ಶಿವರಾಜ್‌ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು, ಇಲ್ಲಿದೆ ವಿಡಿಯೋ


ಕನ್ನಡ ಚಿತ್ರರಂಗದಲ್ಲಿ ಹಲವಾರು ವಿವಾದಗಳಿಂದ ಸುದ್ದಿಯಾಗಿದ್ದ ಮಡೆನೂರು ಮನು, ಇದೀಗ ನಟ ಡಾ. ಶಿವರಾಜ್‌ಕುಮಾರ್ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿರುವ ಘಟನೆ ನಡೆದಿದೆ.
ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸಿ ಜೈಲು ಜೀವನ ಅನುಭವಿಸಿದ್ದ ಮನು, ಬಂಧನದ ನಂತರ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಅವಹೇಳನಕಾರಿ ಮಾತು ಆಡಿದ ಆಡಿಯೋ ವೈರಲ್ ಆಗಿತ್ತು. ಇದರಿಂದ ರಾಜ್ ಕುಟುಂಬ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರಿಂದ ಪಶ್ಚಾತ್ತಾಪಗೊಂಡ ಮನು, ಇಂದು ಕಂಠೀರವ ಸ್ಟುಡಿಯೋ ಬಳಿ ಶಿವಣ್ಣ ಕಾರಿನಿಂದ ಇಳಿಯುತ್ತಿದ್ದಾಗ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಅದೇ ವೇಳೆ, "ಕುಲದಲ್ಲಿ ಕೀಳ್ಯಾವುದೋ" ಸಿನಿಮಾವನ್ನು ರೀ-ರಿಲೀಸ್ ಮಾಡಲು ಒಪ್ಪಿಗೆ ಕೇಳಿದ ಮನುಗೆ, ಶಿವಣ್ಣ ಸಹ ಹಸಿವು ತೋರಿಸಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
