ಶಿವಕಾರ್ತಿಕೇಯನ್ ನಟನೆಯ ಮದರಾಸಿ ಟ್ರೇಲರ್ ರಿಲೀಸ್; ಮಾಸ್ ಲುಕ್ ನಲ್ಲಿ ಅಬ್ಬರಿಸಿದ ಅಮರನ್ ಹೀರೋ


ಅಮರನ್ ಸೂಪರ್ ಸಕ್ಸಸ್ ಬಳಿಕ ಶಿವಕಾರ್ತಿಕೇಯನ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಮದರಾಸಿ. ಎ ಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಆಕ್ಷನ್ ಪ್ಯಾಕ್ಡ್ ಟ್ರೇಲರ್ ನಲ್ಲಿ ಶಿವಕಾರ್ತಿಕೇಯನ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಉದ್ದಕ್ಕೂ ಬಂದೂಕು ಮತ್ತು ಸ್ಫೋಟ ಸದ್ದೇ ಜೋರಾಗಿದೆ. ಕನ್ನಡತಿ ರುಕ್ಮಿಣಿ ವಸಂತ ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ಸಾಥ್ ಕೊಟ್ಟಿದ್ದಾರೆ.
ಪ್ರೀತಿ ಜೊತೆ ದ್ವೇಷ, ಪ್ರತೀಕಾರದ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಕನ್ನಡದಲ್ಲಿಯೂ ಟ್ರೇಲರ್ ಬಿಡುಗಡೆಯಾಗಿದೆ. ವಿದ್ಯುತ್ ಜಮ್ವಾಲ್, ಬಿಜು ಮೆನನ್, ಶಬೀರ್ ಕಲ್ಲರಕ್ಕಲ್, ವಿಕ್ರಾಂತ್ ತಾರಾಬಳಗದಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.
ಶ್ರೀ ಲಕ್ಷ್ಮೀ ಮೂವೀಸ್ ನಿರ್ಮಾಣದ ಮದರಾಸಿ ಸಿನಿಮಾಗೆ ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್, ಸುದೀಪ್ ಎಲಾಮನ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸೆಪ್ಟೆಂಬರ್ 5ರಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
