ಇಬ್ಬರು ಮಕ್ಕಳನ್ನ ಬಿಟ್ಟು ‘ಬಿಗ್ ಬಾಸ್’ ಮನೆಯಲ್ಲಿ ಕಾಲಿಟ್ಟ ಸಂಜನಾ ಗಲ್ರಾನಿ – ಕಾರಣವೇನು?


ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಮಿನುಗಿದ ನಟಿ ಸಂಜನಾ ಗಲ್ರಾನಿ, ವರ್ಷಗಳ ನಂತರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ನಟನೆಯ ಕಾರಣಕ್ಕಲ್ಲ, ‘ಬಿಗ್ ಬಾಸ್ ತೆಲುಗು 9’ ಶೋನಲ್ಲಿ ಸ್ಪರ್ಧಿಯಾಗಿರುವ ಕಾರಣಕ್ಕೆ ಚರ್ಚೆಯ ಕೇಂದ್ರವಾಗಿದ್ದಾರೆ. ಡ್ರಗ್ಸ್ ಪ್ರಕರಣದ ಗೊಂದಲಗಳಿಂದ ಹೊರಬಂದು, ಸಂಜನಾ ತಮ್ಮ ಜೀವನವನ್ನು ಹೊಸದಾಗಿ ಕಟ್ಟಿಕೊಂಡರು. ಡಾ. ಅಜೀಜ್ ಪಾಷಾ ಅವರನ್ನು ವಿವಾಹ ಮಾಡಿಕೊಂಡು, ಈಗ ಇಬ್ಬರು ಮುದ್ದು ಮಕ್ಕಳಾದ ಅಲಾರಿಕ್ ಪಾಷಾ ಮತ್ತು ಅಜೀನಾ ಪಾಷಾ ಅವರ ತಾಯಿಯಾಗಿದ್ದಾರೆ. ತಾಯ್ತನದಿಂದ ಜೀವನಕ್ಕೆ ಹೊಸ ಅರ್ಥ ಸಿಕ್ಕರೂ, ತಮ್ಮ ಕನಸುಗಳನ್ನು ಮುಂದುವರಿಸಬೇಕೆಂಬ ಉತ್ಸಾಹ ಅವರನ್ನು ಬಿಡಲಿಲ್ಲ.
ಸಂಜನಾ ಗಲ್ರಾನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೃದಯ ಸ್ಪರ್ಶಿಸುವ ಬರಹ ಬರೆದು, ‘ಬಿಗ್ ಬಾಸ್ ತೆಲುಗು 9’ ಶೋಗೆ ಹೋಗುವುದರ ಹಿಂದೆ ಇರುವ ನಿಜವನ್ನು ಹಂಚಿಕೊಂಡಿದ್ದಾರೆ.
ಅವರ ಮಾತುಗಳಲ್ಲಿ – “ನಾನು ಒಮ್ಮೆ ಸಿನಿಮಾ ತಾರೆಯಾಗಿ ಮಿನುಗಿದ್ದೆ. ಆದರೆ ಒಂದು ಪ್ರಕರಣದಿಂದ ನನ್ನ ಜೀವನದಲ್ಲಿ ದೊಡ್ಡ ಬಿರುಗಾಳಿ ಬಂತು. ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡೂ ಅಲ್ಲೋಲ ಕಲ್ಲೋಲವಾಯಿತು. ಆದರೆ ಪರಿಸ್ಥಿತಿಗೆ ಸೋಲದೇ ಸರ್ವೈವರ್ ಆಗಿದ್ದೇನೆ. ಈಗ ನನ್ನ ಕಥೆಯನ್ನು ಹೊಸದಾಗಿ ಬರೆಯಲು ಸಮಯ ಬಂದಿದೆ.” “ಬಿಗ್ ಬಾಸ್ ವೇದಿಕೆ ಕೇವಲ ಒಂದು ಶೋ ಅಲ್ಲ, ಇದು ನನ್ನ ಮನದ ಮಾತು, ನನ್ನ ಹೋರಾಟ, ನನ್ನ ತಾಳ್ಮೆ ಹಾಗೂ ಕುಗ್ಗದ ಮನೋಬಲವನ್ನು ಲಕ್ಷಾಂತರ ಜನರೊಂದಿಗೆ ಹಂಚಿಕೊಳ್ಳುವ ಅವಕಾಶ.”
“ಇದು ಇತರ ಮಹಿಳೆಯರಿಗೆ ಪ್ರೇರಣೆ ನೀಡಲಿ ಎನ್ನುವ ಆಶಯದಿಂದ ಈ ಪಯಣ ಆರಂಭಿಸಿದ್ದೇನೆ.” ಸಂಜನಾ ಗಲ್ರಾನಿ ತಮ್ಮ ಪತಿ ಡಾ. ಅಜೀಜ್ ಪಾಷಾ ಹಾಗೂ ಕುಟುಂಬಕ್ಕೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಅವರ ಮಾತಿನಲ್ಲಿ “ನಾನು ‘ಬಿಗ್ ಬಾಸ್’ ಮನೆಯಲ್ಲಿ ಇರುವಾಗ ನನ್ನ ಮಕ್ಕಳನ್ನು ನೋಡಿಕೊಳ್ಳಲು ಒಟ್ಟು 13 ಜನರು ಮನೆಯಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡಲಾಗಿದೆ. ನನ್ನ ಪತಿ, ಅತ್ತಿಗೆ-ನಾದಿನಿಯರು, ತಂದೆ-ತಾಯಿಯರು ಎಲ್ಲರ ಬೆಂಬಲವಿಲ್ಲದೆ ಈ ಪಯಣ ಸಾಧ್ಯವಾಗುತ್ತಿರಲಿಲ್ಲ.”
ಇದು ಸಂಜನಾಳ ಮೊದಲ ಅನುಭವವಲ್ಲ. ಅವರು ‘ಬಿಗ್ ಬಾಸ್ ಕನ್ನಡ 1’ ಶೋದಲ್ಲಿಯೂ ಸ್ಪರ್ಧಿಯಾಗಿದ್ದರು. ಆ ಸಮಯದಲ್ಲಿ ಶೋನ ಕಠಿಣ ನಿಯಮಗಳಿಂದ ಕಂಗಾಲಾಗಿ, ವೇದಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆ ಕಣ್ಣೀರು ಹಾಕಿದ ಘಟನೆ ಇಂದಿಗೂ ನೆನಪಾಗಿದೆ.
‘ಬಿಗ್ ಬಾಸ್ ತೆಲುಗು 9’ ಶೋ ಸಂಜನಾಳಿಗೆ ಕೇವಲ ರಿಯಾಲಿಟಿ ಶೋ ಅಲ್ಲ ಇದು ಅವರ ಹೊಸ ಜೀವನದ ಆರಂಭ. ತಾಯಿ, ಪತ್ನಿ ಮತ್ತು ನಟಿ ಎಂಬ ಹಲವು ಪಾತ್ರಗಳನ್ನು ಸಮತೋಲನಗೊಳಿಸುತ್ತಿರುವ ಸಂಜನಾ ಗಲ್ರಾನಿ, ಈ ಬಾರಿ ತಮ್ಮ ಅಂತರಂಗದ ನಿಜವಾದ ವ್ಯಕ್ತಿತ್ವವನ್ನು ಜನರಿಗೆ ತೋರಿಸಲು ಸಿದ್ಧರಾಗಿದ್ದಾರೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
