ್ರಿಯೆ
ದರ್ಶನ್ ಬಗ್ಗೆ ಪ್ರಜ್ವಲ್ ದೇವರಾಜ್ ಭಾವುಕ ಪ್ರತಿಕ್ರಿಯೆ

ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನ ಉಂಟುಮಾಡಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇನ್ನೂ ಸುದ್ದಿಯಲ್ಲಿದೆ. ಈ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಪವಿತ್ರಾ ಗೌಡ ಸೇರಿ ಹಲವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಆರಂಭದಲ್ಲಿ ಕರ್ನಾಟಕ ಹೈಕೋರ್ಟ್‌ ಬೇಲ್‌ ನೀಡಿದ್ದರೂ, ಸುಪ್ರೀಂ ಕೋರ್ಟ್‌ ಅದನ್ನು ರದ್ದುಪಡಿಸಿದ್ದು, ದರ್ಶನ್‌ ಸೇರಿ ಇತರ ಆರೋಪಿಗಳು ಮತ್ತೆ ಜೈಲು ಸೇರಿದ್ಧಾರೆ. ಈ ಘಟನೆ ನಂತರ ಕನ್ನಡ ಸಿನಿ ತಾರೆಯರು ಭಾವುಕವಾಗಿ ಪ್ರತಿಕ್ರಿಯೆ ನೀಡುತ್ತಿರುವುದು ಕಂಡುಬಂದಿದೆ. ಇದೀಗ ನಟ ಪ್ರಜ್ವಲ್‌ ದೇವರಾಜ್ ದರ್ಶನ್‌ ಬಗ್ಗೆ ಹೃದಯಸ್ಪರ್ಶಿ ಹೇಳಿಕೆ ನೀಡಿದ್ದಾರೆ.

“ಅವರು ನನಗೆ ಅಣ್ಣನಂತವರು” ಪ್ರಜ್ವಲ್‌ ದೇವರಾಜ್, ಇತ್ತೀಚೆಗೆ ‘ಎಫ್‌ಡಿಎಫ್‌ಎಸ್‌’ ಕನ್ನಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್‌ ದೇವರಾಜ್ ಹೀಗೆ ಹೇಳಿದರು: “100% ಇದು ಎಮೋಷನಲ್‌. ಬರೀ ಒಬ್ಬ ಸ್ನೇಹಿತನಿಗೆ ಸಣ್ಣ-ಪುಟ್ಟ ತೊಂದರೆ ಆದರೂ ನಮಗೆ ನೋವಾಗುತ್ತದೆ. ಅಂತದರಲ್ಲಿ ಅವರು ನನಗೆ ಅಣ್ಣನ ತರಹ. ಎಷ್ಟು ವರ್ಷಗಳಿಂದ ಸಾಕಷ್ಟು ಸಮಯ ಕಳೆದಿದ್ದೇವೆ. ನಮ್ಮ ಮನೆಗೆ ಅಣ್ಣ ಎಷ್ಟು ಹತ್ತಿರ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅವರನ್ನ ನೋಡೋಕೆ ಆಗುತ್ತಿಲ್ಲ, ಭೇಟಿಯಾಗೋಕೆ ಸಾಧ್ಯವಾಗುತ್ತಿಲ್ಲ. ಅದೇ ತುಂಬಾ ಖಿನ್ನತೆಯನ್ನುಂಟು ಮಾಡುತ್ತಿದೆ. ಮತ್ತೆ ಅವರು ಜೈಲಿಗೆ ಹೋದಿರುವುದು ಬೇಜಾರಾಗುತ್ತಿದೆ” ಎಂದು ಪ್ರಜ್ವಲ್‌ ಹಂಚಿಕೊಂಡಿದ್ದಾರೆ.

ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಈಗ ಕುಟುಂಬ ಜವಾಬ್ದಾರಿಗಳ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಅವರ ಬಲಿಷ್ಠ ವ್ಯಕ್ತಿತ್ವವನ್ನು ಹೊಗಳಿದ ಪ್ರಜ್ವಲ್‌ ದೇವರಾಜ್ ಹೀಗೆಂದಿದ್ದಾರೆ: “ವಿಜಯಲಕ್ಷ್ಮಿ ಅವರಿಗೆ ವಿಶೇಷ ಬೆಂಬಲದ ಅಗತ್ಯವಿಲ್ಲ. ಅವರು ತುಂಬಾ ಸ್ಟ್ರಾಂಗ್‌ ಲೇಡಿ. ಎಷ್ಟು ಹೋರಾಟ ಮಾಡಿದ್ದಾರೆ ಅನ್ನೋದನ್ನು ಇಡೀ ಕರ್ನಾಟಕವೇ ಕಂಡಿದೆ. ಆದರೆ ಅವರಿಗೆ ಏನು ಬೇಕಾದರೂ ನಾವು ಯಾವಾಗಲೂ ಅವರ ಜೊತೆ ಇರುತ್ತೇವೆ” ಎಂದು ಹೇಳಿದ್ದಾರೆ.

ದರ್ಶನ್‌ ಜೈಲು ಸೇರಿದ್ದರಿಂದ ಅಭಿಮಾನಿಗಳಿಗೆ ನೋವಾದರೂ, ‘ದಿ ಡೆವಿಲ್‌’ ಚಿತ್ರದ ಪ್ರಚಾರ ಕಾರ್ಯದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ವಿಜಯಲಕ್ಷ್ಮಿ ಸೋಶಿಯಲ್‌ ಮೀಡಿಯಾ ಮೂಲಕ ಚಿತ್ರದ ಪ್ರಚಾರವನ್ನು ನಿರ್ವಹಿಸುತ್ತಾ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ದರ್ಶನ್‌ ವಿರುದ್ಧದ ಕಾನೂನು ಹೋರಾಟದ ನಡುವೆ, ಅವರ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳು ಅಚಲವಾದ ಬೆಂಬಲ ನೀಡುತ್ತಿದ್ದಾರೆ. ಚಿತ್ರರಂಗದ ಅನೇಕರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ, ದರ್ಶನ್‌ಗೆ ಬೆಂಬಲವಾಗಿ ನಿಂತಿದ್ದಾರೆ.

ದರ್ಶನ್‌ರ ಕಾನೂನು ಹೋರಾಟ ಇನ್ನೂ ಮುಂದುವರಿದಿದ್ದರೂ, ಅವರ ಮೇಲೆ ಅಭಿಮಾನಿಗಳ ಪ್ರೀತಿ ಮತ್ತು ಕುಟುಂಬದ ಬೆಂಬಲ ಯಾವತ್ತೂ ಕಡಿಮೆಯಾಗಿಲ್ಲ. ಪ್ರಜ್ವಲ್‌ ದೇವರಾಜ್ ಅವರ ಈ ಭಾವುಕ ಮಾತುಗಳು ದರ್ಶನ್‌ರೊಂದಿಗೆ ಅವರ ಆಳವಾದ ಸ್ನೇಹದ ನಂಟನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.