"ದೊಡ್ಡಮ್ಮ ಆದ್ರೂ ಸರಿ, ಪುಷ್ಪಮ್ಮ ಆದ್ರೂ ಸರಿ" – ಯಶ್ ತಾಯಿಗೆ ದೀಪಿಕಾ ದಾಸ್ ಖಡಕ್ ತಿರುಗೇಟು!


ಕನ್ನಡದ ಕಿರುತೆರೆಯ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಫೇಮ್ ದೀಪಿಕಾ ದಾಸ್ ಮತ್ತು ರಾಕಿಂಗ್‌ಸ್ಟಾರ್ ಯಶ್ ತಾಯಿ ಪುಷ್ಪಾ ನಡುವಿನ ಮಾತಿನ ಚಕಮಕಿ ಇದೀಗ ದೊಡ್ಡ ಚರ್ಚೆಯ ವಿಷಯವಾಗಿದೆ.
ಇತ್ತೀಚೆಗೆ ಕೊತ್ತಲವಾಡಿ ಸಿನೆಮಾ ಸಂದರ್ಶನದಲ್ಲಿ ಪುಷ್ಪಾ, ದೀಪಿಕಾ ದಾಸ್ ಬಗ್ಗೆ ಕೇಳಿದ ಪ್ರಶ್ನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. “ದೀಪಿಕಾ ಯಾವ ದೊಡ್ಡ ಹೀರೋಯಿನ್? ಯಾವ ಸಾಧನೆ ಮಾಡಿದಾಳೆ? ನಮ್ಮ ಸಂಬಂಧ ಇದ್ದರೂ ದೂರವೇ ಇಟ್ಟಿದ್ದೇವೆ” ಎಂದು ಹೇಳಿಕೆಯನ್ನು ನೀಡಿದ್ದರು. ಈ ವೀಡಿಯೋ ಸದ್ಯ ವೈರಲ್ ಆಗಿದೆ.
ಈ ಹೇಳಿಕೆಗೆ ದೀಪಿಕಾ ದಾಸ್ ನೇರ ತಿರುಗೇಟು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಅವರು,
“ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಹಕ್ಕು ಯಾರಿಗೂ ಇಲ್ಲ. ಅದು ಅಮ್ಮ ಆಗಿರಲಿ, ದೊಡ್ಡಮ್ಮ ಆಗಿರಲಿ ಅಥವಾ ಪುಷ್ಪಮ್ಮ ಆಗಿರಲಿ. ನಾನು ಯಾವತ್ತೂ ಯಾರ ಹೆಸರಿಗೆ ಅಂಟಿಕೊಂಡು ಬಂದಿಲ್ಲ. ಕೆಲವರು ಬೆಲೆ ಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ” ಎಂದು ದಾಖಲಿಸಿದ್ದಾರೆ.
ಹೀಗಾಗಿ, ಕುಟುಂಬ ಸಂಬಂಧಕ್ಕಿಂತಲೂ ಬೇರೆ ಬಗೆಯ ಅಸಮಾಧಾನಗಳು ಇಬ್ಬರ ನಡುವೆ ಹೆಚ್ಚಾಗಿವೆ ಎನ್ನುವ ಮಾತುಗಳು ಇದೀಗ ಕಲಾವಿದರ ವಲಯದಲ್ಲಿ ಹರಡುತ್ತಿವೆ.
ಯಶ್ ಅಮ್ಮ ಪುಷ್ಪಾ – ದೀಪಿಕಾ ದಾಸ್ ನಡುವಿನ ಈ ಸೈಲೆಂಟ್ ಕೋಲ್ಡ್ ವಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
