ʻಬಿಗ್ ಬಾಸ್ʼ ಜೋಡಿ ದಿವ್ಯಾ-ಅರವಿಂದ್ ಮದುವೆ ಯಾವಾಗ? ನಟಿ ಕೊಟ್ಟ ಕ್ಲಿಯರ್ ಉತ್ತರ!


ಕನ್ನಡದ ಜನಪ್ರಿಯ ಕಿರುತೆರೆ ಹಾಗೂ ಚಿತ್ರರಂಗದ ನಟಿ ದಿವ್ಯಾ ಉರುಡುಗ ಮತ್ತು ಬೈಕ್ ರೇಸರ್ ಅರವಿಂದ್ ಕೆಪಿ – ಇವರ ಹೆಸರುಗಳನ್ನು ಕೇಳಿದರೆ ಅಭಿಮಾನಿಗಳಿಗೆ ಮೊದಲು ನೆನಪಾಗೋದು ‘ಬಿಗ್ ಬಾಸ್ ಕನ್ನಡ ಸೀಸನ್ 8’. ಆ ಶೋನಲ್ಲಿ ಇವರ ಸ್ನೇಹ ಪ್ರೀತಿಯಾಗಿ ಅರಳಿ, ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿತ್ತು. ಅದರಿಂದ ಇಂದಿಗೂ ಇವರಿಬ್ಬರ ಮದುವೆ ಕುರಿತ ಚರ್ಚೆಗಳು ನಿರಂತರ. ಆದರೆ ದಿವ್ಯಾ ಉರುಡುಗ ತಮ್ಮ ಮದುವೆ ಕುರಿತು ಕೇಳಲಾಗುವ ಪ್ರಶ್ನೆಗೆ ಈ ಬಾರಿ ಸ್ಪಷ್ಟ ಉತ್ತರ ನೀಡಿದ್ದಾರೆ.
ಮದುವೆ ಪ್ರಶ್ನೆಗೆ ದಿವ್ಯಾ ಉರುಡುಗ ಪ್ರತಿಕ್ರಿಯೆ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಕೇಳಿದಾಗ ದಿವ್ಯಾ ಉರುಡುಗ ನಗುತ್ತಲೇ ಹೇಳಿದ್ದೇನಂದರೆ: “ನನಗೂ ಗೊತ್ತಿಲ್ಲ. ದಯವಿಟ್ಟು ನನಗೆ ಈ ಒಂದು ಪ್ರಶ್ನೆ ಮಾತ್ರ ಕೇಳಬೇಡಿ. ಆದಾಗ ನಿಮಗೆ ಖಂಡಿತಾ ಗೊತ್ತಾಗುತ್ತದೆ. ನಿಮ್ಮ ಕಣ್ಣು ತಪ್ಪಿಸಿ ಏನೂ ಮಾಡೋದಕ್ಕೆ ಆಗಲ್ಲ.” ಅಂದರೆ, ಮದುವೆ ವಿಷಯದಲ್ಲಿ ತಾವು ಮುಚ್ಚಿಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಿವ್ಯಾ ತಮ್ಮ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ – “ನನಗೆ ಬೇಕಾದ ಫ್ರೀಡಂ ಅನ್ನು ನನ್ನ ಅಪ್ಪ-ಅಮ್ಮ ಕೊಟ್ಟಿದ್ದಾರೆ. ಅವರು ತುಂಬಾ ಸಪೋರ್ಟಿವ್. ಮದುವೆ ಬಗ್ಗೆ ಯಾವುದೇ ರೀತಿಯ ಒತ್ತಡವನ್ನೂ ಹಾಕಿಲ್ಲ” ಎಂದು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿಯವರ ಒಂದು ಇನ್ವಿಟೇಷನ್ ಶೈಲಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದನ್ನು ನೋಡಿ ಅಭಿಮಾನಿಗಳು ಮದುವೆ ಕಾನ್ಫರ್ಮ್ ಅಂತ ಭಾವಿಸಿದ್ದರು.
ಆದರೆ ಇದರ ಬಗ್ಗೆ ಸ್ಪಷ್ಟನೆ ನೀಡಿದ ದಿವ್ಯಾ: “ಅದು ನಮ್ಮ ಸಿನಿಮಾದ ಡೇಟ್ ಅನೌನ್ಸ್ ಮಾಡುವ ಕ್ರಿಯೇಟಿವ್ ಪ್ಲ್ಯಾನ್. ಡೈರೆಕ್ಟರ್ ಐಡಿಯಾ. ಅದನ್ನು ಜನರು ಮದುವೆ ಇನ್ವಿಟೇಶನ್ ಅಂತ ಅರ್ಥ ಮಾಡಿಕೊಂಡರು. ಆದರೆ ಅದು ಹಾಗಲ್ಲ” ಎಂದು ಹೇಳಿದ್ದಾರೆ. ದಿವ್ಯಾ ಉರುಡುಗ ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯ “ನಿನಗಾಗಿ” ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ಅಭಿನಯದಿಂದ ಅವರು ಮನೆಮಾತಾಗಿದ್ದಾರೆ. ಇನ್ನು ಅರವಿಂದ್ ಕೆಪಿ, ಬೈಕ್ ರೇಸರ್ ಆಗಿದ್ದು, ‘ಬಿಗ್ ಬಾಸ್’ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ದಿವ್ಯಾ ಉರುಡುಗ–ಅರವಿಂದ್ ಕೆಪಿ ಮದುವೆ ಕುರಿತ ಸುದ್ದಿ ಅಭಿಮಾನಿಗಳಿಗೆ ಕುತೂಹಲದ ವಿಷಯವಾಗಿಯೇ ಉಳಿದಿದೆ. ಆದರೆ ದಿವ್ಯಾ ಸ್ಪಷ್ಟವಾಗಿ ಹೇಳಿದಂತೆ, ಮದುವೆ ವಿಷಯ ಬಂದರೆ ಅದನ್ನು ಅವರು ಲೂಕವಿಲ್ಲದೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಅವರ ಮಾತುಗಳಲ್ಲಿ ಕಂಡುಬಂದ ಒಂದು ಅಂಶ ಮಾತ್ರ ಖಚಿತ ಇದೀಗ ಮದುವೆ ಪ್ಲಾನ್ ಇಲ್ಲ, ಆದರೆ ಪ್ರೀತಿ ಮತ್ತು ಬೆಂಬಲದ ಜೊತೆ ತಮ್ಮ ಗುರಿಗಳತ್ತ ಮುನ್ನಡೆಯುತ್ತಿದ್ದಾರೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
