"ದೀಪಿಕಾ ದಾಸ್ ಇನ್ನೂ ಚಿಕ್ಕವಳು" – ದೀಪಿಕಾ ದಾಸ್ ಹೇಳಿಕೆಗೆ ಪುಷ್ಪಾ ಪ್ರತಿಕ್ರಿಯೆ


ಕನ್ನಡ ಚಿತ್ರರಂಗದಲ್ಲಿ ಇದೀಗ ಪುಷ್ಪಾ vs ದೀಪಿಕಾ ದಾಸ್ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ಯಶ್ ತಾಯಿ ಪುಷ್ಪಾ ಹಾಗೂ ನಟಿ ದೀಪಿಕಾ ದಾಸ್ ನಡುವೆ ನಡೆದ ಮಾತಿನ ಚಕಮಕಿ ಅಭಿಮಾನಿಗಳ ಗಮನ ಸೆಳೆದಿದೆ. ಇದಕ್ಕೆ ಕಾರಣ, ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಪುಷ್ಪಾ. ಅವರು ದೀಪಿಕಾ ಬಗ್ಗೆ ನೇರವಾಗಿ ಮಾತನಾಡಿ, “ದೀಪಿಕಾ ಇನ್ನೂ ಏನನ್ನೂ ಸಾಧಿಸಿಲ್ಲ. ನಾನು ಅವಳನ್ನು ದೂರವೇ ಇಟ್ಟಿದ್ದೇನೆ” ಎಂದು ಹೇಳಿದ್ದರು. ಈ ಮಾತುಗಳು ದೀಪಿಕಾಗೆ ಕಿವಿಗೂ ಬಿದ್ದವು.
ದೀಪಿಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, “ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಬೆಳೆಸುವವರು ಬೇರೆ ಕಲಾವಿದರಿಗೆ ಗೌರವ ಕೊಡೋದನ್ನ ಕಲಿತಿರಬೇಕು” ಎಂದು ತಿರುಗೇಟು ನೀಡಿದರು.
ಅಷ್ಟೇ ಅಲ್ಲದೆ, “ಕೆಲವರಿಗೆ ಬೆಲೆ ಕೊಟ್ಟರೆ ಅದೇ ಭಯ ಅರ್ಥವಲ್ಲ. ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ – ಯಾರಿಗೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಹಕ್ಕು ಇಲ್ಲ” ಎಂದು ಎಚ್ಚರಿಸಿದರು.
ಪುಷ್ಪಾ ಮೃದುವಾದ ಪ್ರತಿಕ್ರಿಯೆ, ಈ ಎಲ್ಲ ಹೇಳಿಕೆಗಳ ನಂತರ, ಪುಷ್ಪಾ ಅವರು ಮಾತನಾಡಿ, “ದೀಪಿಕಾ ದಾಸ್ ಇನ್ನೂ ಚಿಕ್ಕವಳು. ಈ ಘಟನೆ ಬಗ್ಗೆ ನಾನು ಈಗಲೇ ಮಾತನಾಡುವುದಿಲ್ಲ” ಎಂದು ಸಮಾಧಾನಕರ ಪ್ರತಿಕ್ರಿಯೆ ನೀಡಿದ್ದಾರೆ.
ಇದೀಗ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ‘ಪುಷ್ಪಾ vs ದೀಪಿಕಾ’ ಜಗಳಕ್ಕೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
