Back to Top

ಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಹೊಸ ಪ್ರಯತ್ನ... ಶುಭಾಶಯ ಆಲ್ಬಂ ಸಾಂಗ್‌ನಲ್ಲಿ‌ ಮಿಂಚಿದ ಪೃಥ್ವಿ-ಅಂಜಲಿ

SSTV Profile Logo SStv September 11, 2025
ನಾಗಾರ್ಜುನ್ ಶರ್ಮಾ ಸಾಹಿತ್ಯದ  ಶುಭಾಶಯ ಆಲ್ಬಂ ಸಾಂಗ್ ರಿಲೀಸ್
ನಾಗಾರ್ಜುನ್ ಶರ್ಮಾ ಸಾಹಿತ್ಯದ ಶುಭಾಶಯ ಆಲ್ಬಂ ಸಾಂಗ್ ರಿಲೀಸ್

ಕನ್ನಡ ಚಿತ್ರರಂಗದ ಟ್ರೆಂಡಿಂಗ್ ಚಿತ್ರ ಸಾಹಿತಿ‌ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿರುವ ಹೊಸ ಆಲ್ಬಂ ಗೀತೆ ಅನಾವರಣಗೊಂಡಿದೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ದಂಪತಿ ಶುಭಾಶಯ ಎಂಬ ಆಲ್ಬಂ ಗೀತೆಯನ್ನು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಭಾಶಯ ಆಲ್ಬಂ ಹಾಡು ರಿಲೀಸ್ ಕಾರ್ಯಕ್ರಮ ಜರುಗಿತು.

ಹಾಡು ಬಿಡುಗಡೆ ಬಳಿಕ ತರುಣ್ ಸುಧೀರ್, ಸಾಂಗ್ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾ, ವೆಬ್ ಸಿರೀಸ್ ಹಾಗೂ ಆಲ್ಬಂ ಸಾಂಗ್ ಯಾವುದನ್ನು ಜನ ವಿಭಾಗ ಮಾಡಲ್ಲ ಎಲ್ಲವನ್ನೂ ಸ್ವೀಕರಿಸುತ್ತಾರೆ. ನಾರ್ತ್ ನಲ್ಲಿ ಆಲ್ಬಂ ಸಾಂಗ್ ನಲ್ಲಿ ಟಾಪ್ ಆಕ್ಟರ್ ನಟಿಸುತ್ತಾರೆ. ಪೃಥ್ವಿ ಹಾಗೂ ಅಂಜಲಿ ಆ ಟ್ರೆಂಡ್ ಇಲ್ಲಿ ಶುರು ಮಾಡಿದ್ದಾರೆ. ಮ್ಯೂಸಿಕ್ ಸೂಪರ್ ಆಗಿದೆ. ನಾಗಾರ್ಜುನ್ ಅದ್ಭುತ ಪ್ರತಿಭೆ. ಅವರಿಗೆ ಕೆಲಸದ ಮೇಲೆ ಡೆಡಿಕೇಷನ್ ಇದೆ. ಒಂದೊಳ್ಳೆ ಅದ್ಭುತ ಹಾಡು ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಸೋನಲ್, ಪ್ರತಿ ಶಾರ್ಟ್ ಪೇಂಟಿಂಗ್ ರೀತಿ ಕಾಣಿಸುತ್ತದೆ. ಕ್ಯಾಮೆರಾ ವರ್ಕ್ ಸಖತ್ ಆಗಿ ಮಾಡಿದ್ದಾರೆ. ಮುರುಗ ಮಾಸ್ಟರ್ ವಂಡರ್ ಫುಲ್ ಕೊರಿಯೋಗ್ರಫರ್. ಪೃಥ್ವಿ ಅಂಬರ್ ಮೊದಲ ಸಿನಿಮಾಗೆ ನಾನೇ ನಾಯಕಿ. ನಾನು ಒಳ್ಳೆ ಸ್ನೇಹಿತರು. ಒಟ್ಟಿಗೆ ಇಂಡಸ್ಟ್ರಿಯಲ್ಲಿ ಬೆಳೆದವು. ಅಂಜಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಶುಭಾಶಯ ಆಲ್ಬಂ ಸಾಂಗ್ ನಲ್ಲಿ ಪೇಂಟರ್ ಒಬ್ಬನ ಪ್ರೇಮಕಥೆಯನ್ನು ನಾಗಾರ್ಜುನ್ ಶರ್ಮಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪೃಥ್ವಿ ಅಂಬಾರ್ ಪೇಂಟರ್ ಆಗಿ, ಆತನ ಪ್ರೇಯಸಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. ಈ ಜೋಡಿ ಕೆಮಿಸ್ಟ್ರಿ ಹಾಡಿನಲ್ಲಿ ಮುದ್ದಾಗಿ ಕಾಣಿಸುತ್ತದೆ. ಶುಭಾಶಯ ಹಾಡು ಬಹಳ ಶ್ರೀಂಮತಿಕೆಯಿಂದ ಕೂಡಿದೆ. ವಿಷ್ಯುವಲ್ಸ್ ಕಣ್ಣಿಗೆ ಹಬ್ಬದಂತಿದೆ.

ಅವಳು ಹೋಗು ಅಂದಾಗಲೇ ಸತ್ತಿದ್ದೆ. ಈಗ ಪೂರ್ತಿ ಮಣ್ಣಾಗಿದ್ದೇನೆ. ಆದರೂ ಅವಳಿಗೆ ಕೋರಲು ಹೊರಟಿರುವೆ ಶುಭಾಶಯ‌ ಎಂದು ಶುರುವಾಗುವ ಹಾಡನ್ನು ಸಿನಿಮಾ ರೀತಿಯೇ ಸುಂದರವಾಗಿ ಚಿತ್ರೀಕರಣ ಮಾಡಲಾಗಿದೆ. ಚೆಂದ‌ದ ಸಾಹಿತ್ಯ,‌ಸೊಗಸಾದ ದೃಶ್ಯ ವೈಭೋಗ, ಕಲಾವಿದರ ಅಭಿನಯದ ಎಲ್ಲವೂ ಅಚ್ಚುಕಟ್ಟಾಗಿ ಇದೆ. 
ಟೈಟಲ್ ಹೇಳುವಂತೆ ತನ್ನ ಗರ್ಲ್ ಫ್ರೆಂಡ್ ಮದುವೆಗೆ ಹೋಗಿ ಪ್ರಿಯಕರ ಶುಭಾಶಯ ಕೋರುವುದೇ ಶುಭಾಶಯ ಆಲ್ಬಂ ಸಾಂಗ್ ಹೈಲೆಟ್.

ಜಸ್ಕರಣ್ ಸಿಂಗ್ ಶುಭಾಶಯ ಗೀತೆಗೆ ಧ್ವನಿಯಾಗಿದ್ದು, ಜೋ ಕೋಸ್ಟಾ ಸಂಗೀತ ಹಾಡಿನ ಅಂದ ಹೆಚ್ಚಿಸಿದೆ. ವೈಷ್ಣವಿ ಫಿಲ್ಮಂಸ್ ಬ್ಯಾನರ್ ಈ ಆಲ್ಬಂ ಹಾಡನ್ನು ನಿರ್ಮಿಸಿದ್ದು, ಸುಪ್ರಿಯಾ ಬೋರೇಗೌಡ ಸಹ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ವೈಷ್ಣವಿ ಫಿಲ್ಮಂಸ್ ಯೂಟ್ಯೂಬ್ ನಲ್ಲಿ ಶುಭಾಶಯ ಆಲ್ಬಂ ಸಾಂಗ್ ವೀಕ್ಷಣೆಗೆ ಲಭ್ಯವಿದೆ.