Back to Top

ಕಿಚ್ಚ ಸುದೀಪ್​ ತಾಯಿ ನಿಧನ ಸಾನ್ವಿ ಸುದೀಪ್​ ಬೇಸರ

SSTV Profile Logo SStv October 21, 2024
ಸಾನ್ವಿ ಸುದೀಪ್​ ಬೇಸರ
ಸಾನ್ವಿ ಸುದೀಪ್​ ಬೇಸರ
ಕಿಚ್ಚ ಸುದೀಪ್​ ತಾಯಿ ನಿಧನ ಸಾನ್ವಿ ಸುದೀಪ್​ ಬೇಸರ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರ ನಿಧನದಿಂದ ಕುಟುಂಬ ದುಃಖದಲ್ಲಿದೆ. ಈ ದುಃಖದ ಸಂದರ್ಭದಲ್ಲಿಯೂ, ಸುದೀಪ್ ಮನೆ ಮುಂದೆ ಜಮಾಯಿಸಿದ್ದ ಜನರ ಅತಿರೇಕದ ವರ್ತನೆಗೆ ಅವರ ಮಗಳು ಸಾನ್ವಿ ಸುದೀಪ್​ ಬೇಸರ ವ್ಯಕ್ತಪಡಿಸಿದ್ದಾರೆ. ಸಾನ್ವಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​​ ಮೂಲಕ, ಫೋಟೋ, ವಿಡಿಯೋಗಳಿಗಾಗಿ ಕೆಲವರು ತೋರಿದ ಅಸಹನೀಯ ವರ್ತನೆ ಬಗ್ಗೆ ತಮ್ಮ ಅಸಮಾಧಾನ ಹಂಚಿಕೊಂಡಿದ್ದಾರೆ. "ಸಾವಿನ ಮನೆಯಲ್ಲೂ ಕೂಗಾಟ, ಚೀರಾಟ ಬೇಕಾ?" ಎಂದು ಅವರು ಪ್ರಶ್ನಿಸಿದ್ದಾರೆ. ತನ್ನ ತಂದೆ ಕಣ್ಣೀರು ಹಾಕುತ್ತಿರುವಾಗ ಕೆಲವರು ಮಾನವೀಯತೆಯೇ ಮರೆತು ವರ್ತಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸುದೀಪ್ ತಾಯಿ ಸರೋಜಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಅನೇಕ ಗಣ್ಯರು ಮತ್ತು ಅಭಿಮಾನಿಗಳು ಸೇರಿದ್ದರು.