ಅಟ್ಲಿ–ಅಲ್ಲು ಅರ್ಜುನ್ ಸಿನಿಮಾಗೆ ವಿಎಫ್‌ಎಕ್ಸ್‌ಗೆ 350 ಕೋಟಿ ರೂ.? ಸದ್ಯದ ಅಚ್ಚರಿ ಸುದ್ದಿ!


ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ 'ಜವಾನ್' ಖ್ಯಾತಿಯ ಅಟ್ಲಿ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಈಗಲೇ ಸದ್ದು ಮಾಡತೊಡಗಿದೆ. ಸದ್ಯಕ್ಕೆ AA22*A6 ಎಂಬ ವರ್ಕಿಂಗ್ ಟೈಟಲ್‌ನಲ್ಲಿ ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರಕ್ಕೆ, ವಿಎಫ್‌ಎಕ್ಸ್‌ಗೆ 350-400 ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗಿದೆ!
ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರ, ಭಾರತದಲ್ಲಿ ಮೊದಲ ಬಾರಿಗೆ 'ಸೂಪರ್ ಮ್ಯಾನ್' ಥೀಮ್ ಆಧಾರಿತ ಬೃಹತ್ ಬಜೆಟ್ ಸಿನಿಮಾವಾಗಲಿದ್ದು, ಅಲ್ಲು ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆ ಮೂಡಿಸಿದೆ.
‘ಪುಷ್ಪಾ 2’ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ತಮ್ಮ ಮುಂದಿನ ಹೂಡಿಕೆಯನ್ನು ಅಟ್ಲಿ ಜೊತೆ ಕೈಜೋಡಿಸಿದ್ದಾರೆ. ಇತ್ತ ಅಟ್ಲಿಗೆ ಇದು ‘ಜವಾನ್’ ನಂತರದ ಬಿಗ್ ಥಿಯೇಟ್ರಿಕಲ್ ಪ್ರಯೋಗವಾಗಿದ್ದು, ಈ ಚಿತ್ರ ಅವರ 6ನೇ ನಿರ್ದೇಶನವಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
“ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ ಅವತ್ತು ನಾನು ಬದುಕಿರೋದಿಲ್ಲ” – ಎಸ್. ನಾರಾಯಣ್ ಭಾವನಾತ್ಮಕ ಪ್ರತಿಕ್ರಿಯೆ
