Back to Top

“ಇದರ ಮೇಲೆ ಮತ್ತೇ ಮಾತಾಡಲ್ಲ” – ದೊಡ್ಡಮ್ಮನಿಗೆ ಸೋಶಿಯಲ್ ಮೀಡಿಯಾದಲ್ಲೇ ನೇರ ಮೆಸೇಜ್ ಕೊಟ್ಟ ದೀಪಿಕಾ!

SSTV Profile Logo SStv August 25, 2025
ಪುಷ್ಪಾ ಹೇಳಿಕೆಗೆ ಮತ್ತೆ ತಿರುಗೇಟು ನೀಡಿದ ದೀಪಿಕಾ ದಾಸ್!
ಪುಷ್ಪಾ ಹೇಳಿಕೆಗೆ ಮತ್ತೆ ತಿರುಗೇಟು ನೀಡಿದ ದೀಪಿಕಾ ದಾಸ್!

ಕನ್ನಡ ಚಿತ್ರರಂಗದಲ್ಲಿ ಇದೀಗ ಯಶ್ ತಾಯಿ ಪುಷ್ಪ ಅರುಣ್‌ಕುಮಾರ್ ಮತ್ತು ನಟಿ ದೀಪಿಕಾ ದಾಸ್ ನಡುವಿನ ಮಾತಿನ ಕದನವೇ ಚರ್ಚೆಯ ವಿಷಯವಾಗಿದೆ. ‘ಕೊತ್ತಲವಾಡಿ’ ಚಿತ್ರದ ನಿರ್ಮಾಪಕಿ ಆಗಿ ಸಿನಿಮಾ ಲೋಕಕ್ಕೆ ಕಾಲಿಟ್ಟ ಯಶ್ ತಾಯಿ ಪುಷ್ಪ, ಒಂದು ಸಂದರ್ಶನದಲ್ಲಿ ತಮ್ಮ ತಂಗಿಯ ಮಗಳು ದೀಪಿಕಾ ದಾಸ್ ಬಗ್ಗೆ ಲಘುವಾಗಿ ಮಾತನಾಡಿದ್ದರು. ಈ ಹೇಳಿಕೆ ದೀಪಿಕಾಗೆ ನಾಚಿಕೆ ಹಾಗೂ ಕೋಪ ತಂದಿತು.

ದೀಪಿಕಾ ದಾಸ್ ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ,
 “ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಅವರನ್ನ ಕಂಡರೆ ಭಯ ಇಲ್ಲ. ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ” ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಇದಾದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಪುಷ್ಪ ಅವರ ಆಡಿಯೋ ಕ್ಲಿಪ್ ವೈರಲ್ ಆಯಿತು. ಅದರಲ್ಲಿ ಅವರು “ಸತ್ಯ ಮಾತನಾಡಿದ್ದಕ್ಕೆ ಅವರಿಗೆ ಕೋಪ ಬಂದಿದೆ. ಅವರನ್ನ ಮೀಟ್ ಮಾಡಿ ಮಾತನಾಡ್ತೀನಿ” ಎಂದಿದ್ದರು. ಈ ಮಾತು ಮತ್ತೆ ದೀಪಿಕಾ ದಾಸ್ ಕೋಪಕ್ಕೆ ಕಾರಣವಾಯಿತು.

ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಪುನಃ ಬರಹ ಬರೆದು “ನಮ್ಮ ಹತ್ರ ಯಾರೂ ಬರೋ ಅವಶ್ಯಕತೆ ಇಲ್ಲ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬಿಡಿ. ಅನಾವಶ್ಯಕವಾಗಿ ನಮ್ಮ ಕುಟುಂಬವನ್ನು ತರಬೇಡಿ. ಇನ್ನು ಇದರ ಮೇಲೆ ನಾನು ಮಾತಾಡೋಕೆ ಇಷ್ಟಪಡಲ್ಲ” ಎಂದು ಪರೋಕ್ಷವಾಗಿ ದೊಡ್ಡಮ್ಮ ಪುಷ್ಪ ಅವರತ್ತ ತಿರುಗಿ ಹೊಡೆದರು.

ಈ ಮಾತಿನ ಹೊಡೆತ ಈಗ ಫ್ಯಾಮಿಲಿ ಪರ್ಸನಲ್ ವಿಷಯವೋ ಅಥವಾ ಸಿನಿಮಾ ಪ್ರಚಾರದ ಭಾಗವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಒಂದು ಮಾತು ಖಚಿತ ಸೋಶಿಯಲ್ ಮೀಡಿಯಾದಲ್ಲಿ ಪುಷ್ಪ-ದೀಪಿಕಾ ದಾಸ್ ಮಾತಿನ ಯುದ್ಧ ಭಾರಿ ಟ್ರೆಂಡಿಂಗ್ ಆಗಿದೆ.